23rd December 2024
Share

TUMAKURU:SHAKTHIPEETA FOUNDATION

 Consultative committee for the minisistry of jalshakthi ಸಮಿತಿ ಸಭೆಯನ್ನು ಮೊಟ್ಟಮೊದಲ ಭಾರಿಗೆ ಮೈಸೂರಿನಲ್ಲಿ ಆಯೋಜಿಸಿರುವುದರಿಂದ, ಈ ಸಭೆಗೆ ಆಗಮಿಸುವ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್ ರವರಿಗೆ, ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಬರೆದ ಪತ್ರದ ವಿವರ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರದಿ ಆಧಾರಿತ ನೀರಾವರಿ ಯೋಜನೆಗಳ ಬಗ್ಗೆ, ತುಮಕೂರಿನ ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಕಳೆದ 34 ವರ್ಷಗಳಿಂದಲೂ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ  ನಿರಂತರವಾಗಿ ಶ್ರಮಿಸುತ್ತಿದೆ.

ನನ್ನ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯದಂತೆ, ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆ ಸಿದ್ಧಪಡಿಸಿದ ನಂತರ, ರಾಜ್ಯದ ಇನ್ನುಳಿದ 30 ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಮನವಿ ಮಾಡಿದ್ದರ ಹಿನ್ನಲೆಯಲ್ಲಿ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಭಾಗಿತ್ವದಲ್ಲಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಮತ್ತು ರಾಜ್ಯ ಜಲಗ್ರಂಥ ರಚಿಸಲು ಜಲಶಕ್ತಿ ಅಭಿಯಾನ ಆರಂಭಿಸಿದೆ. ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆ ಸಿದ್ಧಪಡಿಸಿದ ನಂತರ, ರಾಜ್ಯದ ಇನ್ನುಳಿದ 30 ಜಿಲ್ಲೆಗಳಿಗೂ ವಿಸ್ತರಣೆ ಮಾಡಲಿದೆ.

ವಿವಿಧ ಇಲಾಖೆಗಳ ದಾಖಲೆ ಪ್ರಕಾರ ಕೇವಲ 1595 ಕೆರೆ-ಕಟ್ಟೆಗಳು ಮತ್ತು ಕೃತಕ ಜಲಸಂಗ್ರಹಾಗಾರಗಳು ಇವೆ ಎಂದು ದಾಖಲಿಸಿದೆ. ಆದರೆ ತುಮಕೂರು ಜಿಲ್ಲೆಯಲ್ಲಿ ಸುಮಾರು 4365 ಕೆರೆ-ಕಟ್ಟೆಗಳು ಮತ್ತು ಕೃತಕ ಜಲಸಂಗ್ರಹಾಗಾರಗಳು ಇವೆ ಎಂಬ ಬಗ್ಗೆ ಡಿಜಿಟಲ್ ದಾಖಲೆ ಸಹಿತ ಸಂಶೋಧನೆ ಆರಂಭಿಸಿದೆ.

ನನ್ನ ಸಲಹೆಯ ಮೇರೆಗೆ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮೌಲ್ಯಮಾಪನ ಆರಂಭಿಸಿದೆ. ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೂ ಜಲಜಾಗೃತಿ ಮೂಡಿಸುತ್ತಿದೆ. ‘ಹಲವಾರು ಜನರ ಒಂದು ತಾಂತ್ರಿಕ ತಂಡ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ’.

ಜಲಶಕ್ತಿ ಅಭಿಯಾನ

ಪೂರಕವಾಗಿ ರಾಜ್ಯ‘ಜಲಗ್ರಂಥ ಜನ ಜಾಗೃತಿ ಅಭಿಯಾನಕ್ಕೆ, 75 ಜಲಶಕ್ತಿ ಅಭಿಯಾನ ಸಭೆಗಳನ್ನು ಪಕ್ಷಾತೀತವಾಗಿ ಆಯೋಜಿಸಲು ಆಲೋಚನೆ ಮಾಡಿದ್ದು, ಈಗಾಗಲೇ ಈ ಕೆಳಕಂಡ ಸ್ಥಳಗಳಲ್ಲಿ ಸಭೆ ನಡೆಸಿದೆ.  

  1. ದಿನಾಂಕ: 08.05.2022 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಕುಂದರನಹಳ್ಳಿಯಲ್ಲಿ ರಾಜ್ಯ ಮಟ್ಟದ ಜಲಗ್ರಂಥ ಜನ ಜಾಗೃತಿ ಅಭಿಯಾ£ ಆರಂಬೋತ್ಸವ ಸಭೆ  ನಡೆಸಲಾಗಿದೆ.
  2. ದಿನಾಂಕ: 29.05.2022ರಂದು ತುಮಕೂರು ನಗರದಲ್ಲಿ ಕರ್ನಾಟಕ ಬಿಜೆಪಿ ರಾಜ್ಯ ರೈತ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ,  ರಾಜ್ಯದ ಜಲಗ್ರಂಥ ರಚಿಸುವ ಸಂಬಂಧ ಪಿಪಿಟಿ ಪ್ರದರ್ಶನ ಮಾಡಲಾಗಿದೆ.
  3. ದಿನಾಂಕ: 16.06.2022 ರಂದು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲಕ, ತುಮಕೂರಿನಲ್ಲಿ  ತುಮಕೂರು ಜಿಲ್ಲಾ ಜಲಸಂವಾದ  ಸಭೆ  ನಡೆಸಲಾಗಿದೆ.
  4. ದಿನಾಂಕ: 21.06.2022 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕಿನ, ಹೊಲತಾಳು ಗ್ರಾಮದಲ್ಲಿ ತಲಪುರಿಕೆ ಸಂಶೋದನಾ ಸಭೆ  ನಡೆಸಲಾಗಿದೆ.
  5. ದಿನಾಂಕ: 28.06.2022 ರಂದು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ, ಬುಕ್ಕಾಪಟ್ಟದಲ್ಲಿ ಜಲಸಂವಾದ ಸಭೆ ನಡೆಸಲಾಗಿದೆ.

ವಿವಿಧ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ಸರ್ಕಾರಕ್ಕೆ ಕೈಜೋಡಿಸಿದೆ.

  1. ಜಲಜೀವನ್ ಮಿಷನ್ ಯೋಜನೆಯಡಿ, ತುಮಕೂರು ಜಿಲ್ಲೆಯ 330 ಗ್ರಾಮಪಂಚಾತಿಯಿತಿಗಳ, 2715 ಕ್ಕೂ ಹೆಚ್ಚು ಗ್ರಾಮಗಳ, ಪ್ರತಿ ಮನೆ, ಮನೆಗೆ ನಲ್ಲಿ ನೀರು ಸರಬರಾಜು ಮಾಡಲು ನದಿ ನೀರಿನ ಅಲೋಕೇಷನ್.
  2. ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿಗಾಗಿ ನದಿ ನೀರಿನ  ಅಲೋಕೇಷನ್.
  3. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಕೈಗಾರಿಕಾ ವಸಾಹತುಗಳಿಗೆ ನದಿ ನೀರಿನ ಅಲೋಕೇಷನ್ ಹಾಗೂ ಸಂಸ್ಕರಿತ ನೀರಿನ ಪುನರ್‍ಬಳಕೆಗೆ ಯೋಜನೆ.
  4. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಕೆರೆಗಳಿಗೆ ಹಾಗೂ ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣ ಮಾಡುವ ಕೆರೆ-ಕಟ್ಟೆ-ಪಿಕ್ ಅಫ್ ಗಳಿಗೂ ನದಿ ನೀರಿನ ಅಲೋಕೇಷóನ್.
  5. ವರ್ಷದ ಎಲ್ಲಾ ಕಾಲದಲ್ಲೂ ಕೆರೆಯಲ್ಲಿ ನೀರು ಇರುವಂತೆ ಮಾಡಲು ಟ್ಯಾಂಕ್ ಇನ್ ಟ್ಯಾಂಕ್ ನಿರ್ಮಾಣ. 
  6. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಅಗತ್ಯವಿರುವ ಕುಡಿಯುವ ನೀರಿಗಾಗಿ ನದಿ ನೀರಿನ ಅಲೋಕೇಷನ್.
  7. ತುಮಕೂರು ಜಿಲ್ಲೆಗೆ ಮೇಲ್ಕಂಡ ಯೋಜನೆಗಳಿಗೆ ಕಡಿಮೆ ಬರುವ ನದಿ ನೀರಿನ ಯೋಜನೆ ರೂಪಿಸಲು, ಹೇಮಾವತಿ ಪ್ಲೋ ಇರ್ರಿಗೇಷನ್ ನಿಂದ ಮೈಕ್ರೋ ಇರ್ರಿಗೇಷನ್, ಜಲಜೀವನ್ ಮಿಷನ್ ಕಾರಿಡಾರ್ ಅಥವಾ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಯೋಜನೆಗೆ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
  8. ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ನದಿಗಳ, ತಲಪುರಿಕೆಗಳ ಮತ್ತು ಕರಾಬುಹಳ್ಳಗಳ ಪುನಶ್ಚೇತನಕ್ಕೆ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
  9. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಚಟುವಟಿಕೆಗಳ ಮತ್ತು ಇತರೆ ನೀರಿನ ಯೋಜನೆಗಳಿಗೆ ಮೂರನೇ  ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ, ತುಮಕೂರು ನಗರದಲ್ಲಿ, ಅಕ್ಟೋಬರ್‍ನಲ್ಲಿ ಶಕ್ತಿಪೀಠ ಫೌಂಡೇಷನ್ ಮತ್ತು ಹಲವಾರು ಸಂಘ ಸಂಸ್ಥೆಗಳು ಆಯೋಜಿಸುವ 75 ನೇ ಜಲಜಾಗೃತಿ ಸಭೆಗೆ ತಮ್ಮನ್ನು ಈ ಮೂಲಕ ಆಹ್ವಾನಿಸಲಾಗಿದೆ.

ತಮಗೆ ಸೂಕ್ತ ದಿನಾಂಕ ಮತ್ತು ಸಮಯ ನಿಗದಿ ಪಡಿಸಿ, ತುಮಕೂರು ಜಿಲ್ಲಾ ಜಲ ಗ್ರಂಥ’ಕ್ಕೆ ತಮ್ಮ ಅಮೂಲ್ಯವಾದ ಸಂದೇಶ ನೀಡಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                                          (ಜಿ.ಎಸ್.ಬಸವರಾಜ್)

ತಾವು ನೀಡುವ ಸಲಹೆಗಳನ್ನು ಸೇರ್ಪಡೆ ಮಾಡಲು ಅವಕಾಶವಿದೆ. ಜಲಾಸಕ್ತರು ಸಲಹೆ ನೀಡಬಹುದು.