TUMAKURU:SHAKTHIPEETA FOUNDATION
ಪ್ರಜಾ ಪ್ರಗತಿ ಸಂಪಾದಕರಾದ ಶ್ರೀ ನಾಗಣ್ಣನವರು, ಕೆರೆಗಳಿಗೆ ನದಿ ನೀರು ವಿಚಾರದಲ್ಲಿ ನನ್ನೊಂದಿಗೆ ಚರ್ಚೆ ನಡೆಸುತ್ತಿದ್ದರು. ಇತ್ತೀಚೆಗೆ ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ವಿಚಾರದಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬಂತಹ ತೀರ್ಮಾನಕ್ಕೆ ಬಂದಿರುವ ಹಾಗೆ ಇದೆ ಎಂದು ಜೋಕ್ ಮಾಡಿದರು.
ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೂ ಸಮಾಲೋಚನೆ ನಡೆಸಿದ ಶ್ರೀ ನಾಗಣ್ಣನವರು ನಮ್ಮ ವರದಿಗಾರ ಶ್ರೀ ಹರೀಶ್ ಆಚಾರ್ಯರವರನ್ನು ಕಳುಹಿಸುತ್ತೇನೆ, ವಿವರವಾದ ಮಾಹಿತಿ ಹೇಳಿ ಸಾರ್, ನಾನೂ ಸಹ ಈ ಆಂದೋಲನದಲ್ಲಿ ಕೈಜೋಡಿಸುತ್ತೇನೆ ಎಂದರು.
ಶ್ರೀ ಹರೀಶ್ ಆಚಾರ್ಯರವರು ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಸಂದರ್ಶನ ನಡೆಸಿದ್ದಾರೆ. ನನ್ನ ಜೊತೆಯೂ ಚರ್ಚೆ ನಡೆಸಿದ್ದಾರೆ. ನಾನು ಅವರಿಗೆ ಹೇಳಿದ್ದು ಇಷ್ಟೆ, ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ದೇಶಾಧ್ಯಾಂತ 6 ನೇ ಮೈನರ್ ಇರ್ರಿಗೇಷನ್ ಡಿಜಿಟಲ್ ಗಣತಿ ನಡೆಯುತ್ತಿದೆ.
ನಮ್ಮ ಜಿಲ್ಲೆಯವರೇ ಆದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಣ್ಣ ನೀರಾವರಿ ಮತ್ತು ಕಾನೂನು ಸಚಿವರಾಗಿದ್ದಾರೆ. ಹಾಗೇಯೆ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಸಹ ಸಣ್ಣ ನೀರಾವರಿ ಮತ್ತು ಕಾನೂನು ಸಚಿವರಾಗಿದ್ದವರು.
‘ನಾನು ಕಳೆದ 2019 ರಿಂದ ತುಮಕೂರು ಜಿಲ್ಲೆಯಲ್ಲಿ ಇರುವುದು 1575 ಅಲ್ಲ, 4365 ಕೆರೆ–ಕಟ್ಟೆಗಳು, ಪಿಕ್ ಅಪ್ ಇತ್ಯಾದಿ ಇವೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ತುಮಕೂರಿನ ಸ್ಪೆಕ್ಟ್ರಾ ಅಸೋಯೇಟ್ಸ್ ನವರು ಗುರುತಿಸಿ, ದಾಖಲೆ ನೀಡಿದ್ದರೂ ಈ ಬಗ್ಗೆ ಯಾರು ಗಮನ ಹರಿಸಿಲ್ಲ’.
ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯ ತೆಗೆದುಕೊಂಡು ಓದಿ, ನಾನು ಪ್ರತಿ ಸಭೆಯಲ್ಲೂ ಈ ಬಗ್ಗೆ ಸಭೆಯ ಗಮನ ಸೆಳೆದಿದ್ದೇನೆ. ಆದರೂ ಯಾರು ಚಕಾರವೆತ್ತಿಲ್ಲ. ಈ ಹಿನ್ನಲೆಯಲ್ಲಿ ಚಂಡಿ ಆಟ ಆಡಲೇ ಬೇಕಿದೆ ಎಂದು ತಿಳಿಸಿದೆ.
ಶಕ್ತಿಪೀಠ ಫೌಂಡೇಷನ್ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆಗೂಡಿ ಜಿಲ್ಲೆಯ ಕೆರೆಗಳಿಗೆ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ವರದಿ ಸಿದ್ಧಪಡಿಸುತ್ತಿರುವುದರಿಂದ
- ತುಮಕೂರು ಜಿಲ್ಲೆಯ 3 ಜನ ಸಂಸದರು.
- ತುಮಕೂರು ಜಿಲ್ಲೆಯ ಒಬ್ಬರು ರಾಜ್ಯಸಭಾ ಸದಸ್ಯರು.
- ತುಮಕೂರು ಜಿಲ್ಲೆಯ 11 ವಿಧಾನಸಭಾ ಸದಸ್ಯರು.
- ತುಮಕೂರು ಜಿಲ್ಲೆಯ ಎಲ್ಲಾ ವಿಧಾನ ಪರಿಷತ್ ಸದಸ್ಯರು.
- ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು.
- ರಾಜ್ಯ ಸರ್ಕಾರದ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಚಿವರು.
- ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ 6 ಜನ ಸಚಿವರು.
- ಕೇಂದ್ರ ಜಲಶಕ್ತಿ ಸಚಿÀವರು.
- ಮಾನ್ಯ ಮುಖ್ಯ ಮಂತ್ರಿಯವರು.
- ಕರ್ನಾಟಕ ರಾಜ್ಯದಲ್ಲಿ ಬದುಕಿರುವ ಮಾನ್ಯ ಮಾಜಿ ಮುಖ್ಯ ಮಂತ್ರಿಯವರು
- ಕರ್ನಾಟಕ ರಾಜ್ಯದಲ್ಲಿ ಬದುಕಿರುವ ಮಾನ್ಯ ಮಾಜಿ ಜಲಸಂಪನ್ಮೂಲ ಸಚಿವರು.
- ಮಾನ್ಯ ಪ್ರಧಾನ ಮಂತ್ರಿಯವರು.
- ಮಾನ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು.
- ಮಾನ್ಯ ಜಿಲ್ಲಾಧಿಕಾರಿಯವರು.
- ಮಾನ್ಯ ಜಿಲ್ಲಾ ಪಂಚಾಯತ್ ಸಿಇಓ ರವರು.
- ತುಮಕೂರು ಜಿಲ್ಲೆಯ ಎಲ್ಲಾ ಹಂತದ ಮಾಜಿ ಚುನಾಯಿತ ಜನಪ್ರತಿನಿಧಿಯವರು.
- ತುಮಕೂರು ಜಿಲ್ಲೆಯ ಸರ್ವಪಕ್ಷಗಳ ಅಧ್ಯಕ್ಷರು.
- ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು.
- ತುಮಕೂರು ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು.
- ತುಮಕೂರು ಜಿಲ್ಲೆಯ ವಿವಿಧ ವರ್ಗದ ಜನತೆ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವ.
ಪಡೆದು ಕೊಂಡು, ಸುಮಾರು 75 ಸಭೆಗಳನ್ನು ಆಯೋಜಿಸಿ, ತುಮಕೂರು ಜಿಲ್ಲೆಯಲ್ಲಿ ಇರುವ 4365 ಜಲಸಂಗ್ರಹಾಗಾರಗಳ ಮಾಲೀಕರು ಯಾರು ಎಂಬ ಬಗ್ಗೆ ದೃಢಿಕರಿಸಬೇಕು ಮತ್ತು ಅವುಗಳಿಗೆ ನದಿ ನೀರು ಅಲೋಕೇಷನ್ ಮಾಡಿಸುವವರೆಗೂ ಶ್ರಮಿಸಲೇ ಬೇಕಿದೆ ಎಂಬ ನಿರ್ಣಯಕ್ಕೆ ಬಂದೆವು.
ಬಹಳ ವರ್ಷಗಳ ಹಿಂದೆ ತುಮಕೂರಿನ ಬಿ.ಹೆಚ್.ರಸ್ತೆ ಅಗಲೀಕರಣವಾಗುವಾಗ ಪ್ರಜಾ ಪ್ರಗತಿ ದಿನ ಪತ್ರಿಕೆ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕೈಗೊಂಡ ಚಳುವಳಿ ಮಾದರಿಯಲ್ಲಿ, ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ಡಿಜಿಟಲ್ ಗಣತಿ ಆಗೂವವರೆಗೂ, ಶಕ್ತಿಪೀಠ ಫೌಂಡೇಷನ್ ಮತ್ತು ಪ್ರಜಾ ಪ್ರಗತಿ ದಿನ ಪತ್ರಿಕೆ ಹಾಗೂ ಪ್ರಗತಿ ಟಿ.ವಿ ಚಾನಲ್ ಮೂಲಕ ಚಾಟಿ ಬೀಸಲೇ ಬೇಕು ಎಂಬ ಚರ್ಚೆ ಮಾಡಿದ್ದೇವೆ.
ಸಂಪಾದಕರ ಜೊತೆ ಸಮಾಲೋಚನೆ ನಡೆಸಿ, ಮುಂದಿನ ಹೋರಾಟ ರೂಪಿಸಲು ಚಿಂತನೆ ನಡೆಸಲಾಗುವುದು. ನನ್ನ ಐಡಿಯಾಗಳನ್ನು ಶ್ರೀ ಹರೀಶ್ ಆಚಾರ್ಯರವರಿಗೆ ಹೇಳಿದ್ದೇನೆ. ಅವರು ಯಾವ ರೀತಿ ವರದಿ ಮಾಡುತ್ತಾರೆ ನೋಡೋಣ.