28th March 2024
Share

TUMKURU:SHAKTHIPEETA FOUNDATION

 ಕರಾಬು ಹಳ್ಳಗಳು ನೀರಿನ ಕಣಜಗಳಾಗಬೇಕು. ಹಳ್ಳಗಳ ಎರಡು ಬದಿಯಲ್ಲಿ ಹಸಿರು ನೃತ್ಯವಾಡಬೇಕು. ನಮ್ಮ ಪೂರ್ವಜರು ಹೀಗೆ ಮಾಡುತ್ತಿದ್ದರು, ಯಾವುದೇ ಹಳ್ಳ ನೋಡಿ ಹೊಂಗೆ ಗಿಡ ಹಾಕಿ ಸೊಪ್ಪನ್ನು ತೋಟ ಗದ್ದೆಗಳಿಗೆ ಬಳಸಲು ಹಸಿರು ಕಣಜಮಾಡುತ್ತಿದ್ದರು.

 ನಾವು ಮರಕಡಿದು ಹಾಕಿದ್ದೇವೆ, ಹಳ್ಳ ಮುಚ್ಚಿ ಸಮತಟ್ಟು ಮಾಡಿದ್ದೇವೆ, ಜಮೀನಿನ ಪಲವತ್ತು ಹಾಳು ಮಾಡಿದ್ದೇವೆ. ಪ್ರತಿ ವ್ಯಕ್ತಿ ಆರೋಗ್ಯಕ್ಕೆ ಎಷ್ಟು ಬೆಲೆಕೊಡುತ್ತಾನೆಯೋ, ಹಾಗೆ ಪ್ರತಿ ರೈತನು ತಮ್ಮ ಜಮೀನಿನನಲ್ಲಿರುವ ಕರಾಬುಹಳ್ಳಗಳಿಗೆ ಆಧ್ಯತೆ ನೀಡಬೇಕು. ಕರಾಬು ಹಳ್ಳಗಳನ್ನು ಹುಡುಕಿ ಪುನರ್‌ಜೀವ ಕೊಡಬೇಕು. ಈ ಕೆಲಸವನ್ನು ನಮ್ಮ ಕ್ಯಾಂಪಸ್‌ನಲ್ಲಿ ಮಾಡಿ ತೋರಿಸಬೇಕು. ಎಂಬ ದೃಷಿಯಿಂದ ಕರಾಬು ಹಳ್ಳಗಳ ಅಧ್ಯಯನ ವರದಿ ಪಡೆಯಲು ಚಿಂತನೆ ನಡೆಸಿದ್ದೇವೆ.

 ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌ನಲ್ಲಿ ಅಷ್ಟಭುಜಾಕೃತಿ ಸುತ್ತಲೂ ನೀರು ಮತ್ತು ಹಸಿರು ಗೋಡೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ನೈರುತ್ಯದಿಂದ ಅಗ್ನೇಯ ದಿಕ್ಕಿನ ಮೂಲಕ ಈಶಾನ್ಯ ದಿಕ್ಕಿಗೂ ಹಾಗೂ ನೈರುತ್ಯದಿಂದ ವಾಯುವ್ಯ ದಿಕ್ಕಿನ ಮೂಲಕ ಈಶಾನ್ಯ ದಿಕ್ಕಿಗೂ ನೀರು ಸರಾಗವಾಗಿ ಹರಿಯುವಂತೆ ಮಾಡುವ ವಿಫುಲ ಅವಕಾಶಗಳಿವೆ.

 ನಮ್ಮ ಕ್ಯಾಂಪಸ್‌ಗೆ ಸುಮಾರು 7 ಕಡೆಗಳಿಂದ ಮಳೆ ನೀರು ಹರಿಯಲಿದೆ. ಈ ನೀರಿನ ಕೃತಕ ಕಾಲುವೆ ಹಾಗೂ ಕರಾಬು ಹಳ್ಳಗಳಿಗೆ ಸಪ್ತಮಾತೃಕೆಯರ ಹೆಸರು ಇಡಲು ಕೆಲವರು ಸಲಹೆ ನೀಡುತ್ತಿದ್ದಾರೆ. ಸುಮಾರು ೫೮೩ ಕ್ಯುಸೆಕ್ಸ್ ಮಳೆ ನೀರು ನಮ್ಮ ಕ್ಯಾಂಪಸ್ ಮೂಲಕ ಹರಿಯಲಿದೆ.

 ಚಿತ್ರದುರ್ಗ ಜಿಲ್ಲೆಯ ಭರದ ನಾಡಿನಲ್ಲೂ ಮಳೆ ನೀರಿನ ಸಂಭ್ರಮ ಆಚರಿಸ ಬಹುದಾಗಿದೆ. ಭರದ ನಾಡಿನಲ್ಲೊಂದು ಮಲೆನಾಡು ವಾತಾವಾರಣ ಸೃಷ್ಟಿಸುವ ಪ್ರಯತ್ನ ನಡೆದಿದೆ. ಸುಡು ಬೇಸಿಗೆಯಲ್ಲೂ ನೀರು ನಿಂತಿರುವ ಕಡೆ ವಾತವಾರಣದ ಗಮತ್ತೇ ಬೇರೆ ಇರುತ್ತದೆ. ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ.

 ಈಶಾನ್ಯ ದಿಕ್ಕಿನಿಂದ ಉತ್ತರದ ದಿಕ್ಕಿನ  ಮೂಲಕ ನೀರು ಹೊರಗಡೆ ಹರಿಯುವ ಹಾಗೆ ಮಾಡಲಾಗುವುದು. ಕೆಲವು ವಾಸ್ತು ತಜ್ಞರು ಸುತ್ತಲೂ ನೀರು ಇದ್ದರೆ ಬಹಳ ಒಳ್ಳೆಯದು ಎಂತಲೂ, ಕೆಲವರು ಅಗ್ನೇಯ ದಿಕ್ಕಿನಲ್ಲಿ ನೀರು ನಿಲ್ಲಬಾರದು ಎಂತಲೂ, ಕೆಲವರು ಆಗ್ನೆಯ ದಿಕ್ಕಿನಲ್ಲಿ ತಗ್ಗುಮಾಡಿ ನೀರು ನಿಲ್ಲಿಸಬಾರದು. ಎತ್ತರಕ್ಕೆ ಅನುಗುಣವಾಗಿ ನೀರು ನಿಂತರೆ ತಪ್ಪಿಲ್ಲ ಎಂಬ ಸಲಹೆಗಳನ್ನು ನೀಡುತ್ತಿದ್ದಾರೆ.

  ವಾಸ್ತು ಪ್ರಕಾರ ನೀರು ನಿಲ್ಲಿಸಬಹುದು ಎಂಬ ಕಡೆ ನೀರು ನಿಲ್ಲಿಸಿ, ನೀರು ನಿಲ್ಲಬಾರದು ಎಂಬ ಕಡೆ ನೀರು ನಿಲ್ಲದ ಹಾಗೆ ಸರಾಗವಾಗಿ ನೀರು ಹರಿಯುವ ಹಾಗೆಯೂ ಮಾಡುವ ಅವಕಾಶಗಳಿವೆ. ನಮ್ಮ ಕ್ಯಾಂಪಸ್‌ನಲ್ಲಿ ವಿಶೇಷವಾಗಿ ನೀರು ಮತ್ತು ಹಸಿರು ವಾತಾವಾರಣಕ್ಕೆ  ಒತ್ತು ನೀಡಲಿದೆ.

ಪರಿಣಿತರ ಸಲಹೆಗಾಗಿ ಮನವಿ.