TUMAKURU:SHAKTHIPEETA FOUNDATION
ಯೋಜನಾ ಇಲಾಖೆ ಸಚಿವರು ಎಂದರೆ, ಅಯ್ಯೋ ಪ್ಲಾನಿಂಗಾ! ಎಂಬ ಭಾವನೆ ಆನೇಕ ಸಚಿವರಲ್ಲಿದೆ. ಈ ಖಾತೆಯ ಮಹತ್ವ ಅರಿತರೆ ಎಲ್ಲಾ ಖಾತೆಗಳ ಜುಟ್ಟು ಇವರ ಕೈಲಿ ಇರುತ್ತದೆ.
ಪರಿಸರ, ಸಂಸದೀಯ, ಕಾನೂನು ಮತ್ತು ಯೋಜನಾ ಇಲಾಖೆ ದುಡ್ಡು ಮಾಡುವವರಿಗೆ ಒಳ್ಳೆಯ ಖಾತೆಯಲ್ಲದೆ ಇರಬಹುದು. ಕೆಲಸ ಮತ್ತು ಹೆಸರು ಮಾಡಬೇಕು ಎನ್ನುವವರಿಗೆ ಬಹಳ ಒಳ್ಳೆಯ ಖಾತೆ.
ನಮ್ಮ ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಸಚಿವರಾದ ಶ್ರೀ ಮುನಿರತ್ನರವರು ಅವರ ಒಡನಾಡಿಗಳ ಬಳಿ, ಈ ಖಾತೆಗೆ ಒಂದು ಹೊಸ ರೂಪು ಕೊಡುವ ಬಗ್ಗೆ ಸಮಾಲೋಚನೆ ನಡೆಸಿದ್ದಾರಂತೆ.
ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕಚೇರಿಯಲ್ಲಿ ಕಾರ್ಯ ನಿರ್ವಹಸಿದ್ದ ಅಧಿಕಾರಿಯೊಬ್ಬರೂ, ಈ ರಾಜ್ಯದಲ್ಲಿನ ಇಬ್ಬರ ಹೆಸರು ಹೇಳಿ ಇವರ ಸಲಹೆ ಪಡೆದರೆ ದೇಶದಲ್ಲಿಯೇ ಒಂದು ಸುದ್ಧಿ ಮತ್ತು ಹೆಸರು ಮಾಡಬಹುದು ಎಂದು ಸಲಹೆ ನಿಡಿದ್ದಾರಂತೆ.
ಶ್ರೀ ಮನಿರತ್ನವರ ಚಿಂತನೆ ನಿಜಕ್ಕೂ ಅಭಿನಂದನೀಯ, ಪ್ರಧಾನಿ ಶ್ರೀ ನರೇಂದ್ರಮೋದಿಯವರಿಗೆ ಆತ್ಮೀಯರಾಗ ಬೇಕು ಎನಿಸಿದರೆ ಈ ಖಾತೆಗೆ ಹೊಸರೂಪು ಕೋಡಲೇ ಬೇಕಿದೆ. ಕಾದು ನೋಡೋಣ ಯಾವ ಹೆಜ್ಜೆ ಇಡಲಿದ್ದಾರೆ.