22nd December 2024
Share

TUMAKURU:SHAKTHIPEETA FOUNDATION

ಅಂತರ್ಜಲ ಅಭಿವೃದ್ಧಿಗಾಗಿ ತುಮಕೂರು ಜಿಲ್ಲೆಯ ಬಹುತೇಕ ಭಾಗಗಳಿಗೆ ರೂ 1249.69 ಕೋಟಿ ವೆಚ್ಚದಲ್ಲಿ ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ತುಂಗಾಭಧ್ರಾ ಮತ್ತು ಕೊಳಚೆ ನೀರು ಸಂಸ್ಕರಣೆ ಮಾಡುವ ಮೂಲಕ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಮಾಡುತ್ತಿದೆ ಸಣ್ಣ ನೀರಾವರಿ ಇಲಾಖೆಗೆ ಅಭಿನಂದನೆಗಳು.

ಒಂದು ಕಣ್ಣಿಗೆಒಂದು ಕಣ್ಣಿಗೆ ಬೆಣ್ಣೆ  ಕಣ್ಣೆದುರಿಗೆ ಗೋಚರಿಸುವಾU,À ಮೌನದಿಂದರಲೂ ಸಾದ್ಯಾವಿಲ್ಲ. ನಾನು ಆರಂಭದಿಂದಲೂ ಮಾಧುಸ್ವಾಮಿಯವರೇ ಇದು ನ್ಯಾಯವೇ ಎಂಬ ಬರವಣಿಗೆಯಿಂದ ಎಲ್ಲರ ಗಮನ ಸೆಳೆದಿದ್ದೇನೆ. ಪ್ರತಿ ಯೋಜನೆಯ ಕಡತದ ಅನುಸರಣೆ ಮಾಡುತ್ತಿದ್ದೇನೆ,

ಮಾಧುಸ್ವಾಮಿಯವರು ಈ ರೀತಿ ಅನ್ಯಾಯ ಮಾಡುವುದಿಲ್ಲ, ಆದರೇ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿಲ್ಲ, ಕೇವಲ ಸಲಹಾಗಾರರ ಯೋಜನೆಗಳಿಗೆ ಸಹಕಾರ ನೀಡುತ್ತಿರ ಬಹುದು ಎಂಬ ಅನುಮಾನ ನನಗೆ ಇದೆ. ಮಾಡುವುದೇ ಲಿಪ್ಟ್ ಅಂದ ಮೇಲೆ ಏಕೆ ಹಲವಾರು ಗ್ರಾಮಗಳನ್ನು ಕೈಬಿಟ್ಟಿದ್ದೀರಿ.ಕಳೆದ 34 ವರ್ಷದಿಂದ ಒಂದೊಂದು ನದಿ ನೀರಿನ ಹೋರಾಟದಲ್ಲಿಯೂ ನಾನೂ ಭಾಗಿಯಾಗಿದ್ದೇನೆ, ನನಗೂ ಎಲ್ಲವೂ ಅರಿವಿದೆ.

ಹೇಮಾವತಿ ನಾಲಾ ವ್ಯಾಪ್ತಿಯಲ್ಲಿರುವ ಕೆರೆ-ಕಟ್ಟೆಗಳಿಗೆ ಅಧಿಕೃತಕವಾಗಿ ನೀರು ತುಂಬಿಸಲು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಹೇಮಾವತಿ ನಾಲಾ ವಲಯ ತುಮಕೂರು ಮುಖ್ಯ ಇಂಜಿನಿಯರ್ ಸ್ಪಷ್ಟ ಪಡಿಸ ಬೇಕು. ಇದೂವರೆಗೂ ಅಧಿಕೃತವಾಗಿ ಕೆರೆಗಳಿಗೆ ಹೇಮಾವತಿ ನೀರು ಬೀಡಲು ಸರ್ಕಾರಿ ಆದೇಶ ಮಾಡಿಲ್ಲ ಎಂದಾದರೆ, ಎಲ್ಲಾ ಪಕ್ಷದ ನಾಯಕರಿಗೂ ನಾಚಿಕೆಯಾಗ ಬೇಕು.ಎಲ್ಲರೂ ಭಗಿರಥರೇ?

ತುಮಕೂರು ಜಿಲ್ಲೆಯಲ್ಲಿ, ವಿಧಾನಸಭಾ ಕ್ಷೇತ್ರವಾರು ಮೌಲ್ಯ ಮಾಪನ ಮಾಡಿದಾಗ, ನನಗೆ ಅರಿವಾಗಿರುವಂತೆ ಕೆಲವು ಗ್ರಾಮಗಳನ್ನು ಸೇರಿಸಿ, ಕೆಲವು ಗ್ರಾಮಗಳನ್ನು ಕೈಬಿಡಲು ಕಾರಣಗಳೇನು ಸಣ್ಣ ನೀರಾವರಿ ಇಲಾಖೆ ಸ್ಪಷ್ಟಪಡಿಸಬೇಕು.

ಜಲಜೀವನ್ ಮಿಷನ್ ಯೋಜನೆಯಡಿ, ಮುಂದಿನ 50 ವರ್ಷಗಳಿಗೆ ಆಗತ್ಯವಿರುವ ಕುಡಿಯುವ ನೀರಿಗಾಗಿ, 330 ಗ್ರಾಮಪಂಚಾಯಿತಿಗಳಿಗೂ ಯಾವ ಯಾವ ಕೆರೆಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂಬ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್ ಸ್ಪಷ್ಟ ಪಡಿಸಬೇಕು.

ಮುಂದಿನ 50 ವರ್ಷಗಳಿಗೆ ಆಗತ್ಯವಿರುವ 11 ಸ್ಥಳೀಯ ನಗರ ಪ್ರದೇಶಗಳ ವ್ಯಾಪ್ತಿಗೆ ಯಾವ ಯಾವ ಕೆರೆಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂಬ ಬಗ್ಗೆ  ನಗರ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್ ಸ್ಪಷ್ಟ ಪಡಿಸಬೇಕು.

ಮುಂದಿನ 50 ವರ್ಷಗಳಿಗೆ ಆಗತ್ಯವಿರುವ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಗೆ ಯಾವ ಯಾವ ಕೆರೆಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂಬ ಬಗ್ಗೆ  ಕೆ.ಐ.ಡಿ.ಬಿ ಮತ್ತು ಕೆ.ಎಸ್.ಎಸ್.ಐ.ಡಿ.ಸಿ ಇಲಾಖೆ ಮುಖ್ಯ ಇಂಜಿನಿಯರ್ ಸ್ಪಷ್ಟ ಪಡಿಸಬೇಕು.

ಮುಂದಿನ 50 ವರ್ಷಗಳ ಅವಧಿಗೆ, ಕಾಡು ಪ್ರಾಣಿಗಳಿಗೆ ಆಗತ್ಯವಿರುª ನೀರನ್ನು ಅರಣ್ಯ ಪ್ರದೇಶದಲ್ಲಿ À  ಯಾವ ಯಾವ ಕೆರೆಗಳ ಮೂಲಕ ಸರಬರಾಜು ಅವಕಾಶ ಕಲ್ಪಸಿಲಾಗಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಡಿಎಫ್‍ಓ ಸ್ಪಷ್ಟ ಪಡಿಸಬೇಕು.

ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯಡಿ, ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗ¼ಲ್ಲಿÀ ಒಂದೇ ಒಂದು ಗ್ರಾಮವನ್ನು ಬಿಡದೆ, ಪ್ರತಿ ಗ್ರಾಮಕ್ಕೂ ನದಿ ನೀರು ಹಂಚಿಕೆ ಮಾಡಲಾಗಿದೆ. ಒಂದು ವೇಳೆ ಯಾವುದಾದರೂ ಗ್ರಾಮಗಳಿಗೆ ನದಿ ನೀರು ಹಂಚಿಕೆ ಮಾಡಲು ಸಾಧ್ಯಾವಾಗದಿದ್ದರೆ, ಇಂಥಹ ಗ್ರಾಮಕ್ಕೆ ಈ ಕಾರಣದಿಂದ ನೀರು ನೀಡಲು ಸಾಧ್ಯಾವಾಗಿಲ್ಲ ಎಂಬ ಸ್ಪಷ್ಟ ಮಾಹಿತಿಯೊಂದಿಗೆ ತುಮಕೂರು ಜಿಲ್ಲಾಧಿಕಾರಿಯವರು ಮತ್ತು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ರವರು ಸ್ಪಷ್ಟ ಪಡಿಸಬೇಕು.

ರಾಜ್ಯ ಸರ್ಕಾರದ ಪಾಲಿನ ಹಣಕ್ಕೆ ಈಗಾಗಲೇ ಸಚಿವ ಸಂಪುಟದ ಅನುಮೋದನೆಯನ್ನು ಬಹುತೇಕ ಪಡೆಯಲಾಗಿದೆ. ಅಗತ್ಯವಿರುವ ರಾಜ್ಯದ ಪಾಲಿನ ಅನುದಾನದ ಹೊಣೆಗಾರಿಕೆಯನ್ನು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಹೊರಬೇಕು. ಕೇಂದ್ರ ಪಾಲಿನ ಅನುದಾನ ಮಂಜೂರು ಮಾಡಿಸುವ ಸಂಪೂರ್ಣÀ ಹೊಣೆಗಾರಿಕೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹೊರಬೇಕು.

ಇವರಿಬ್ಬರಿಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಕೇಂದ್ರದ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ರಾಜ್ಯದ ಸಚಿವರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಪಕ್ಷಾತೀತವಾಗಿ ಬೆನ್ನುಲುಬಾಗಿ ನಿಲ್ಲಬೇಕು.

ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನದಿ ನೀರು ನೀಡಲು, ಹಾಲಿ ಅಲೋಕೇಷನ್ ಆಗಿರುವ ನದಿ ನೀರು ಸಾಲದೇ ಇದ್ದಲ್ಲಿ, ‘ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಅಥವಾ ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆಯಡಿ, ಯಾವ ನದಿ ನೀರಿನ ಯೋಜನೆ ರೂಪಿಸಿ, ಎಲ್ಲಿ ವಾಟರ್ ಬ್ಯಾಂಕ್ ಮಾಡಲಾಗುವುದು, ಎಷ್ಟು ಹಣದ ಅವಶ್ಯಕತೆಯಿದೆ ಎಂಬ ಬಗ್ಗೆಯೂ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸ ಬೇಕು.

ಪ್ರತಿಯೊಂದು ಹಂತದಲ್ಲೂ ಕಡತದ ಅನುಸರಣೆಯನ್ನು ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನಿರಂತರವಾಗಿ ಮಾಡಲಿದೆ. ಯಾವುದೇ ಒಬ್ಬ ಕೇಸ್ ವರ್ಕರ್ ಹಂತದಿಂದ ಆರಂಭಿಸಿ ಸಚಿವರ ಹಂತದವರೆಗೆ, ಕಡತ ಪೆಂಡಿಂಗ್ ಇದ್ದಲ್ಲಿ ಯಾವುದೇ ಅಂಜಿಕೆಯಿಲ್ಲದೆ, ಪ್ರತಿಯೊಬ್ಬರ ಟೇಬಲ್ ಮುಂದೆ ಕುಳಿತು, ಶ್ರೀ ಜಿ.ಎಸ್.ಬಸವರಾಜ್ ರವರು ಕಡತ ಕ್ಲಿಯರ್ ಮಾಡಸಲಿದ್ದಾರೆ. ನಾನು ಅವರ ಜೊತೆ ಸದಾ ಇರುತ್ತೇನೆ.

ಒಂದು ವೇಳೆ ಈ ರೀತಿ ಮಾಡಲು ಸಾದ್ಯಾವಿಲ್ಲದೇ ಇದ್ದಲ್ಲಿ,  ಯಾವ ಕಾರಣಕ್ಕೆ ಈ ರೀತಿ ಮಾಡಲು ಸಾಧ್ಯಾವಿಲ್ಲ ಎಂಬ ಬಗ್ಗೆ ಸ್ಪಷ್ಟ ಪಡಿಸಲಿ, ಇನ್ನೂ ಯಾವುದಾದರೂ ಮಾರ್ಗದ ಅಗತ್ಯವಿದ್ದಲ್ಲಿ ಆ ಬಗ್ಗೆಯೂ ಸ್ಪಷ್ಟ ಪಡಿಸಲಿ.

‘ಪ್ರಜಾಪ್ರಭುತ್ವದಲ್ಲಿ ನಾನು ಹೇಳಿದ್ದೇ ನಡೆಯ ಬೇಕು ಎಂಬ ಧೋರಣೆಯನ್ನು, ಯಾವ ಹಂತದ ಅಧಿಕಾರಿ ಅಥವಾ ಚುನಾಯಿತ ಜನಪ್ರತಿನಿಧಿ ಕೈಗೊಂಡರು, ಜಿಲ್ಲೆಯ ವಂಚಿತ ಜನರು ಬೀದಿಗಿಳಿಯಲ್ಲಿದ್ದಾರೆ ಎಂಬ ಅಂಶವನ್ನು ಮರೆಯದಿರಿ.

108 ಶಕ್ತಿದೇವತೆಗಳ ಅನುಗ್ರಹ, 12 ಜ್ಯೋತಿರ್ಲಿಂಗಗಳ ಅನುಗ್ರಹ, ಸಾಯಿಬಾಬಾರವರ ಅನುಗ್ರಹದಿಂದ  ಇದು ಚಂಡಿಯಾಟ ತಿಳಿದಿರಲಿ. ಇದೇ ಉದ್ದೇಶದಿಂದ ಶಕ್ತಿಪೀಠ ಫೌಂಡೇಷನ್ ಸ್ಥಾಪನೆಯಾಗಿರುವುದು ಎಂಬ ಮನವರಿಕೆ ಮಾಡಿಸದೇ ಅನ್ಯ ಮಾರ್ಗವಿಲ್ಲ.

ಪ್ರಾಣ ಬಿಟ್ಟರೂ ಒಂದೇ ಒಂದು ಗ್ರಾಮ ನದಿ ನೀರಿನಿಂದ ವಂಚಿತವಾಗಲು ಬಿಡುವುದಿಲ್ಲ. ಇದು 34 ವರ್ಷದ ತಪಸ್ಸಿನ ಅನುಭವದ ಮಾತುಗಳು.

ಈ ಕೆಳಕಂಡವರ ಅಧಿಕೃತ ಸಹಿ ನಕ್ಷೆಗೆ ಅಗತ್ಯ.

  1. ಹೇಮಾವತಿ ನಾಲಾ ವಲಯ ತುಮಕೂರು ಮುಖ್ಯ ಇಂಜಿನಿಯರ್.
  2. ಎತ್ತಿನಹೊಳೆ ಮುಖ್ಯ ಇಂಜಿನಿಯರ್.
  3. ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್.
  4. ತುಂಗಭಧ್ರಾ ಮುಖ್ಯ ಇಂಜಿನಿಯರ್.
  5. ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್.
  6. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್.
  7. ಕೆ.ಐ.ಡಿ.ಬಿ ಮುಖ್ಯ ಇಂಜಿನಿಯರ್.
  8. ಕೆ.ಎಸ್.ಎಸ್.ಐ.ಡಿ.ಸಿ ಮುಖ್ಯ ಇಂಜಿನಿಯರ್.
  9. ನಗರ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್.
  10. ಅರಣ್ಯ ಇಲಾಖೆ ಡಿಎಫ್‍ಓ.
  11. ತುಮಕೂರು ಜಿಲ್ಲಾಧಿಕಾರಿ.
  12. ತುಮಕೂರು ಜಿಲ್ಲಾ ಪಂಚಾಯತ್ ಸಿಇಓ