28th March 2024
Share

TUMAKURU:SHAKTHIPEETA FOUNDATION

ಈ ಸಭೆಯನ್ನು ಬುಕ್ಕಾ ಪಟ್ಟಣದಲ್ಲಿ ಶ್ರೀ ರಘುರಾಂ ತಂಡದವರು ಆಯೋಜಿಸಿದ್ದಾರೆ.

ತುಮಕೂರು ಜಿಲ್ಲೆಯ 2715 ಗ್ರಾಮದಲ್ಲಿನ ಕೆರೆ-ಕಟ್ಟೆ, ಪಿಕ್ ಅಪ್, ಬಾವಿ, ಬೋರ್ ವೆಲ್ ಇತ್ಯಾದಿ ಜಲಸಂಗ್ರಹಾಗಾರಗಳ ಗ್ರಾಮವಾರು ಮೌಲ್ಯಮಾಪನಕ್ಕೆ ಮುಂದಾದ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ.

ಗೂಗಲ್‍ನಲ್ಲಿ ಸುಮಾರು 4365 ಜಲಸಂಗ್ರಹಾಗಾರಗಳು ಇವೆಯಂತೆ. ದಾಖಲೆ ಪ್ರಕಾರ 1596 ಜಲಸಂಗ್ರಹಾಗಾರಗಳ ಇವೆಯಂತೆ ಇದರಲ್ಲಿ ಯಾವು ಸತ್ಯ ಎಂಬ ತಪಾಸಣೆ ಆಗಲೇ ಬೇಕಲ್ಲವೇ? 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಘೋಷಣೆ ಮಾಡಬೇಕಲ್ಲವೇ?

  1. ದೇಶಾದ್ಯಾಂತ 6 ನೇ ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ ಪೂರ್ಣಗೊಳ್ಳುವ ಹಂತದಲ್ಲಿ ಇದೆಯಂತೆ.ಸಣ್ಣ ನೀರಾವರಿ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆಯಂತೆ.
  2. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವೂ ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ ಇಟ್ಟಿರಬೇಕಂತೆ.
  3. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ ಇಟ್ಟಿರಬೇಕಂತೆ.
  4. ಕಂದಾಯ ಇಲಾಖೆಯು ಜಲಸಂಗ್ರಹಾಗಾರಗ¼ ಮತ್ತು ಕರಾಬುಹಳ್ಳಗಳ ಒತ್ತುವರಿ ತೆರವಿಗೆ ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ ಇಟ್ಟಿರಬೇಕಂತೆ.
  5. ಪ್ರತಿ ಗ್ರಾಮಗಳ ಜಲಸಂಗ್ರಹಾಗಾರಗಳ ಡಿಜಿಟಲ್ ಮಾಹಿತಿಯನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ಮಾಹಿತಿ ಕಣಜಕ್ಕೆ ಅಪ್ ಲೋಡ್ ಮಾಡುವ ಕೆಲಸವನ್ನು ಆಯಾ ಇಲಾಖೆಗಳು ಮಾಡಬೇಕಂತೆ.
  6. ತುಮಕೂರು ಜಿಲ್ಲೆಯ ತಲಪುರಿಕೆಗಳ ಮಾಹಿತಿ ಮತ್ತು ಪುನಶ್ಛೇತನ ಕಾರ್ಯವನ್ನು ಯಾವ ಇಲಾಖೆ ಮಾಡಬೇಕು ಎಂಬ ನಿರ್ಣಯ ಇನ್ನೂ ಆಗಿಲ್ಲ.
  7. ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ಸುವರ್ಣ ಮುಖಿ, ಶಿಂಷಾ, ಜಯಮಂಗಲಿ, ಗರುಡಾಚಲ, ನಾಗಿಣಿ ಮತ್ತು ಪೆನ್ನಾರ್ ಯನ್ನು ನದಿಗಳ ಪುನಶ್ಛೇತನ ಕಾರ್ಯವನ್ನು ಯಾವ ಇಲಾಖೆ ಮಾಡುತ್ತಿವೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
  8. ತುಮಕೂರು ಜಿಲ್ಲೆಯ ಪ್ರತಿ ಮನೆಗೆ ಜಲಜೀವನ್ ಮಿಷನ್ ಅಡಿ ನಲ್ಲಿ ನೀರು ನೀಡಬೇಕಾದರೂ ಜಲಸಂಗ್ರಹಾಗಾರಗಳ ಮಾಹಿತಿಯನ್ನು ವಿಲೇಜ್ ಆಕ್ಷನ್ ಪ್ಲಾನ್ ನಲ್ಲಿ ಇಟ್ಟಿರ ಬೇಕಂತೆ.
  9. ಅಟಲ್ ಭೂ ಜಲ್ ಮತ್ತು ಜಲಾಮೃತ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಗಳ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವಾಗಲು ಎಲ್ಲಾ ರೀತಿಯ ಜಲಸಂಗ್ರಹಾಗಾರಗಳ ಮಾಹಿತಿ ಸಂಗ್ರಹ ಮಾಡಬೇಕಂತೆ.

ಇದರ ಜೊತೆಗೆ ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತು ತುಂಗಾಭಧ್ರಾ ಯೋಜನೆಗಳ ಮಾಹಿತಿಯನ್ನು ಅಪ್ ಲೋಡ್ ಮಾಡಬೇಕಿದೆ.

ಈ ಎಲ್ಲಾ ಇಲಾಖೆಗಳ ಗ್ರಾಮವಾರು ಮಾಹಿತಿಯ ಮೌಲ್ಯ ಮಾಪನವನ್ನು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭ ಮಾಡಿದೆ.

ಇದು ನಿಜವಾದ ಜಲಶಕ್ತಿ ಅಭಿಯಾನ ಇದು ಸರ್ಕಾರಿ ಕಾಯಕ್ರಮವಾಗಬೇಕು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಗಮನ ಸೆಳೆಯಲು ಜಿಲ್ಲಾಧ್ಯಾಂತ ಜನರ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಲಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಊರಿಗೊಂದು ಕೆರೆ–  ಕೆರೆಗೆ ನದಿ ನೀರು ಯೋಜನೆಯಡಿ, ತುಮಕೂರು ಜಿಲ್ಲೆಗೆ ಆಗಿರುವ ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತು ತುಂಗಾಭಧ್ರಾ ಯೋಜನೆಗಳ ನದಿ ನೀರಿನ ಅಲೋಕೇಷನ್ ನಲ್ಲಿ ಶೇ 40 ರಷ್ಟು ತುಂಬ ಬಹುದಂತೆ. ತಾರತಮ್ಯ ಏಕೆ? ಎಲ್ಲಾ ಗ್ರಾಮಗಳ ಕೆರೆಗೂ ನದಿ ನೀರಿನ ಅಲೋಕೇಷನ್ ಮಾಡಿ ಎಂಬ ಹೋರಾಟ ನಡೆಯಲೇ ಬೇಕಲ್ಲವೇ?

ತಾವೂ ಬನ್ನಿ, ತಮ್ಮವರನ್ನು ಕರೆ ತನ್ನಿ.