TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’
ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 15 ದಿವಸ.
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-14 ದಿನಾಂಕ: 24.11.2020
ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ರಾಜ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಬಳಿ ಶ್ರೀ ಜಿ.ಎಸ್.ಬಸವರಾಜ್ ರವರು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.
ದಿನಾಂಕ:23.11.2020 ರಂದು ಅವರ ಗೃಹ ಕಚೇರಿಗೆ ತೆರಳಿ, ಕೇಂದ್ರ ಸರ್ಕಾರದ ನದಿಜೋಡಣೆ ಯೋಜನೆಯಡಿಯಿಂದ ರಾಜ್ಯಕ್ಕೆ ಆಗುವ ಅನೂಕೂಲಗಳು ಮತ್ತು ರಾಜ್ಯದ ಯಾವ, ಯಾವ ನದಿಜೋಡಣೆ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸಲಾಯಿತು.
ಅಂತರರಾಷ್ಟ್ರೀಯ ಮಟ್ಟದ ನೀರಾವರಿ ತಜ್ಞರೊಂದಿಗೆ ಹಲವಾರು ಭಾರಿ ಚರ್ಚಿಸಲಾಗಿದೆ, ಭಧ್ರಾಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರದ ಎನ್.ಪಿ.ಪಿ ಯೋಜನೆಯಡಿಯಲ್ಲಿ ಘೋಶಿಸುವ ಮೂಲಕ ರಾಜ್ಯದ ಪ್ರಥಮ ನದಿಜೋಡಣೆ ಯೋಜನೆಯಾಗಿ ಮಾಡುವುದು ಅಗತ್ಯವಾಗಿದೆ, ಶೀಘ್ರದಲ್ಲಿಯೇ ಕೇಂದ್ರದಿಂದ ಸಿಹಿ ಸುದ್ದಿ ಬರಲಿದೆ.
ಎತ್ತಿನಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಡಿಯಲ್ಲಿ ತರುವುದು ಅಗತ್ಯವಾಗಿದೆ. ಈ ಯೋಜನೆಗೆ ಇನ್ನೂ ಹೆಚ್ಚಿನ ನೀರು ತರುವ ಯೋಜನೆ ರೂಪಿಸಲೇ ಬೇಕಿದೆ.
ಮೇಕೆದಾಟು ಯೋಜನೆಗೆ ಅಂತಿಮ ಸ್ವರೂಪ ನೀಡುವುದು ಬಹಳ ಪ್ರಮುಖ ವಿಷಯವಾಗಿದೆ.
ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಎನ್.ಪಿ.ಪಿ ಯೋಜನೆಯಡಿಯಲ್ಲಿ ತಂದಿರುವುದರಿಂದ ಯಾವ ಯಾವ ಭಾಗಕ್ಕೆ ಎಷ್ಟೆಷ್ಟು ನೀರು ತರಬಹುದು ಎಂಬ ಬಗ್ಗೆಯೂ ಚಿಂತನೆ ಆರಂಭವಾಗಿದೆ.
ಉತ್ತರ ಕರ್ನಾಟಕದ ಭಾಗಗಳಿಗೂ ಹಲವಾರು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇಡೀ ರಾಜ್ಯದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದಲ್ಲಿ ಮಾತ್ರ ರಾಜ್ಯದ ಜನತೆಗೆ ನೆಮ್ಮದಿ ನೀಡಲು ಸಾಧ್ಯ. ಹಲವಾರು ಯೋಜನೆಗಳ ಡಿಪಿಆರ್ ಮಾಡಲು ಚಾಲನೆ ನೀಡಲಾಗಿದೆ.
‘ತೆಲಂಗಾಣದ ಕಾಳೇಶ್ವರಂ ಯೋಜನೆಗೂ ಮೀರಿಸುವ ಬೃಹತ್ ಯೋಜನೆಗೆ ಚಾಲನೆ ನೀಡುವುದು ರಾಜ್ಯ ಸರ್ಕಾರದ ಆಧ್ಯತೆಯಾಗಿದೆ. ಈ ಬಗ್ಗೆ ಪೂರಕ ಸಿದ್ಧತೆ ಆರಂಭಿಲಾಗಿದೆ, ಶೀಘ್ರವಾಗಿ ತಮ್ಮ ಕನಸಿನ ಯೋಜನೆಗಳನ್ನು ರಾಜ್ಯದ ಜನತೆ ಮುಂದೆ ಇಡುವ ಇಂಗಿತ ವ್ಯಕ್ತಪಡಿಸಿದ್ದಾರೆ’
ಈ ಸಂದರ್ಭದಲ್ಲಿ ಶ್ರೀ ಇಂದ್ರಜಿತ್ ಲಂಕೇಶ್, ಶ್ರೀ ಲೋಕೇಶ್ ಇದ್ದರು.