16th April 2024
Share

TUMAKURU:SHAKTHIPEETA FOUNDATION

ನನಗೆ ತಿಳಿದಿರುವ ಪ್ರಕಾರ 2024 ರೊಳಗೆ ನಮ್ಮ ರಾಜ್ಯದ ಎಲ್ಲಾ ಮನೆಗೂ ಶುದ್ಧ ಕುಡಿಯುವ ನೀರು ನೀಡಬೇಕಾದಲ್ಲಿ , ರಾಜ್ಯದ ಹಲವಾರು ಕಡೆ ಜಲಜೀವನ್ ಮಿಷನ್ ವಾಟರ್ ಬ್ಯಾಂಕ್ ಮಾಡಲೇ ಬೇಕು. ರಾಜ್ಯದ ಪೂರ್ಣ ಅರಿವು ನನಗೆ ಇನ್ನೂ ಇಲ್ಲ. ಆದರೂ ಈ ಕೆಳಕಂಡ ಸ್ಥಳದಲ್ಲಿ ನದಿ ನೀರು ಸಂಗ್ರಹ ಮಾಡಿದರೆ  ರಾಜ್ಯದ ಬಹುತೇಕ ಪ್ರದೇಶಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ. ಇಲ್ಲದೆ ಇದ್ದಲ್ಲಿ ಕಡತದಲ್ಲಿ ಮಾತ್ರ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಎಂದು ಹೇಳಬೇಕಷ್ಟೆ.

ಈ ವಿಚಾರ ನೀರಾವರಿ ತಜ್ಞ ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರಿಗೂ ಗೊತ್ತು.

  1. ರಾಮನಗರ ಲೋಕಸಭಾ ಕ್ಷೇತ್ರದ ಮೇಕೆದಾಟು ಬಳಿ ಹೊಸದಾಗಿ ನಿರ್ಮಾಣ ಮಾಡಬೇಕಿರುವ ಡ್ಯಾ-67 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  2. ಕೊಪ್ಪಳ ಲೋಕಸಭಾ ಕ್ಷೇತ್ರz ಹಿರೆವಡ್ಡಹಟ್ಟಿ ಬಳಿ ಹೊಸದಾಗಿ ನಿರ್ಮಾಣ ಮಾಡಬೇಕಿರುವ ಡ್ಯಾ-27 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  3. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಾಣಿವಿಲಾಸ ಹಾಲಿ ಇರುವ ಡ್ಯಾಂ- 30 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  4. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶರವಾತಿ ಹಾಲಿ ಇರುವ ಡ್ಯಾಂ ಅಥವಾ ನೀರು ಕೆಳಗಡೆ ಬಿದ್ದ ನಂತರ ಲಿಫ್ಟ್ ಮಾಡಲು ವ್ಯವಸ್ಥೆ.-150 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  5. ತುಮಕೂರು ಲೋಕಸಭಾ ಕ್ಷೇತ್ರದ ಜಾಲಗುಣಿ ಬಳಿ ಹೊಸದಾಗಿ ನಿರ್ಮಾಣ ಮಾಡಬೇಕಿರುವ ಡ್ಯಾಂ- 50 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  6. ತುಮಕೂರು ಲೋಕಸಭಾ ಕ್ಷೇತ್ರದ ಸಿಂಗದಹಳ್ಳಿ ಬಳಿ ಹೊಸದಾಗಿ ನಿರ್ಮಾಣ ಮಾಡಬೇಕಿರುವ ಡ್ಯಾಂ- 75 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯ.
  7. ರಾಜ್ಯದ ಇತರೆ ಭಾಗಗಳ್ಲಿ ಹೊಸದಾಗಿ ಡ್ಯಾಂ ನಿರ್ಮಾಣ ಮಾಡುವ ಸೈಟ್ ಇದ್ದಲ್ಲಿ ಒಂದು ವಾರದಲ್ಲಿ ಮಾಹಿತಿ ಸಂಗ್ರಹ ಮಾಡಲಾಗುವುದು ಮಾಹಿತಿ ಇದ್ದಲ್ಲಿ ದಯವಿಟ್ಟು ತಿಳಿಸಿ.

ಈ ನೀರನ್ನು ರಾಜ್ಯದ ಯಾವುದೇ ಭಾಗಕ್ಕೂ, ಬರಗಾಲ ಬಂದಾಗ  ಕುಡಿಯುವ ನೀರಿಗೆ ನೀಡಬೇಕು. ಪ್ರವಾಹದ ಸಂದರ್ಭದಲ್ಲಿ ನೀರು ತುಂಬಿಸಿಟ್ಟು ಕೊಳ್ಳ ಬೇಕು. ಕೃಷಿಗೆ ನೀರು ನೀಡಬಾರದು.

ಮೋದಿಯವರು ಈ ಯೋಜನೆಗೆ ಹಣ ನೀಡಲೇ ಬೇಕು.

ಮೋದಿಯವರು ಈ ಯೋಜನೆಗೆ ಅನುಮತಿ ನೀಡಲೇ ಬೇಕು.

ಅರಣ್ಯ ಇಲಾಖೆ ಜಮೀನು ಮುಳುಗಡೆ ಆದಲ್ಲಿ ರಾಜ್ಯ ಸರ್ಕಾರ ಬದಲಿ ರೆವಿನ್ಯೂ ಜಮೀನು ನೀಡಲೇ ಬೇಕು.

ತಪ್ಪೇನು?

ಕಾಂಗ್ರೇಸ್ ಪಾದಯಾತ್ರೆ ಮಾಡಲಿ.

ಬಿಜೆಪಿ ಸಂಸದರ ನಿಯೋಗ ಮೋದಿಯವರ ಬಳಿ ತೆರಳಲಿ.

ಜನತಾದಳ ವಿಧಾನ ಸೌಧದ ಮುಂದೆ ಧರಣಿ ಕೂರಲಿ.

ಜನ ಮೆಚ್ಚುವ ಕೆಲಸವನ್ನು ಪಕ್ಷಾತೀತವಾಗಿ ಮಾಡಿ.