20th April 2024
Share

TUMAKURU: SHAKTHIPEETA FOUNDATION

ತಮಕೂರು ಜಿಲ್ಲೆಯ ನೀರಾವರಿಗೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಮಾಹಿತಿಗಳನ್ನು ಗ್ರಾಮವಾರು ಮತ್ತು ಸ್ಥಳೀಯ ಸಂಸ್ಥೆವಾರು ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಶ್ರೀ ರಾಜೇಂದ್ರ ಅವರಿಗೆ ಸೂಚಿಸಿದರು.

 ಜಿಯೋಮೆಟಿಕ್ ಸೆಂಟರ್ ಆರಂಭಿಸಿ ಸುಮಾರು 19  ವರ್ಷಗಳಾದರೂ ಇನ್ನೂ ಕರಾರುವಕ್ಕಾಗಿ ಡೇಟಾ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂಬ ಕಟು ಸತ್ಯದ ಮಾಹಿತಿಯನ್ನು ಮುಖ್ಯ ಇಂಜಿನಿಯರ್ ನೀಡಿದ್ದು ನಿಜಕ್ಕೂ ಆಶ್ಚರ್ಯವಾದರೂ ವಾಸ್ತವವಾಗಿತ್ತು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯವ ವರದಿ ಆಧಾರಿತ ನೀರಾವರಿ ಯೋಜನೆಯನ್ನು ಸಮೀಕ್ಷೆ ಮಾಡಲು ಇಸ್ರೋಗೆ ನೀಡಿದಾಗ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿ ಜಿಯೋಮೆಟಿಕ್ ಸೆಂಟರ್‌ನ್ನು ಸ್ಥಾಪಿಸಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸದಾಗಿ ಯೋಜನೆಗಳಿಗೆ ಹಣ ಖರ್ಚು ಮಾಡುವವರೆಗೂ ಇರುವ ಆಸಕ್ತಿ ನಂತರ ಇರುವುದಿಲ್ಲ. ಆಗಿನ ನೀರಾವರಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರ ವಿಶೇಷ ಆಸಕ್ತಿಯೊಂದಿಗೆ ಸೆಂಟರ್ ಪ್ರಾರಂಭವಾಗಿತ್ತು.

ಮೊದಲ ನಿರ್ಧೇಶಕರಾಗಿ ಶ್ರೀ ಡಾ.ವೈ.ಲಿಂಗರಾಜು ರವರನ್ನು ನೇಮಿಸಲು ನಾನೇ ಹೆಚ್.ಕೆ.ಪಾಟೀಲ್ ರವರಿಗೆ ಸಲಹೆ ನೀಡಿದ್ದೆ, ಇಂದು ನಿರ್ಧೇಶಕರಾಗಿ ಶ್ರೀ ವಿಜಯ್‌ಕುಮಾರ್ ಇದ್ದಾರೆ. ಇಲ್ಲಿಯವರೆಗೆ 19 ವರ್ಷಗಳಾದರೂ ತುಮಕೂರು ಜಿಲ್ಲೆಯ ನೀರಾವರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ ಮಾಡದೇ ಇರುವುದರ ಕಾರಣ ಏನು? ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.

ಡಿಜಿಟಲ್ ಭಾಷಣಕ್ಕೆ ಮತ್ತು ಕಾಗದದ ಮೇಲೆ ಇದೆಯೇ ಹೊರತು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ, ಕರಾರು ವಕ್ಕಾದ ಮಾಹಿತಿ ಸಂಗ್ರಹ ಯಾರಿಗೂ ಬೇಡವಾದ ಕೂಸು ಎಂದು ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಇಂಜಿನಿಯರ್ ರಾಜೇಂದ್ರರವರು ಮಾತನಾಡಿ ತುಮಕೂರು ಜಿಲ್ಲೆಯ ನೀರಾವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖಾವಾರು ಸಂಗ್ರಹಿಸಿ ನಿಮ್ಮ ಅನಿಸಿಕೆಯಂತೆ ಕರಾರು ವಕ್ಕಾದ ಡೇಟಾ ನೀಡುವ ಭರವಸೆ ನೀಡಿದರು. 

ಇಂದಿನಿಂದ ನಿಮಗೆ ಯಾವ ಇಲಾಖೆಯಿಂದ ಏನು ಮಾಹಿತಿ ಬೇಕು ಎಂಬ ಬಗ್ಗೆ, ಸಂಬಂಧಿಸಿದ ಇಲಾಖೆಗೆ ಪತ್ರಬರೆಯಿರಿ, ನನಗೂ ಒಂದು ಪ್ರತಿ ನೀಡಿ ಯಾವ ಇಲಾಖೆ ಸರಿಯಾದ ಮಾಹಿತಿ ನೀಡುವುದಿಲ್ಲವೋ ಅಂತಹ ಇಲಾಖಾ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಖಡಕ್ ಸಲಹೆ ನೀಡಿದರು.

ಸಭೆಯಲ್ಲಿ ನಿರ್ಧೇಶಕ ಶ್ರೀ ವಿಜಯಕುಮಾರ್, ಶ್ರೀ ಮತಿ ಲಲಿತ, ಶ್ರೀ ಶಿವಪ್ರಸಾದ್ ಮತ್ತು ತುಮಕೂರು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಇದ್ದರು.