22nd December 2024
Share

TUMAKURU:SHAKTHIPEETA FOUNDATION

ನಾನೊಬ್ಬ ರೈತ, ನನ್ನ ತಲೆಯಲ್ಲಿ ಒಂದು ಹುಚ್ಚು ಇದೆ, ಅದೇ ರೀತಿ ಎದೆಯಲ್ಲಿ ಕೆಚ್ಚು ಇದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡ ಬೇಕು. ರಾಜ್ಯದ ಪ್ರತಿ ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಲೇ ಬೇಕು. ಎಂಬ ಕನಸು ಹೊತ್ತಿದ್ದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಒಂದೊಂದು ಮಾತು ನನ್ನ ತಲೆಯಲ್ಲಿ ಸಿಡಿದು ಹೇಳುತ್ತಿದೆ.

ಪಾವಗಡ ತಾಲ್ಲೋಕಿನ ಜನ ಪ್ರತಿ ದಿವಸ ವಿಷ ಜಲ ಕುಡಿಯುತ್ತಿದ್ದಾರೆ. ಜನರ ಕೈಕಾಲು ಊನಗೊಂಡಿವೆ, ಹಲ್ಲುಗಳು ಕರಿಹಲ್ಲುಗಳಾಗಿವೆ. ಶ್ರೀ ಶನಿಮಹಾತ್ಮನ ದೇವಾಲಯಕ್ಕೆ ಕರೆದು ಅಲ್ಲಿನ ಜನ ಪರಮಶಿವಯ್ಯನವರಿಗೂ ನನಗೂ ಸನ್ಮಾನ ಮಾಡಿ, ಯಾವುದಾದರೂ ಯೋಜನೆಯಿಂದ ಪಾವಗಡ ತಾಲ್ಲೋಕಿಗೆ ನದಿ ನೀರು ಕೊಡಿಸಿ, ಎಂದು ಮನವಿ ಮಾಡಿದ್ದು ನನಗೆ ಕಣ್ಣಿಗೆ ಇನ್ನೂ ರಾರಾಜಿಸುತ್ತಿದೆ.

ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ರವರೊಂದಿಗೆ ಸಮಾಲೋಚನೆ ನಡೆಸಿದಾಗ, ಪಾವಗಡಕ್ಕೆ ಹೇಮಾವತಿ ನೀರಿನಿಂದ ಕುಡಿಯುವ ನೀರಿನ ಯೋಜನೆ ರೂಪಿಸಿ ಎಂದು ಮನವಿ ಮಾಡಿದ್ದಾಗ, ಅವರು ಹಿಂದೂ ಮುಂದೂ ನೋಡದೆ ‘ಎಸ್’ ಎಂದಿದ್ದರು.

ಎಲ್ಲಿ ಹೋಯಿತು ಪಾವಗಡಕ್ಕೆ ಮೀಸಲಿಟ್ಟಿದ್ದ ಹೇಮಾವತಿ ನೀರಿನ ಅಲೋಕೇಷನ್? ಯಾರು ಕಬಳಿಸಿದರು ಆ ನೀರನ್ನು, ಪಾವಗಡದಲ್ಲಿರುವ ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿ ನಿದಿಗಳು ಏನು ಮಾಡುತ್ತಿದ್ದಾರೆ. ಪಾವಗಡದ ಸೊಗಡು ಶ್ರೀ ವೆಂಕಟೇಶ್ ರವರೇ ಶಾಲು ಹೊದಿಸಿ ಸನ್ಮಾನ ಮಾಡಿದರೇ ಮುಗಿಯಿತಾ? ನಿಮ್ಮ ನೀರಾವರಿ ಹೋರಾಟ.

ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿ ಎಂದು, ದಿ.ಜೆ.ಹೆಚ್.ಪಾಟೀಲ್ ರವರು ಮುಖ್ಯ ಮಂತ್ರಿಯವರಾಗಿದ್ದಾಗ,  ಅಧಿವೇಶನ ನಡೆಯುವಾಗ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದಾಗ. ಮಾಜಿ ಸಂಸದರಾದ ಶ್ರೀ ಉಗ್ರಪ್ಪನವರೇ, ಶ್ರೀ ಕೋದಂಡರಾಮಯ್ಯನವರೇ, ತಾವೂ ಸಹ ನಮ್ಮ ಅಪ್ನಾಸ್ ತಂಡದೊಂದಿಗೆ ಜೈಲಿಗೆ ಬಂದಿದ್ದೀರಿ, ನೇತ್ರಾವತಿ ನದಿ ಯೋಜನೆಯ ಒಂದು ಭಾಗವಾದ ಎತ್ತಿನಹೊಳೆ ಯೋಜನೆಯಲ್ಲಿ ಪಾವಗಡಕ್ಕೆ ಮೀಸಲಿಟ್ಟಿದ್ದ ನೀರಿನ ಅಲೋಕೇಷನ್ ಏನಾಯಿತು?

ಪಾವಗಡದ ಜನಪ್ರಿಯ ಶಾಸಕರಾದ ಶ್ರೀ ವೆಂಕಟರಮಣಪ್ಪನವರೇ? ತಾವೂ ಮಾಜಿ ಸಚಿವರು ಆಗೀದ್ದೀರಿ, ನಮ್ಮ ನೀರಾವರಿ ಹೋರಾಟದಲ್ಲಿ ಸಹಕರೀಸಿದ್ದೀರಿ, ನಿಮ್ಮ ವಿಧಾನಸಭಾ ಕ್ಷೇತ್ರಕ್ಕೆ ಭಧ್ರಾ ಮೇಲ್ದಂಡೆ ಯೋಜನೆಯ ನೀರಿನ ಅಲೋಕೇಷನ್ ಕತೆ ಏನು ತಿಳಿಸಿ ಸ್ವಾಮಿ,

ಬಿಜೆಪಿ ನಾಯಕರಾದ ಶ್ರೀ ಶಿವಪ್ರಸಾದ್ ರವರೇ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಅಟಲ್ ಭೂಜಲ್ ಯೋಜನೆಗೆ ಪಾವಗಡ ತಾಲ್ಲೋಕು ಏಕೆ ಸೇರ್ಪಡೆ ಆಗಿಲ್ಲ, ಮೂಲ ಪ್ರಸ್ತಾವನೆಯಲ್ಲಿ ಇತ್ತೋ ಇಲ್ಲವೋ ತಿಳಿಸಿ ಸ್ವಾಮಿ.

ರೈತ ನಾಯಕರಾದ ಶ್ರೀ ನಾಗಭೂಷಣ ರೆಡ್ಡಿಯವರ ತಂಡ ನ್ಯಾಯಾಲಯಕ್ಕೆ ಹೋಗಿ, ಗೆದ್ದು ತಂದ  ತುಂಗಾ ಭಧ್ರಾ ನೀರಿನ ಯೋಜನೆ ಮಾತ್ರ ಪಾವಗಡದಲ್ಲಿ ಆರಂಭವಾಗಿದೆ.ಅವರಿಗೆ ನನ್ನ ಅಭಿನಂದನೆ.

‘ಶ್ರೀ ಶನಿ ಮಹಾತ್ಮ ಪಾವಗಡದಲ್ಲಿ ರಾರಾಜಿಸುತ್ತಿದ್ದಾರೆ, ಶಕ್ತಿದೇವತೆಯ ಪ್ರೀತಿಯ ಶನಿಮಹಾತ್ಮನ ಕ್ಷೇತ್ರಕ್ಕೂ ಅನ್ಯಾಯ ಮಾಡುತ್ತಿರುವ ರಾಜಕಾರಣಿಗಳ ವಿರುದ್ಧ ದ್ವನಿ ಎತ್ತಲೂ ಯಾರಿಗೂ ಧೈರ್ಯ ಇಲ್ಲವೇ?

ಹಿರಿಯರಾದ, ಸ್ವಾತಂತ್ರ್ಯ ಹೋರಾಟಗಾರರಾದ ರೆÀಡ್ಡಿಯವರು ಹಲವಾರು ಸಭೆಗಳನ್ನು ಪಾವಗಡ ತಾಲ್ಲೋಕಿನಲ್ಲಿ ಆಯೋಜಿಸಿದ್ದವರು. ನನಗೆ ಅವರ ಬಗ್ಗೆ ಈಗ ಮಾಹಿತಿಯಿಲ್ಲ. ಆದರೂ ನಾವು ಜನರ ಮುಂದೆ ಎಷ್ಟು ಸುಳ್ಳು ಹೇಳ ಬೇಕು? ನಾಟಕದ ಜೀವನ ಏಕೆ?

ಪಾವಗಡದಲ್ಲಿ ನೀರಾವರಿ ಸಭೆ ಕರೆಯುತ್ತೇವೆ ಬನ್ನಿ, ಎಂದು ನಮ್ಮ ಸೊಗಡು ವೆಂಕಟೇಶ್ ರವರು ದೆಹಲಿಯಲ್ಲಿ ಸಿಕ್ಕಿದಾಗ ಹೇಳಿದ್ದರು. ನಾನು ಪಾವಗಡಕ್ಕೆ ಬರುವದಾದರೇ ನೀರಿನ ಲೆಕ್ಕದೊಂದಿಗೆ ಬರುತ್ತೇನೆ ಎಂದು ಹೇಳಿದ್ದೆ.

ನೀರಿನ ಕಬಳಿಕೆ ಲೆಕ್ಕ ತೆಗೆದುಕೊಂಡು ಪಾವಗಡಕ್ಕೆ ಹೋಗಬೇಕೆ? ತನಿಖಾ ಮಾಧ್ಯಮ ಮಿತ್ರರರೇ, ಪಾವಗಡ ತಾಲ್ಲೋಕಿನ ನದಿ ನೀರಿನ ಯೋಜನೆಗಳ ಅಲೋಕೇಷನ್ ಬಗ್ಗೆ ಒಂದು ಅಧ್ಯಯನ ವರದಿ ಮಾಡುವಿರಾ?

ನಮ್ಮ ಜಿಲ್ಲೆಯವರೇ ಆದ, ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರೇ ಮತ್ತು ನಮ್ಮ ಜಿಲ್ಲೆಯವರೇ ಆದ ಸಣ್ಣ ನೀರಾವರಿ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರೇ ಪಾವಗಡ ತಾಲ್ಲೋಕಿಗೆ ನಿಮ್ಮ ಅವಧಿಯ ಕೊಡುಗೆ ಬಗ್ಗೆ ಘೋಷಣೆ ಮಾಡುವಿರಾ?

ಕೇಂದ್ರ ಸಚಿವರಾದ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರೂ ಆಗಿರುವ ಶ್ರೀ ನಾರಾಯಣ ಸ್ವಾಮಿರವರೇ ಮುಂದಿನ ದಿಶಾ ಸಮಿತಿಯಲ್ಲಿ, ಈ ಬಗ್ಗೆ ಚರ್ಚೆ ಮಾಡಲು ವಿಷಯ ಮಂಡಿಸುವಿರಾ?

ದಯವಿಟ್ಟು ಪಕ್ಷಾತೀತವಾಗಿ ಎಲ್ಲರೂ ಒಂದೆಡೆ ಕುಳಿತು, ಸಮಾಲೋಚನೆ ನಡೆಸಿ, ಪಾವಗಡ ತಾಲ್ಲೋಕಿಗೆ ನದಿ ನೀರಿನಲ್ಲಿ ನ್ಯಾಯ ನೀಡಿ? ಬಣ್ಣವಿಲ್ಲದ ನಾಟPವನ್ನು, ಇನ್ನೂ ಎಷ್ಟು ದಿವಸ ಆಡ ಬೇಕು?