TUMAKURU:SHAKTHIPEETA FOUNDATION
ಸಣ್ಣ ನೀರಾವರಿ ಸಚಿವರಾದ ಶ್ರೀ ಮಾಧುಸ್ವಾಮಿರವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನದಿ ನೀರಿನ ಯೋಜನೆ ರೂಪಿಸಿ, ಕ್ಷೇತ್ರದ ಜನತೆಯ ಪಾಲಿಗೆ ‘ಜಲವೀರ’ ರಾಗಿದ್ದರಂತೆ, ನಾನು ಸಹ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಯೋಜನೆ ಬಗ್ಗೆ ನಾನು ಗಮನ ಹರಿಸಿಲ್ಲ, ಅದರ ಅಗತ್ಯತೆಯು ನನಗೆ ಈಗ ಇಲ್ಲ.
ಅದೇ ರೀತಿ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು ತಿಪಟೂರು ವಿಧಾನಸಭಾ ಕ್ಷೇತ್ರದ ಜನತೆಯ ಪಾಲಿಗೆ ‘ಜಲವೀರ’ ರಾಗಿದ್ದರಂತೆ, ನಾನು ಸಹ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಯೋಜನೆ ಬಗ್ಗೆ ನಾನು ಗಮನ ಹರಿಸಿಲ್ಲ, ಅದರ ಅಗತ್ಯತೆಯು ನನಗೆ ಈಗ ಇಲ್ಲ.
‘ಅವರಿಬ್ಬರಿಗೂ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಿಗೂ ಹೃದಯಪೂರ್ವಕ ಅಭಿನಂದನೆ ಹೇಳಲೇ ಬೇಕು. ಅವರ ಮನೆಗಳಿಗೆ ಹೋಗಿ ಹೇಳಿಬರಲು ತೀರ್ಮಾನಿಸಿದ್ದೇನೆ.’
ಉಳಿದ 9 ವಿಧಾನಸಭಾ ಕ್ಷೇತ್ರಗಳಲ್ಲಿನ ಕೆರೆಗಳಿಗೆ ನದಿ ನೀರು ತುಂಬಿಸಲು, ಸಣ್ಣ ನೀರಾವರಿ ಇಲಾಖೆ ಯೋಜನೆ ರೂಪಿಸಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ನಾನು ಇಂದು ನನ್ನ ಅನಿಸಿಕೆಗಳನ್ನು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿರವರಿಗೆ ಮನವರಿಕೆ ಮಾಡಿದ್ದೇನೆ.
ನಿನ್ನೆ(24.06.2022) ರಂದು ತುಮಕೂರಿನಲ್ಲಿ ನಡೆದ ‘ಉದ್ಯಮಿಯಾಗು ಉದ್ಯೋಗ ನೀಡು’ ಸಮಾವೇಶದಲ್ಲಿ ಧಾರವಾಡದ ಶ್ರೀ ಮಹೇಶ್ ಮಸಲಾರವರು ಹೇಳಿದ ಮಾತು ‘ತಲೆಯಲ್ಲಿ ಹುಚ್ಚು–ಎದೆಯಲ್ಲಿ ಕೆಚ್ಚು’ ನನಗೆ ಅಚ್ಚಳಿಯದೇ ಉಳಿದಿದೆ.
ಈ ಹಿನ್ನಲೆಯಲ್ಲಿ ‘ನನ್ನ ಹುಚ್ಚು ಮತ್ತು ನನ್ನ ಕಿಚ್ಚನ್ನು’ ಇಂದು ಹಲವಾರು ಇಂಜಿನಿಯರ್ ಗಳ ಮತ್ತು ಹಿರಿಯ ಐಎಎಸ್ ಅಧಿಕಾರಿಯವರ ಹಾಗೂ ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯರು ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮಕ್ಷಮದಲ್ಲಿ ಅವರಿಗೆ ಈ ಕೆಳಕಂಡ ರೀತಿ ಹೇಳಿ ಬಂದಿದ್ದೇನೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮತ್ತು ತಿಪಟೂರು ವಿಧಾನಸಭಾ ಕ್ಷೇತ್ರದ ಯೋಜನೆ ಜಾರಿ ಮಾಡಿರುವುದಕ್ಕೆ ತಮಗೆ ಅಭಿನಂದನೆ. ಅದೇ ಮಾದರಿಯಲ್ಲಿ ಉಳಿದ 9 ವಿಧಾನಸಭಾ ಕ್ಷೇತ್ರಗಳಿಗೂ ಪ್ರಸ್ತಾವನೆ ಸಿದ್ಧಪಡಿಸಿ, ಕೆಲವೇ ಭಾಗಗಳ ಕೆರೆಗಳಿಗೆ ನದಿ ನೀರಿನ ಯೋಜನೆ ರೂಪಿಸಿದರೆ, ನಾವು ಬೀದಿಗೀಳಿಯದೇ ಅನ್ಯ ಮಾರ್ಗವಿಲ್ಲ.
ನದಿ ನೀರಿನ ಅಲೋಕೇಷನ್ ಸಾಲದೆ ಇದ್ದಲ್ಲಿ, ಅದನ್ನು ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಮುಖ್ಯ ಮಂತ್ರಿಯವರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದರೇ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಮನಸ್ಸು ಗೆದ್ದು ಯೋಜನೆ ವiಂಜೂರು ಮಾಡಿಸುತ್ತಾರೆ.
ನೀವೂ ಪ್ರಸ್ತಾವನೆ ಸಿದ್ಧಪಡಿಸಿ, ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಂತರ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಂತರ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳgವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಂತರ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಮೂಲಕ ತುಮಕೂರು ಜಿಲ್ಲೆಯ ಜನರ ಪಾಲಿಗೆ ‘ಜಲ ಹೀರೋ’ ಅಗಲಿ ನಮ್ಮ ಮಾಧುಸ್ವಾಮಿರವರು.
ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರದಲ್ಲಿ ಮಂಜೂರು ಮಾಡಿಸುವ ಮೂಲಕ ಅವರು ತುಮಕೂರು ಜಿಲ್ಲೆಯ ಜನರ ಪಾಲಿಗೆ ‘ಜಲ ಹೀರೋ’ ಅಗಲಿ. ಇಬ್ಬರಿಗೂ ಜಿಲ್ಲೆಯ ಜನತೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ.
ಇಲ್ಲದೇ ಇದ್ದಲ್ಲಿ ತಲೆಯ ಹುಚ್ಚು ಮತ್ತು ಎದೆಯ ಕೆಚ್ಚಿಗೆ ಜಾಗೃತಿ ಮೂಡಿಸಲೇ ಬೇಕಿದೆ, ಎಂಬ ಕಟು ಸತ್ಯ ಹೇಳಲೇ ಬೇಕಾಯಿತು. ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಿರಲಿ ಸಾರ್. ನಮ್ಮ ಊರಿಗಂತೂ ನದಿ ನೀರಿನ ಅಲೋಕೇಷನ್ ಆಗಿದೆ.
ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ.
ಅವರ ಪತ್ರಕ್ಕೆ ಬೆಲೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಅಲ್ಲವೇ? ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬೇಡ’ ಸ್ವಾಮಿ. ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ನಮ್ಮ ಗುರಿ. ಇದೇ ನಿಜವಾದ ‘ಜಲಶಕ್ತಿ ಅಭಿಯಾನ’ ಹಿರಿಯ ಐಎಎಸ್ ಅಧಿಕಾರಿಯವರಿಗೂ ಕ್ಷಮೆ ಕೋರುತ್ತೇನೆ.
ಸುಮಾರು 25 ವರ್ಷಗಳಿಂದಲೂ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಎಂದು ಬಾಯಿ ಬಡಿದು ಕೊಳ್ಳುತ್ತಲೇ ಬಂದಿದ್ದೇವೆ. ಇನ್ನೂ ಎಷ್ಟು ವರ್ಷ ತಾಳ್ಮೆಯಿಂದ ಇರಲು ಸಾಧ್ಯಾ ಸ್ವಾಮಿ.