22nd December 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕು, ಕುರುಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲತಾಳುವಿನಲ್ಲಿರುವ ಡಾ.ಸಿದ್ದಗಂಗಯ್ಯನವರ ಜಮೀನಿನಲ್ಲಿರುವ ದಿನಾಂಕ:21.06.2022 ನೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ, ತಲಪುರಿಕೆಗೆ ಪೂಜೆ ಸಲ್ಲಿಸುವ ಮೂಲಕ, ತುಮಕೂರು ಜಿಲ್ಲೆಯಲ್ಲಿರುವ ತಲಪುರಿಕೆಗಳ ಸಂಶೋಧನೆ ಮಾಡಿವರುವವರ, ತುಮಕೂರು ಜಿಲ್ಲೆಯಲ್ಲಿ  ಹುಟ್ಟುವ ನದಿಗಳಾದ ಶಿಂಷಾ, ನಾಗಿಣಿ, ಸುವರ್ಣಮುಖಿ, ಗರುಡಾಚಲ, ಜಯಮಂಗಲಿ, ಉತ್ತರ ಪೆನ್ನಾರ್ ನದಿಗಳ ಸಂಶೋಧನೆ ಮಾಡಿವರುವವರ ಮತ್ತು ಸಂಶೋಧನೆ ಮಾಡಲು ಉದ್ದೇಶಿರುವವರ ಪೂರ್ವಭಾವಿ ಸಭೆ ಮತ್ತು ಸಂಶೋಧನಾ ಆರಂಭೋತ್ಸವ ಸಭೆಯನ್ನು ನಡೆಸಲಾಗುವುದು.

   ಸಂಸದರ ಆದರ್ಶ ಗ್ರಾಮ ಪಂಚಾಯಿತಿಯಾಗಿ, ಕುರುಂಕೋಟೆ ಗ್ರಾಮ ಪಂಚಾಯಿತಿಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆ ಮಾಡಿಕೊಂಡಿದ್ದಾರೆ.

  ತಲಪುರಿಕೆ, ನದಿ ಉಗಮವಾಗುವ ಹಾಗೂ ತುಮಕೂರು ಜಿಲ್ಲೆಯ ಮೂರು ನದಿ ಪಾತ್ರಗಳಾದ ಕಾವೇರಿ, ಕೃಷ್ಣಾ, ಮತ್ತು ಉತ್ತರ ಪೆನ್ನಾರ್ ಮೂರು ನದಿ ಪಾತ್ರಗಳು ಇರುವ ಗ್ರಾಮಪಂಚಾಯಿತಿಯಲ್ಲಿ, ಒಂದು ತಲಪುರಿಕೆಯ ಬಳಿ ಸಭೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ.

  ಸಂಸದರ ಆದರ್ಶ ಗ್ರಾಮ ಪಂಚಾಯಿತಿ ಸಭೆಯ ಅಧ್ಯಕ್ಷತೆಯನ್ನು ಸಂಸದರ ಆದರ್ಶ ಗ್ರಾಮ ಸಭೆಯ ನಾಯಕತ್ವ ವಹಿಸಿರುವ ಶ್ರೀ ಜಿ.ಎಸ್.ಬಸವರಾಜ್‍ರವರ ಅಧ್ಯಕ್ಷತೆಯಲ್ಲಿ ನಡೆಸಬೇಕೋ, ಕೊರಟಗೆರೆ ಕ್ಷೇತ್ರದ ಶಾಸಕರಾದ ಶ್ರೀ ಡಾ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ನಡೆಸಬೇಕೋ ಅಥವಾ ಕುರುಂ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಶೈಲಜ ರವರ ಅಧ್ಯಕ್ಷತೆಯಲ್ಲಿ ನಡೆಸಬೇಕೋ ಎಂಬ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಸದರ ಆದರ್ಶ ಗ್ರಾಮ ಪಂಚಾಯಿತಿಯ ನೋಡೆಲ್ ಆಫೀಸರ್ ತೀರ್ಮಾನ ಕೈಗೊಂಡು ಸಭೆಯನ್ನು ಆಯೋಜಿಸ ಬೇಕಿದೆ.

 ‘ಅಟಲ್ ಭೂಜಲ್ ಯೋಜನೆ, ಅಂತರ್ಜಲ ಮರುಪೂರಣ ಮತ್ತು ಜಲಶಕ್ತಿ ಅಭಿಯಾನ ಯೋಜನೆಗೆ ರೂಪುರೇಷೆ ನಿರ್ಧರಿಸಲು, ಕೇಂದ್ರ ಜಲಶಕ್ತಿ ಸಚಿವಾಲಯದ   CONSULTATIVE COMMITTEE FOR THE MINISTRY OF JAL SHAKTHI  ಸಮಿತಿಯ ಸಭೆಯು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ:30.06.2022 ಮತ್ತು 01.07.2022 ರಂದು ಬೆಂಗಳೂರು/ಮೈಸೂರಿನಲ್ಲಿ  ನಡೆಯುವ ಹಿನ್ನಲೆಯಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಂಸದರ ಆದರ್ಶ ಗ್ರಾಮ ಪಂಚಾಯಿತಿ ಅಡಿಯಲ್ಲಿ, ಈ ಕಾರ್ಯಕ್ರಮವನ್ನು ತುರ್ತಾಗಿ ಆಯೋಜಿಸಲು ಸೂಚಿಸಿದ್ದಾರೆ.

ಈ ಸಭೆಯಲ್ಲಿ ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವÀ ಬಗ್ಗೆಯೂ, ಪೂರ್ವ ಭಾವಿಯಾಗಿ ಸಮಾಲೋಚನೆಯನ್ನು ಸಂಸÀದರು ನಡೆಸಲು ಉದ್ದೇಶಿದ್ದಾರೆ. ಈ ಸಭೆಯಲ್ಲಿ ಈ ಕೆಳಕಂಡ ಇಲಾಖೆಗಳು ಭಾಗವಹಿಸಲು ಸೂಚಿಸಿದ್ದಾರೆ.

  ಈಗಾಗಲೇ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯರಿಗೆ ಪತ್ರ ಬರೆದು, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಮತ್ತು ರಾಜ್ಯದ ನದಿ ಜೋಡಣೆ ಪೂರಕವಾಗಿ, ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಮನವಿ ಮಾಡಿರುವುದರಿಂz, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಸದರು ಚಿಂತನೆ ನಡೆಸಿದ್ದಾರೆ. 

ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆ ಪ್ರಮುಖ ಅಂಶಗಳು.

  1. ಕಾವೇರಿ ನದಿ ಪಾತ್ರದ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳು ಮತ್ತು ಅನುದಾನ.
  2. ಕೃಷ್ಣಾ ನದಿ ಪಾತ್ರದ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳು ಮತ್ತು ಅನುದಾನ.
  3. ಉತ್ತರ ಪೆನ್ನಾರ್ ನದಿ ಪಾತ್ರದ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳು ಮತ್ತು ಅನುದಾನ.
  4. ಸಣ್ಣ ನೀರಾವರಿ ಇಲಾಖೆಯಡಿ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೆರೆಗಳಿಗೆ ನದಿ ನೀರಿನ ಅಲೋಕೇಷನ್, ‘ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು’ ಯೋಜನೆಗೆ ಅಗತ್ಯವಿರುವ   11 ವಿಧಾನ ಸಭಾ ಕ್ಷೇತ್ರಗಳ  ವ್ಯಾಪ್ತಿಗೆ ನದಿ ನೀರಿನ ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ತುಂಗಾ ಭಧ್ರಾ ಮತ್ತು ಹೊಸ ನೀರಾವರಿ ಯೋಜನೆಗಳಿಂದ  ನದಿ ನೀರಿನ ಅಲೋಕೇóಷನ್  ಮತ್ತು ಅನುದಾನ.
  5. ಜಲಜೀವನ್ ಮಿಷನ್ ಯೋಜನೆಯಡಿ 11 ವಿಧಾನ ಸಭಾ ಕ್ಷೇತ್ರಗಳಿಗೆ, ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ತುಂಗಾ ಭಧ್ರಾ ಮತ್ತು ಹೊಸ ನೀರಾವರಿ ಯೋಜನೆಗಳಿಂದ  ನದಿ ನೀರಿನ ಅಲೋಕೇóಷನ್ ಮತ್ತು ಅನುದಾನ.
  6. ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಗೆ ಅಗತ್ಯವಿರುವ ಕೃಷಿ, ತೋಟಗಾರಿಕಾ, ರೇಷ್ಮೆ ಮತ್ತು ಅರಣ್ಯ ಕೃಷಿಗೆ ಅಗತ್ಯವಿರುವ ನದಿ ನೀರಿನ ಅಲೋಕೇಷನ್ ಮತ್ತು ಅನುದಾನ.
  7. ತುಮಕೂರು ಜಿಲ್ಲೆಯಲ್ಲಿರುವ ತಲಪುರಿಕೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  8. ತುಮಕೂರು ಜಿಲ್ಲೆಯಲ್ಲಿ ಉಗಮವಾಗುವ ನದಿಗಳ ಪುಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  9. ಅಟಲ್ ಭೂಜಲ್ ಯೋಜನೆಯ ಅಧ್ಯಯನದ ಪ್ರಕಾರ ತುಮಕೂರು ಜಿಲ್ಲೆಗೆ ಅಗತ್ಯವಿರುವÀ ಯೋಜನೆಗಳ ಅನುದಾನ.
  10. ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ಅನುದಾನ.
  11. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕರಾಬುಹಳ್ಳಗಳ ಮತ್ತು ರಾಜಕಾಲುವೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  12. ತುಮಕೂರು ಜಿಲ್ಲೆಯ 11 ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯ ಕರಾಬುಹಳ್ಳಗಳ ಮತ್ತು ರಾಜಕಾಲುವೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  13. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆ, ವಿವಿಧ ಜಲಸಂಗ್ರಹಾಗಾರಗಳ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  14. ತುಮಕೂರು ಜಿಲ್ಲೆಯ 11 ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯ ಕೆರೆ-ಕಟ್ಟೆ, ವಿವಿಧ ಜಲಸಂಗ್ರಹಾಗಾರಗಳ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ.
  15. ತುಮಕೂರು ಜಿಲ್ಲೆಯ 11 ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್-2 ಯೋಜನೆಯಡಿ ಕೈಗೊಳ್ಳ ಬೇಕಾಗಿರುವ ಯೋಜನೆಗಳಿಗೆ ಅಗತ್ಯವಿರುವ ಅನುದಾನ.
  16. ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ನದಿ ನೀರಿನ ಅಲೋಕೇಷನ್, ಕೊಳಚೆ ನೀರಿನ ಸಂಸ್ಕರಣೆ ಮತ್ತು ಅಗತ್ಯವಿರುವ ಅನುದಾನ.
  17. ತುಮಕೂರು ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿನ ಕಾಡು ಪ್ರಾಣಿಗಳ ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಿರುವ ಅನುದಾನ.
  18. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆ, ವಿವಿಧ ಜಲಸಂಗ್ರಹಾಗಾರಗಳು ಇಲ್ಲದೆ ಇರುವ ಸುಮಾರು 550 ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣ ಮಾಡುವ ಜಲಸಂಗ್ರಹಾಗಾರಗಳಿಗೆ ಅಗತ್ಯವಿರುವ ಅನುದಾನ.
  19. ತುಮಕೂರು ಜಿಲ್ಲೆಗೆ ಕೊಳಚೆ ನೀರು ಸಂಸ್ಕರಣೆ ಯೋಜನೆಗೆ ಅಗತ್ಯವಿರುವ ಅನುದಾನ.
  20. ತುಮಕೂರು ಜಿಲ್ಲೆಗೆ ಎಲ್ಲಾ ವಿಧವಾದ ಯೋಜನೆಗಳಿಗೆ ಅಗತ್ಯವಿರುವ ನದಿ ನೀರಿನ ಯೋಜನೆ ಮತ್ತು ಜಲಜೀವನ್ ಮಿಷನ್ ಕಾರಿಡಾರ್.
  21. ಭಧ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆ.
  22. ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆ.
  23. ನೇತ್ರಾವತಿ- ಹೇಮಾವತಿ ನದಿ ಜೋಡಣೆಗೆ ಬದಲಾಗಿ ಎತ್ತಿನಹೊಳೆ- ಕುಮಾರಧಾರ -ಬೆಟ್ಟಕುಮ್ರಿ-ಪಾಲಾರ್ ನದಿ ಜೋಡಣೆಗೆ ಜಾರಿ.
  24. ತುಮಕೂರು ಜಿಲ್ಲೆಯಲ್ಲಿ ವಾಟರ್ ಯೂನಿವರ್ಸಿಟಿ ಸ್ಥಾಪಿಸಲು ಅಗತ್ಯವಿರುವ ಜಮೀನು ಮತ್ತು ಅನುದಾನ.
  25. ಸಣ್ಣ ನೀರಾವರಿ ಇಲಾಖೆ ಅಧ್ಯಯನ ಮಾಡಲು ಉದ್ದೇಶಿರುವ ತುಮಕೂರು ಜಿಲ್ಲೆಯ ಅಂತರ್ಜಲ ಅಧ್ಯಯನಕ್ಕೆ ಅಗತ್ಯವಿರುವ ಅನುದಾನ.
  26. ಅಗತ್ಯವಿರುವ ಇತರೆ ಯೋಜನೆಗಳು.

ಈ ಮೇಲ್ಕಂಡ ಅಂಶಗಳಲ್ಲದೆ ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಸಲಹೆ ನೀಡಲು ಈ ಮೂಲಕ ಮನವಿ.

 ವಿಷಯವಾರು ಸಂಭಂಧಿಸಿದ ಎಲ್ಲಾ ಇಲಾಖೆಗಳು ಯೋಜನಾವಾರು ಪಿಪಿಟಿ ಸಿದ್ಧಪಡಿಸಿಕೊಳ್ಳುವುದು ಅಗತ್ಯವಾಗಿದೆ, ಈ ಹಿನ್ನಲೆಯಲ್ಲಿ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆ ಶಕ್ತಿಪೀಠ ಫೌಂಡೇಷನ್ ನಿರಂತರವಾಗಿ ಸಂಪರ್ಕದಲ್ಲಿದೆ.