16th April 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲಾ ದಿಶಾ ಸಮಿತಿ, ದೇಶದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಗಳಿಗಿಂತ ಅತ್ಯುತ್ತಮವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕು ಎಂದು, ಈ ಲೋಕಸಭಾ ಅವಧಿಯ  ದಿಶಾ ಸಮಿತಿ ರಚನೆಯಾದ ದಿನಾಂಕ:21.09.2019 ರಂದೇ ದೃಢ ನಿರ್ಧಾರ ಮಾಡಿ ತುಮಕೂರು ಲೋಕಸಭಾ ಸದಸ್ಯರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಘೋಶಿಸಿದ್ದರು.

ಪ್ರಧಾನಿ ಶ್ರೀ ನರೇಂದ್ರಮೋದಿಯವರು ಘೋಶಿಸಿದ ಡಿಜಿಟಲ್ ಇಂಡಿಯಾ’ ತುಮಕೂರು ಜಿಲ್ಲೆಯ ಪ್ರತಿ ಒಂದು ಇಂಚಿನ ಭೂ ಬಳಕೆಯ ಮಾಹಿತಿ ಜಿಐಎಸ್ ಆಧಾರಿತ ಜಿಲ್ಲೆಗೆ ‘MAP-1- DATA-1   OR ‘ಒಂದೇ ನಕ್ಷೆ- ಒಂದೇ ಕಡೆ ಡೇಟಾ’ ಎಂಬ ಘೋಷಣೆಯೇ ಮೂಲಮಂತ್ರವಾಗಿದೆ.

ಈವರೆಗೆ 5 ಯಶಸ್ವಿ ಸಭೆಗಳನ್ನು ನಡೆಸಿದ್ದಾರೆ. ಡಿಜಿಟಲ್ ಮಾಹಿತಿ ಸಂಗ್ರಹಕ್ಕಾಗಿ  ದಿಶಾ ಅಭಿವೃದ್ಧಿ ಪಾಠ ಮಾಡಿದ್ದಾರೆ. ಪ್ರತಿ ಸಭೆಯಲ್ಲೂ ಜಿಐಎಸ್ ಧ್ವನಿ’ ಮಾಡಿದೆ. ಪೂರಕವಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮತ್ತು ದಿಶಾ ಸದಸ್ಯಕಾರ್ಯದರ್ಶಿ ಹಾಗೂ ಜಿ.ಪಂ ಸಿಇಓ ಶುಭಕಲ್ಯಾಣ್ ರವರು  ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹ ಟೊಂಕ ಕಟ್ಟಿ ನಿಂತಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಆರಂಭದಲ್ಲಿ ಗೊಣಗುಟ್ಟುತ್ತಿದ್ದರೂ, 80 ವರ್ಷ ವಯಸ್ಸಿನ ಸಂಸದರು ಡಿಜಿಟಲ್ ಡೇಟಾಕ್ಕಾಗಿ ನವ ಯುವಕರಾಗಿದ್ದಾರೆ, ಯಾವುದೇ ಕಾರಣಕ್ಕೂ ಜಿಐಎಸ್ ಲೇಯರ್ ನೊಂದಿಗೆ ಡಿಜಿಟಲ್ ಡೇಟಾ ಸಂಗ್ರಹ ಮಾಡದೇ ಇದ್ದರೆ, ಇವರು ಬಿಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಂತೆ ಇದೆ.

 ‘ನನಗೂ ಇದು ಒಂದು ಸಂಶೋಧನೆಯಂತಾಗಿದೆ. ನಾನು ಕಳೆದ 32 ವರ್ಷದಿಂದ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ, ಏನೂ ಪ್ರತಿಪಾದನೆ ಮಾಡುತ್ತಿದ್ದೆ, ಕೆಲಸವನ್ನು ಮಾಡಲು ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯನಾಗಿ, ನನಗೂ ಒಂದು ಸುವರ್ಣ ಅವಕಾಶ ಸಿಕ್ಕಿದೆ. ಈಗ ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯನಾಗಿರುವುದು ಇನ್ನೂ ಒಳ್ಳೆಯದಾಗಿದೆ. ಪೇಪರ್ ಸಹ ನಮ್ಮ ಸಂಸ್ಥೆಗಳ ಕಾರ್ಯ ವೈಖರಿಯ ಬಗ್ಗೆ ಇಡೀ ವಿಶ್ವದಲ್ಲಿರುವ, ನಮ್ಮ ರಾಜ್ಯದ ಅಭಿವೃದ್ಧಿ ಆಸಕ್ತರಿಗೆ ದೊರೆಯುತ್ತಿದೆ’

 ತುಮಕೂರು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಎಲ್ಲದರಲ್ಲೂ ಮಾದರಿ ಆಗಲೇಬೇಕು ಎಂಬ ಛಲ ನನ್ನದೂ ಆಗಿದೆ. ಈ ಹಿನ್ನಲೆಯಲ್ಲಿ 5 ದಿಶಾ ಸಭೆಯ ಅನುಭವದ ಆಧಾರದ ನಂತರ, 6 ನೇ ದಿಶಾ ಸಭೆಗೆ ಒಂದು ತಿಂಗಳ ಮುಂಚಿತವಾಗಿ ಎಲ್ಲಾ ಸದಸ್ಯರಿಗೆ ಸಭೆಯ ಅಜೆಂಡಾ ಕೈತಲುಪಲು ಸಂಸದರು ಸಿಇಓ ರವರಿಗೆ ಈಗಾಗಲೇ ಸೂಚಿಸಿದ್ದಾರೆ.

 ಬಹುಷಃ ದಿನಾಂಕ:08.01.2021 ರಂದು 6 ನೇ ದಿಶಾ ಸಭೆ ಹಾಗೂ ತುಮಕೂರು ಜಿಐಎಸ್ ಲೋಕಾರ್ಪಣೆ’ ಆಗಲಿದೆ. ಈ ಸಭೆಯ ಅಜೆಂಡಾವೇ ಸುಮಾರು 35 ಪುಟಗಳು ಇದೆ. ಸಿಇಓ, ಪಿಡಿ ಮತ್ತು ಅವರ ತಂಡ ದಿನಾಂಕ21.11.2020 ರಂದು ನಡೆದ 5 ನೇ ದಿಶಾ ಸಮಿತಿಯ ನಿರ್ಣಯದಂತೆ ಮುಂದಿನ ದಿಶಾ ಸಭೆ ಅಜೆಂಡಾ ಸಿದ್ಧಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

 ಬಹುತೇಕ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಒಂದೇ ಕಡೆ ತರಲು ಶ್ರಮಿಸಿದ್ದಾರೆ. ಕಳೆದ ಐದು ಸಭೆಯ ಚರ್ಚೆಗಳ ವಿಷಯಗಳು ಸಹ 6 ನೇ ಸಭೆಯಲ್ಲಿ ಪ್ರತಿಧ್ವನಿಸಲಿದೆ. ಯಾವುದೇ ಇಲಾಖೆಯ ಯೋಜನೆ ಕೈಬಿಟ್ಟಿದ್ದಲ್ಲಿ, ಆಯಾ ಇಲಾಖೆಗಳು ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಘೋಷಣೆಗಳು ಎಲ್ಲದರ ಬಗ್ಗೆ ಕರಾರುವಕ್ಕಾದ ಮಾಹಿತಿ ನೀಡಲು ಖಡಕ್ ಆಗಿ ಸೂಚಿಸಿದ್ದಾರೆ.

 ಏನಿದು ತುಮಕೂರು ಜಿಐಎಸ್?

 ಅಂದರೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಯಾವೊದೋ ಕಾಲದಲ್ಲಿ ತಯಾರಿಸಿರುವ  ಟೋಪೋಶೀಟ್ ಮಾಹಿತಿಯಿಂದ ಆರಂಭಿಸಿ, ಈಗಿನ ತಾಜಾ ಗೂಗಲ್ ಡೇಟಾ ವರೆಗೂ ಜಿಲ್ಲೆಯ ಒಂದು ಇಂಚು ಭೂಮಿಯಲ್ಲಿ ಕೈಗೊಂಡಿರುವ ಎಲ್ಲಾ ಯೋಜನೆಗಳ ಮಾಹಿತಿ ಬೆರಳ ತುದಿಯಲ್ಲಿ ದೊರೆಯಲಿದೆ.

 ಕೇಂದ್ರ ಸರ್ಕಾರದ ಅನುದಾನದ ಯೋಜನೆ ಮಾತ್ರ ಇರಲಿದೆಯೇ? ಇಲ್ಲ, ದಿಶಾ ವ್ಯಾಪ್ತಿ ಕೇಂದ್ರ ಸರ್ಕಾರದ ಅನುದಾನಕ್ಕೆ  ಎಂದು ಭಾವಿಸಬೇಡಿ. ಡಿಜಿಟಲ್ ಯೋಜನೆ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಯೋಜನೆ ಪ್ರಗತಿ ಪರಿಶೀಲನೆಯೂ ದಿಶಾ ಸಮಿತಿ ವ್ಯಾಪ್ತಿಗಿದೆ.

 ಉದಾಹರಣೆ ನ್ಯಾಯಾಲಯದ ವ್ಯಾಪ್ತಿ ದಿಶಾ ಸಮಿತಿಗೆ ಬರದೇ ಇದ್ದರೂ, ತುಮಕೂರು ಜಿಲ್ಲೆಯಲ್ಲಿ ಇರುವ ನ್ಯಾಯಾಲಯದ ಆಸ್ತಿಗಳ ಜಿಐಎಸ್ ಲೇಯರ್ ದಿಶಾ ವ್ಯಾಪ್ತಿಗೆ ಬರಲಿದೆ. ಆದ್ದರಿಂದ ನ್ಯಾಯಾಲಯದ ಅಧಿಕಾರಿಗಳು ಸಹ ಅವರ ಆಸ್ತಿಗಳ ಮಾಹಿತಿ ಅಫ್‌ಡೇಟ್ ಮಾಡಲೇ ಬೇಕಿದೆ.

 ಆದ್ದರಿಂದ ಎಲ್ಲಾ ಇಲಾಖೆಗಳು ದಿಶಾ ವ್ಯಾಪ್ತಿಗೆ ಬರಲಿವೆ, ಆದರೇ ಹಣಕಾಸಿನ ದುರುಪಯೋಗ, ಅನುದಾನದ ಬಳಕೆ ಮಾತ್ರ ಕೇಂದ್ರ ಸರ್ಕಾರದ ಅನುದಾನಕ್ಕೆ ಮಾತ್ರ ಸೀಮಿತವಾಗಲಿದೆ. ರಾಜ್ಯ ಸರ್ಕಾರದ ಅನುದಾನಗಳ ಬಗ್ಗೆ ದಿಶಾ ಗಮನಹರಿಸುವುದಿಲ್ಲಾ ಎಂದಾದರೂ, ಯಾವುದೇ ಯೋಜನೆ ಡೂಪ್ಲಿಕೇಟ್ ಆಗಬಾರದು ಎಂದೇ ಜಿಐಎಸ್ ಲೇಯರ್ ಮಾಡಿರುವುದು.

 ಯಾರೂ ಇದೂವರೆಗೂ ತಿಮ್ಮಣ್ಣನ ಮನೆಯಿಂದ ರಂಗಣ್ಣನ ಮನೆಯವರಿಗೆ ರಸ್ತೆ ಅಭಿವೃದ್ಧಿ ಎಂದು ಒಂದು ಬಿಲ್, ಪುನಃ ಅದೇ ಯೋಜನೆಗೆ ರಂಗಣ್ಣನ ಮನೆಯಿಂದ ತಿಮ್ಮಣ್ಣನ ಮನೆಯವರೆಗೆ ರಸ್ತೆ ಅಭಿವೃದ್ಧಿ ಎಂದು ಇನ್ನೊಂದು ಬಿಲ್ ಮಾಡಿ ಹಣ ಕಬಳಿಸುತ್ತಿದ್ದಾರೋ ಅಂಥವರಿಗಂತೂ ನುಂಗಲಾರದ ತುತ್ತಾಗಿದೆ’

ಯಾವುದೇ ಒಂದು ಯೋಜನೆಗೆ ಪದೇ, ಪದೇ ಪ್ರತಿವರ್ಷ ಅನುದಾನ ಹಾಕಿ ಲೆಕ್ಕತೋರಿಸುತ್ತಿದ್ದರೋ, ಅವರಿಗೆ ತುಮಕೂರು ಜಿಐಎಸ್ ಎಚ್ಚರಿಕೆ ಘಂಟೆ’ ಯಾಗಲಿದೆ. ಪ್ರತಿ ವರ್ಷದ ಅನುದಾನದ ಮಾಹಿತಿಯೂ, ಆ ಯೋಜನೆಯ ಕ್ಲಿಕ್ ಮಾಡಿದ ತಕ್ಷಣ ಇತಿಹಾಸ ಸಹಿತ ದೊರೆಯಲಿದೆ.

ಏನಿದು ತುಮಕೂರು ಜಿಐಎಸ್ ಲೋಕಾರ್ಪಣೆ?

 ಇದೂವರೆಗೂ ಮಾಧ್ಯಮಗಳು, ಪರಿಣಿತರು, ಆರ್‌ಟಿಐ ಹೋರಾಟಗಾರರು, ವಿರೋಧ ಪಕ್ಷಗಳು ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಟೀಕಾಪ್ರಹಾರ ಮಾಡುತ್ತಿದ್ದರೋ, ಅವರು ನಿರ್ಧಿಷ್ಠವಾಗಿ ಯಾವುದು ಸರಿಯಿಲ್ಲ, ಹೇಗೆ ಸರಿಯಲ್ಲ ಎಂದು ಆಯಾ ಇಲಾಖಾವಾರು, ಯೋಜನೆವಾರು ಕಾಮೆಂಟ್ ಮಾಡಿ ಸಲಹೆ, ಅಭಿಪ್ರಾಯ ನೀಡಬಹುದಾಗಿದೆ. ಈ ಕಾಮೆಂಟ್ ಆಧಾರದ ಮೇಲೆ ಸಭೆಗಳಲ್ಲಿ ಸದಸ್ಯರು ಮಾತಾನಾಡುವ ಅವಕಾಶವೂ ದೊರೆಯಲಿದೆ. ‘ಇದೇ ಲೋಕಾರ್ಪಣೆಯ ಗುಟ್ಟು’

 ಅಷ್ಟೇ ಅಲ್ಲ ಸಂಸದರ ಕಚೇರಿಯಿಂದ ಯಾವುದೇ ಒಂದು ಅಭಿವೃದ್ಧಿ ಯೋಜನೆಗೆ ಪತ್ರ ಬರೆದಿದ್ದರೂ, ಆ ಯೋಜನೆಯ ಕಡತ ದಿಶಾ ಸಮಿತಿಯ ಗ್ರಂಥಾಲಯದಲ್ಲಿ ಇರಲಿದೆ. ಡಿಜಿಟಲ್ ಇ ಲೈಬ್ರರಿಯಲ್ಲೂ ದಾಖಲೆ ಆಗಲಿದೆ. ಇನ್ನೂ ಮುಂದೆ ಯಾರೇ ಎಂಪಿ ಆದರೂ ಹಿಂದಿನ ಎಂಪಿಯವರು ಏನೂ ಮಾಡಿದ್ದಾರೆ ಎಂಬ ಡಿಜಿಟಲ್ ಮಾಹಿತಿ ಇತಿಹಾಸವಾಗಲಿದೆ.

 ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್‌ರವರು ದಿಶಾ ಸಭೆಯಲ್ಲಿ ಸ್ಷಷ್ಟವಾಗಿ ಹೇಳಿದ್ದಾರೆ. ಪ್ರತಿಯೊಂದು ಇಲಾಖೆಗೂ ಎಷ್ಟು ಜನ ವಿಸಿಟ್ ಮಾಡಿದ್ದಾರೆ, ಎಂಬ ಡಿಜಿಟಲ್ ಲೆಕ್ಕ ತೋರಿಸುವಂತೆ ರಚಿಸಿ, ವೆಬ್‌ಸೈಟ್ ಗೆ ಮಾತ್ರ ಲೆಕ್ಕ ಇರಬಾರದು. ಯೋಜನಾವಾರು ಇರಲಿ ನಮಗೂ ಜನರಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದು ತಿಳಿಯಲಿ ಎಂಬ ಸಲಹೆ ನೀಡಿದ್ದಾರೆ’

 ಇನ್ನೂ ಮುಂದೆ ಯಾವುದೇ ಅಧಿಕಾರಿಗಳು, ಸಭೆಗೆ ಯಾವುದೋ ನೆಪ ಹೇಳಿ ಗೈರಾಜರಾದರೂ, ವಿಷಯವಾರು ಮಾಹಿತಿ ಮಾತ್ರ ಜಿಐಎಸ್ ಲೇಯರ್‌ನಲ್ಲಿ ರಾರಾಜಿಸಬೇಕು? ದಿಶಾ ಸಮಿತಿ ಸದಸ್ಯರು ವರ್ಕ್ ಪ್ರಮ್ ಹೋಂ’ ಮಾದರಿಯಲ್ಲಿ ಕಾಮೆಂಟ್ ಮಾಡಿದರೇ, ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಲಿದ್ದಾರೆ.

ಇದೂ ಒಂದು ತರಹ ಅಭಿವೃದ್ಧಿಯಲ್ಲಿ ಪಾರದರ್ಶಕತೆ, ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರು ಮಾಹಿತಿ ಹಕ್ಕು ಅಧಿನಿಯಮ ಜಾರಿ ಮಾಡಿ ಒಂದು ಮೆಟ್ಟಿಲು ಹಾಕಿದ್ದರು. ಇನ್ನೊಂದು ಡಿಜಿಟಲ್ ಮೆಟ್ಟಿಲನ್ನು ಹಾಲಿ ಪ್ರಧಾನಿ ನರೇಂದ್ರಮೋದಿಯವರು ಹಾಕಿದ್ದಾರೆ’

 ತುಮಕೂರು ಜಿಲ್ಲಾ ದಿಶಾ ಸಮಿತಿ, ಇವೆರಡು ಯೋಜನೆಗಳ ಸಮರ್ಪಕ ಜಾರಿಗಾಗಿ ಶ್ರಮಿಸುತ್ತಿದೆ. ಅಂದುಕೊಂಡಂತೆ ಆದರೇ, ಇದು ಒಂದು ಅಭಿವೃದ್ಧಿಯಲ್ಲಿ ಸುವರ್ಣಯುಗ ಬರಲಿದೆ. ಅಧಿಕಾರಿಗಳು ನೀರಿಯಳಿಯದ ಗಂಟಲಲ್ಲಿ ಕಡುಬು ತುರಿಕಿದಂತಾಯಿತು’ ಎನ್ನುವ ಹಾಗಿಲ್ಲ. ನಿಮಗೆ ಜಿಐಎಸ್ ಗೊತ್ತಿದ್ದರೆ ನೀವೇ ಅಫ್‌ಡೇಟ್ ಮಾಡಿ, ಇಲ್ಲ ಎಂದಾದರೇ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆದು ಅಫ್‌ಡೇಟ್ ಮಾಡಿ ಎನ್ನುತ್ತಾರೆ ಜಿ.ಎಸ್.ಬಸವರಾಜ್‌ರವರು.

‘ಕೇಂದ್ರ ಸರ್ಕಾರದ ನಡವಳಿಕೆ ನೋಡಿದಲ್ಲಿ, ಪ್ರತಿಯೊಂದು ಇಲಾಖೆಗಳಿಗೂ ಯೋಜನಾವಾರು ಅನುಷ್ಠಾನದ ರ್‍ಯಾಂಕಿಗ್ ನೀಡುವ ಕಾಲ ಈಗಾಗಲೇ ಬಂದಿದೆ. ನಮಗೂ ರ್‍ಯಾಂಕಿಗ್ ಪಡೆಯುವ ಆಸೆ ಇಲ್ಲವೇ? ನಾವೂ ಅಫ್ ಡೇಟ್ ಮಾಡಲೇ ಬೇಕು ಎಂಬ ಹಠ ಎಲ್ಲಾ ಇಲಾಖಾ ಅಧಿಕಾರಿಗಳಿಗೂ ಈಗಾಗಲೇ ಬಂದಿದೆ’

  ಸಂಸದರು ಗೆದ್ದು ಹೋದ ಮೇಲೆ ನಮ್ಮೂರಿಗೆ ಬಂದಿಲ್ಲ ಎಂದು ಟೀಕೆ ಮಾಡುವವರಿಗೆ, ಸಂಸದರು ಡಿಜಿಟಲ್ ರೂಪದಲ್ಲಿ ಪ್ರತಿ ಗ್ರಾಮದ ಅಭಿವೃದ್ಧಿ ಬಗ್ಗೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಪ್ರತಿ ಗ್ರಾಮದವರಿಗೂ ತಲುಪಲಿದೆ. ನೀವೂ ನೀಡುವ ಸಲಹೆಯನ್ನು ಅವರ ಅಭಿವೃದ್ಧಿ ತಂಡ ವಿಶೇಷವಾಗಿ ಗಮನಿಸಲಿದೆ’

 ಕರ್ನಾಟಕ ರಿಮೋಟ್ ಸೆನ್ಸಿಂಗ್ ಇತಿಹಾಸದಲ್ಲಿ, ಯಾವುದೇ ಒಂದು ಸಮಿತಿ ಸಭೆಯಲ್ಲಿ, ಈ ರೀತಿ ಆಳದವರೆಗೆ ಹೋಗಿರಲಿಲ್ಲ, ಇದೂ ನಮಗೂ ಒಂದು ಛಾಲೇಂಜ್ ಎಂದು ಹೆಸರು ಹೇಳದ ಅಧಿಕಾರಿಗಳು ಖುಷಿಪಡುತ್ತಿದ್ದಾರೆ.

 ರಾಜ್ಯ ಮಟ್ಟದ ಎನ್.ಆರ್.ಡಿ.ಎಂ.ಎಸ್. ಅಧಿಕಾರಿಗಳು ನಮಗೂ ಮಾಹಿತಿ ಕೇಳಿ, ಕೇಳಿ ಸಾಕಾಗಿ ಹೋಗಿತ್ತು,  ಯಾರು ಕೊಡುತ್ತಿರಲಿಲ್ಲ, ಈಗ ಅವರೇ ಹುಡುಕಿಕೊಂಡು ಬರುವ ಕಾಲ ಬಂದಿದೆ. ಕೊನೇ ಪಕ್ಷ ತುಮಕೂರು ಜಿಲ್ಲೆಯ ದಿಶಾ ಸಮಿತಿ, ಈ ದೃಢ ನಿರ್ಧಾರ ಮಾಡಿರುವುದು ನಿಜಕ್ಕೂ ಸ್ವಾಗಾತಾರ್ಹ ಎನ್ನುತ್ತಿದ್ದಾರೆ.

ಪಲಿತಾಂಶ ಕಾದುನೋಡೋಣ?