20th April 2024
Share

TUMAKURU:SHAKTHIPEETA FOUNDATION

ಚಿಕ್ಕನಾಯಕನಹಳ್ಳಿ ತಾಲ್ಲೋಕು ಮತ್ತು ತಿಪಟೂರು ತಾಲ್ಲೋಕು ಕೆರೆಗಳಿಗೆ ಈಗಾಗಲೇ ಸಣ್ಣ ನೀರಾವರಿ ಇಲಾಖೆ, ನದಿ ನೀರಿನಿಂದ ನೀರು ತುಂಬಿಸಲು ಯೋಜನೆ ರೂಪಿಸಿದೆ, ಸರ್ಕಾರದಿಂದ ಆಡಳಿತ್ಮಾಕ ಅನುಮೋದನೆ ಪಡೆದಿದೆ.

ಇದೇ ರೀತಿ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರಿನ ಯೋಜನೆ ರೂಪಿಸಲು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳಿಗೆ ಸಲಹೆ ನೀಡಿದರು.

ಎಲ್ಲಾ ಕೆರೆಗಳಿಗೆ  ನದಿ ನೀರಿನಿಂದ ತುಂಬಿಸಲು ಕಡಿಮೆ ಆಗುವ  ನೀರನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.

ಚಿಕ್ಕನಾಯಕನಹಳ್ಳಿ ತಾಲ್ಲೋಕು ಮತ್ತು ತಿಪಟೂರು ತಾಲ್ಲೋಕು ಸೇರಿದಂತೆ ಪ್ರತಿಯೊಂದು ಗ್ರಾಮಗಳ ಕೆರೆಗಳಿಗೂ, ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳಲ್ಲಿ ಯಾವುದೇ ರೀತಿಯ ಜಲಸಂಗ್ರಹಾಗಾರ ನಿರ್ಮಾಣ ಮಾಡಿ ನದಿ ನೀರಿನ ಅಲೋಕೇóಷನ್ ಮಾಡಿಸೋಣ.

ಮಧುಗಿರಿ ಮತ್ತು ಕೊರಟಗೆರೆ ತಾಲ್ಲೋಕುಗಳ ನದಿ ನೀರಿನಿಂದ ಕೆರೆಗಳಿಗೆ ತುಂಬಿಸಲು, ಕುಣಿಗಲ್ ಭಾಗದ ಕೆರೆಗಳಿಗೂ ನದಿ ನೀರು ತುಂಬಿಸಲು, ಪಾವಗಡ ತಾಲ್ಲೋಕುಗಳ ಅಲೋಕೇಷನ್ ಆಗದೆ ಇರುವ ಕೆರೆಗಳಿಗೂ ಯೋಜನೆ ರೂಪಿಸಿ.

ಹೇಮಾವತಿ ಅಚ್ಚುಕಟ್ಟು ಪ್ರದೇಶಗಳ ಕೆರೆಗಳಿಗೂ ನೀರು ತುಂಬಿಸಲು ಯೋಜನೆ ರೂಪಿಸಬೇಕಿದೆ ಎಂದು ಸಲಹೆ ನೀಡಿದರು. ಶೇ 100 ರಷ್ಟು ನದಿ ನೀರು ತೊಂಬಿಸಲು ಯೋಜನೆ ರೂಪಿಸಿ, ಮಾನ್ಯ ಮುಖ್ಯಮಂತ್ರಿಯವರೇ ಎಷ್ಟು ಪ್ರಮಾಣದ ನೀರು ತುಂಬಿಸಬೇಕು ಎಂಬ ಬಗ್ಗೆ ಸಲಹೆ ನೀಡಲಿ.ಯಾವುದೇ ಕಾರಣಕ್ಕೂ ಒಂದು ಗ್ರಾಮವನ್ನು ಕೈ ಬಿಡಬೇಡಿ ಎಂದು ಸಲಹೆ ನೀಡಿದರು.

ಅವರು ದಿನಾಂಕ:21.06.2022 ರಂದು ತುಮಕೂರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಇಇ ಕಚೇರಿಯಲ್ಲಿ ಇಂಜಿನಿಯರ್ ಮತ್ತು ಸಲಹಾಗಾರರ ಜೊತೆ ಸಮಾಲೋಚನೆ ನಡೆಸಿದರು.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್   ಇಂಜಿನಿಯರಿಂಗ್ ಪ್ರಕಾರ ಯೋಜನೆ ರೂಪಿಸಿ, ರಾಜಕಾರಣಿಗಳು ತಮ್ಮ ಇಚ್ಚಾಶಕ್ತಿ ಪ್ರದರ್ಶಿಸಿ ನೀರಿನ ಯೋಜನೆ ರೂಪಿಸಲಿ ಎಂದು ಸಲಹೆ ನೀಡಿದರು.

ಎಲ್ಲಾ ನಿಖರವಾದ ಡಾಟಾಗಳನ್ನು ಮಾಹಿತಿ ಕಣಜ ಪೋರ್ಟಲ್ ಗೆ ಅಫ್ ಲೋಡ್ ಮಾಡಲು, ಜಿಐಎಸ್ ಲೇಯರ್ ಗಳನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಅಫ್ ಲೋಡ್ ಮಾಡಲು ಸಹಕರಿಸಿ ಎಂಬ ಸಲಹೆ ನೀಡಿದರು.