18th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌ರವರು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯನ್ನು ಪ್ರತಿ ಶುಕ್ರವಾರ ಸಂಜೆ 5.30 ಗಂಟೆಗೆ ಜಿಐಎಸ್ ಸಂಬಂಧ ಸಭೆ ನಡೆಸಿ ತುಮಕೂರು ಸ್ಮಾರ್ಟ್ ಸಿಟಿಯನ್ನು ಡೇಟಾ ಸಿಟಿಯಾಗಿ ಮಾರ್ಪಾಡು ಮಾಡಲು ಪಣ ತೊಟ್ಟಿದ್ದರೆ, ಜಿಲ್ಲಾಧಿಕಾರಿಗಳಿಗೆ ನಾನೇನು ಕಮ್ಮಿ ಎನ್ನುವಂತೆ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ, ಜಿಪಂ ಸಿಇಓ ಹಾಗೂ ಎನ್.ಆರ್.ಡಿ.ಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷರು ಆದ ಶ್ರೀಮತಿ ಶುಭಕಲ್ಯಾಣ್‌ರವರು ವಾರದಲ್ಲಿ ಮೂರು ದಿವಸ ಜಿಐಎಸ್ ಸಭೆ ನಡೆಸುವ ಮೂಲಕ ಚಾಲನೆ ನೀಡಿದ್ದಾರೆ.

 ಭಾರತ ದೇಶದಲ್ಲಿಯೇ ಯಾವುದೇ ಜಿಲ್ಲೆಯ ದಿಶಾ ಸಮಿತಿ ನಿರ್ಣಯದಂತೆ, ರೀತಿ ಐಎಎಸ್ ಅಧಿಕಾರಿಗಳು ಜಿಐಎಸ್ ಲೇಯರ್ ಮಾಡಲು ಅವರವರ  ಸಮಯವನ್ನು ಮೀಸಲಿಟ್ಟು ಸಭೆ ನಡೆಸಿದ ಉದಾಹರಣೆಗಳು ಇಲ್ಲ ಎಂಬುದು ನನ್ನ ಭಾವನೆ.

 ಡಿಜಿಟಲ್ ಇಂಡಿಯಾ ಬರೀ ಭಾಷಣಕ್ಕೆ ಸೀಮಿತವಾಗಿದೆ ಎಂಬ ಅಪವಾದಕ್ಕೆ ತಿಲಾಂಜಲಿ ಇಡುವ ಮಟ್ಟಕ್ಕೆ ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಡಿಜಿಟಲ್ ಸಮರ ಸಾರಿದ್ದಾರೆ. ಇದೊಂದು ದಾಖಲೆಯಾಗಲಿದೆ, ಇದು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೂ ಮೆಚ್ಚುಗೆಯಾಗಲಿದೆ.

ದಿನಾಂಕ:30.06.2020 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆದು ನಿರ್ಣಯ ಮಾಡಿದ ತಕ್ಷಣವೇ ಸಂಜೆ ಇನ್ನೊಂದು ಪ್ರತ್ಯೇಕ ಸಭೆ ನಡೆಸಿದ ಸಿಇಓ ರವರು ದಿನಾಂಕ:01.07.2020 ರಿಂದಲೇ ದಿನಾಂಕ:07.12.2020 ರವರಗೆ ಇಲಾಖಾವಾರು ಸಭೆ ನಿಗದಿ ಪಡಿಸಿದ್ದಾರೆ. ನಿಜಕ್ಕೂ ಒಳ್ಳೆಯ ಬೆಳವಣಿಗೆ.