TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ತುಮಕೂರು ಜಿಲ್ಲೆ ವಸಂತನರಸಾಪುರಕ್ಕೆ ರೂ 1700 ಕೋಟಿ ವೆಚ್ಚದ ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಮಂಜೂರು ಮಾಡಿದೆ. ತುಮಕೂರು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಯೊಬ್ಬರೂ, ಕೈಗಾರಿಕಾ ಸಚಿವರೊಂದಿಗೆ ಮಾತನಾಡುತ್ತಾ ಏನ್‌ಸಾರ್ ಇಂಡಸ್ಟ್ರಿಯಲ್ ಕಾರಿಡಾರ್ ವಸಂತನರಸಾಪುರಕ್ಕೆ ಏಕೆ ಕೊಟ್ಟೀದ್ದೀರಿ, ಕೊಡುವುದಾದರೆ ನಮ್ಮ ತಾಲ್ಲೂಕಿಗೆ ಕೊಡಿ ಎಂದು ಅಬ್ಬರಿಸಿದರಂತೆ.
ಅವರು ಸ್ವಾಮಿ ಇಂಡಸ್ಟ್ರಿಯಲ್ ಕಾರಿಡಾರ್ ಇಂದಿನದಲ್ಲ, ಸುಮಾರು 2009 ರಿಂದ ಪ್ರಯತ್ನಿಸಿ, ಇಂದಿನವರೆಗೂ ಶ್ರಮಹಾಕಿ, ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿರುವುದು ನಿಮ್ಮ ಎಂಪಿ ಶ್ರೀ ಜಿ.ಎಸ್.ಬಸವರಾಜ್‌ರವರು. ನಾನಲ್ಲ ಕೊಟ್ಟಿರುವುದು, ನೀವೂ ಅವರನ್ನೇ ಕೇಳಿ ಎಂದಾಗ ಮೌನವಹಿಸಿದರಂತೆ.
ಆ ಪುಣ್ಯಾತ್ಮರೂ ಹೇಮಾವತಿ ನಮ್ಮೂರಿಗೆ ಹರಿಯಲ್ಲ, ಗುತ್ತಿಗೆದಾರರಿಗೆ ಹಣ ಕೊಡಿಸುವ ಹುನ್ನಾರ, ನೇತ್ರಾವತಿ(ಎತ್ತಿನಹೊಳೆ) ಹೇಗೆ ಬರಕ್ಕೆ ಸಾಧ್ಯಾ? ಆ ಎಂಪಿ ಬಸವರಾಜ್ ಬರೀ ಸುಳ್ಳು ಹೇಳುತ್ತಾರೆ. ಪರಮಶಿವಯ್ಯನವರ ಕಾರು ಮೊದಲು ಹಿಂದಕ್ಕೆ ತಗೊಳ್ರಿ ಎಂದು ಸರ್ಕಾರಕ್ಕೆ ಪತ್ರಬರೆದಿದ್ದರಂತೆ.
ಭಧ್ರಾ ಮೇಲ್ದಂಡೆ ಬರೇ ಬುರುಡೆ, ಹೆಚ್.ಎ.ಎಲ್ ಏಕೆ ಬೇಕ್ರಿ? ತುಮಕೂರಿಗೆ ರಿಂಗ್ ರೋಡ್ ಏಕ್ರಿ. ತುಮಕೂರಿಗೆ ಏರ್ ಪೋರ್ಟ್ ಯಾರ್ ಕೊಡುತ್ತಾರೆ. ವಸಂತಾನರಸಾಪುರದ ಕೈಗಾರಿಕಾ ವಲಯ ಬರೀ ಲಿಂಗಾಯಿತರ ಜಮೀನು ಹಾಳುಮಾಡಿದ್ದಾರೆ ಆ ಎಂಪಿ ಬಸವರಾಜ್. ಕರೆಂಟ್ ಕೊಡುತ್ತೇವೆ ಎಂದು ಹೇಳಿ ರೈತರ ಜಮೀನು ಮೇಲೆ ಲೈನ್ ಎಳೆದು ಅವರ ಮನೆ ಹಾಳುಮಾಡಿದ್ದಾರೆ. ವಸಂತಾನರಸಾಪುರಕ್ಕೆ ಎತ್ತಿನಹೊಳೆ ನೀರು ಏಕೆ ಕೊಡ್ತಿರಿ? ಎಂದು ಅಮೃತವಾಣಿಯ ನುಡಿ ಮುತ್ತುಗಳನ್ನು ಆಗಾಗ್ಗೆ ಉದುರಿಸುವ ಈ ಮಹಾನ್ ನಾಯಕರು.
ನಮ್ಮ ತಾಲ್ಲೂಕಿಗೆ ಇಂಡಸ್ಟ್ರಿಯಲ್ ಕಾರಿಡಾರ್ ಕೊಡಿ ಎನ್ನುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿರುವುದಕ್ಕೆ ನಿಜಕ್ಕೂ ಅಭಿನಂದನೆಗಳು. ಒಂದು ಕೈಗಾರಿಕಾ ವಲಯ ಮಾಡಿಸಿದರೂ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ ಅಥವಾ ಕೋಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್ ಮಾಡಿಸಿದರೂ ಕೊನೇ ಪಕ್ಷ ತೆಂಗು ಬೆಳೆಗಾರರಿಗೆ ವರದಾನವಾಗಲಿದೆ. ದಯವಿಟ್ಟು ಮಾಡಿಸಿ ಸ್ವಾಮಿ ಎಂದು ಆ ತಾಲ್ಲೂಕಿನ ಜನ ಹೇಳಲು ಎದುರುತ್ತಾರಂತೆ.
ಅದೂ ಅಲ್ಲದೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂದು ಸಾವಿರ ಕೋಟಿ ತುಮಕೂರಿಗೆ ಏಕ್ರಿ? ನಮ್ಮ ತಾಲ್ಲೂಕಿಗೂ ಕೊಡಿ ಎಂದಿದ್ದರಂತೆ ಈ ರಣಧೀರರು. ನಿಜಕ್ಕೂ ಮಾತೃ ತಾಲ್ಲೂಕಿನ ಪ್ರೀತಿಗೆ ಮೆಚ್ಚಲೇ ಬೇಕು.