28th March 2024
Share

TUMAKURU:SHAKTHIPEETA FOUNDATION

  ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು 2019-20 ನೇ ಸಾಲಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಾಗಿ ಆಯ್ಕೆ ಮಾಡಿದ್ದಾರೆ. ನೋಡೆಲ್ ಅಧಿಕಾರಿಯವರು ಇದೂವರೆಗೂ ಏನು ಮಾಡಿದ್ದಾರೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ. ಈ ಬಗ್ಗೆ ಇಂದಿನಿಂದ ವಿಶೇಷ ಗಮನ ಹರಿಸಲು ನಿರ್ಧಾರ ಕೈಗೊಂಡಿದ್ದೇನೆ.

  ಬಿದರೆ ಹಳ್ಳಕಾವಲ್‌ನಲ್ಲಿ ಸುಮಾರು 610 ಎಕರೆ ಜಮೀನನ್ನು ಹೆಚ್.ಎ.ಎಲ್ ಗೆ ನೀಡಿದ್ದೂ ಇನ್ನೂ 106 ಎಕರೆ ಸರ್ಕಾರಿ ಜಮೀನು ಉಳಿದಿದೆ. ಇಲ್ಲಿ ಹೆಚ್.ಎ.ಎಲ್ ಸ್ಮಾರ್ಟ್‌ವಿಲೇಜ್ ಮಾಡುವುದಾಗಿ ಜಿಎಸ್‌ಬಿ ರವರು ಘೋಶಿಸಿದ್ದು ಇತಿಹಾಸ, ಜಿಎಸ್‌ಬಿ ರವರ ಮನವಿ ಮೇರೆಗೆ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ವರದಿ ಸಲ್ಲಿಸಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಇತಿಹಾಸ.

 ‘ಇದೀಗ ಒಂದು ಹೊಸ ಸುದ್ಧಿ ಹರಡಿದೆ, ಶ್ರೀ ಬಿ.ಎಸ್.ಯಡಿಯೂರಪ್ಪನವರ ಆಪ್ತರು ಹಾಗೂ ಮಾನ್ಯ ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶ್ರೀ ಸಂತೋಷ್‌ರವರು ಜಮೀನು ಮೇಲೆ ಕಣ್ಣು ಹಾಕಿದ್ದಾರೆ. ನೀವು ಏಕೆ ಮೌನ ವಹಿಸಿದ್ದೀರಿ ಎಂದು ಇಲ್ಲಿನ ಜನ ಪ್ರಶ್ನೆ ಮಾಡುತ್ತಿದ್ದಾರೆ’

  ಉಳಿದಿರುವ 106 ಎಕರೆ ಪ್ರದೇಶದಲ್ಲಿ ಒಂದು ಅತ್ಯುತ್ತಮವಾದ ಸ್ಮಾರ್ಟ್ ವಿಲೇಜ್ ಲೇ ಔಟ್ ಮಾಡಿಸಿ ಭೂ ಸಂತ್ರಸ್ಥರು, ಹೆಚ್.ಟಿ.ಲೈನ್ ಸಂತ್ರಸ್ಥರುಗಳಿಗೆ ತಲಾ ಒಂದೊಂದು ನಿವೇಶನವನ್ನು ನೀಡಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು ಮತ್ತು ನಾನು ‘ಪಾಪ ತೊಳೆದುಕೊಳ್ಳಬೇಕಾಗಿದೆ.’

  ’ಏಕೆಂದರೆ ಜನಕ್ಕೆ ಬಹುಷಃ ನಾವುಗಳು ಇದೂವರೆಗೂ ನಿವೇಶನ ಕೊಡಿಸುತ್ತೇವೆ, ಮಾನ್ಯ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ಹೇಳಿ ಮನೆ ಮಂಜೂರು ಮಾಡಿಸುತ್ತೇವೆ ಎಂದು ಚೆಂಡು ಹೂ ಇಟ್ಟುಕೊಂಡು ಬಂದಿದ್ದೇವೆ’

  ಉಳಿದ ಜಾಗದಲ್ಲಿ  ಇಲ್ಲಿನ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸೃಷ್ಠಿ ಮಾಡುವಂತಹ ಎಜುಕೇಷನ್ ಹಬ್ ಅಥವಾ ಹೆಲ್ತ್ ಹಬ್ ಅಥವಾ ರಫ್ತು ಕೈಗಾರಿಕಾ ವಲಯ ಅಥವಾ ಯಾವುದಾದರೊಂದು ಉತ್ಪನ್ನದ ಸ್ಪೆಷಲ್ ಎಕನಾಮಿಕ್ ಝೋನ್’ ಮಾಡಿಸುವ ಉದ್ದೇಶ ಜನತೆಯದ್ದಾಗಿದೆ. ಇಲ್ಲಿ ತಾವೂ ಸಹ ಒಂದು ಉದ್ದಿಮೆ ಮಾಡುವುದಾದರೆ ತಪ್ಪಿಲ್ಲ, ಸ್ಥಳೀಯರು ಹೂಡಿಕೆ ಮಾಡುವ ಅವಕಾಶ ಕಲ್ಪಿಸುವುದು ಒಳ್ಳೆಯದು.

 ಆದರೇ ಇದ್ಯಾವುದರ ಗೋಜಿಗೆ ಹೋಗದೆ ತಾವು ಯಾರಿಗೋ ಜಮೀನು ಮಂಜೂರು ಮಾಡಿಸಲು ಶ್ರಮಿಸುತ್ತಿದ್ದೀರಿ ಎಂಬ ಅಪವಾದ ಬೇಡ. ನೀವು ಈಗ ಅಧಿಕಾರದಲ್ಲಿದ್ದೀರಿ, ತಾವೂ ಸವಾಲಾಗಿ ತೆಗೆದುಕೊಂಡು  ನಮ್ಮಗಳ ಕನಸಿನ ಯೋಜನೆಗೆ ಸಹಕರಿಸುತ್ತಿರೆಂಬ ಭರವಸೆ ನನಗಿದೆ. ತುಮಕೂರು ಜಿಲ್ಲೆಯವರಾದ ತಾವು ಜಿಲ್ಲೆಗೆ ಒಂದು ಬೃಹತ್ ಯೋಜನೆ ಮಂಜೂರು ಮಾಡಿಸುವತ್ತ ವಿಶೇಷ ಗಮನ ಹರಿಸುವುದು ಸೂಕ್ತವಾಗಿದೆ.