TUMAKURU:SHAKTHIPEETA FOUNDATION
ಸಂಸದರ ಆದರ್ಶ ಗ್ರಾಮದ ಯೋಜನೆಯ ತಾಜಾ ಮಾಹಿತಿ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳ ಜನತೆಗೂ ಬೆರಳತುದಿಯಲ್ಲಿ ದೊರೆಯುವಂತಾಗ ಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿಗಳಿಗೂ, ಅವರವರ ಇಲಾಖೆಯ ಯೋಜನೆಗಳ ಮತ್ತು ಸಮಪೂರ್ಣವಾಗಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮಾಹಿತಿಗಳನ್ನು ಹಂಚಿಕೊಳ್ಳಲು ಅಧಿಕಾರಿಗಳ ಮತ್ತು ಸಾರ್ವಜನಿಕರ ಸೋಶಿಯಲ್ ಮೀಡಿಯಾ ಗ್ರೂಪ್‌ಗಳನ್ನು ಪ್ರತ್ಯೇಕವಾಗಿ ರಚಿಸಲು, ಗುಬ್ಬಿ ತಾಲ್ಲೂಕು ಪಂಚಾಯಿತಿ ಇಓ ಶ್ರೀ ನರಸಿಂಹಯ್ಯನವರು, ಆಡಳಿತಾಧಿಕಾರಿ ಶ್ರೀ ಸೋಮಶೇಖರ್ ರವರು ಮತ್ತು ಪಿಡಿಓ ಶ್ರೀ ಗುರುಮೂರ್ತಿಯವರು ಸಭೆ ನಡೆಸಿ ಸರ್ವಾನುಮತದ ನಿರ್ಣಯ ಮಾಡಿದ್ದಾರೆ.
ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ, ಸರ್ಕಾರಿ ಯೋಜನೆಗಳ ಅರ್ಹ ಪಲಾನುಭವಿಗಳ ಪಟ್ಟಿ ಹಾಗೂ ಆಯಾ ಗ್ರಾಮದ ಯೋಜನೆಗಳನ್ನು ಗ್ರಾಮಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಆಯ್ಕೆ ಮಾಡುವುದು ನಿಯಮ. ಆದರೆ ಇಂದಿನ ಸಭೆಗಳಲ್ಲಿ ಗ್ರಾಮಸ್ಥರ ಮಧ್ಯೆ ಗಲಾಟೆ ಮಾಡಿಸಿ, ಯಾರದೋ ಮನೆಯಲ್ಲಿ ಕುಳಿತು ಪಟ್ಟಿ ಮಾಡುವುದು ಸಹಜವಾಗಿದೆ.
ಅಧಿಕಾರಿಗಳ ಸಮನ್ವಯತೆಗೂ ಅನೂಕೂಲವಾಗಲಿದೆ, ಈ ಎರಡು ಗ್ರೂಪ್‌ನಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಇರುವುದರಿಂದ ಅಗತ್ಯ ಮಾಹಿತಿಗಳನ್ನು ಮಾತ್ರ ಪೋಸ್ಟ್ ಮಾಡುವುದು ಸೂಕ್ತವಾಗಿದೆ.