22nd November 2024
Share

TUMAKURU:SHAKTHIPEETA FOUNDATION

 ದಿನಾಂಕ:04.06.2022 ರಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಮಾಹಿತಿ ಕಣಜದ ಜಿಲ್ಲಾ ಮಟ್ಟದ ಯೋಜನೆ ಮತ್ತು ಸಮನ್ವಯ ಸಭೆ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ರಾಜ್ಯ ಸರ್ಕಾರದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಗೌರ್ವನೆನ್ಸ್ ವಿಭಾಗದ ನಿರ್ದೇಶಕರಾದ ಶ್ರೀಮತಿ ಶಿಲ್ಪನಾಗ್ ಐಎಎಸ್ ರವರು ಮತ್ತು ಮಾಹಿತಿ ಕಣಜ ಇ ಆಡಳಿತ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರೀವ್ಯಾಸ್ ರವರು  ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು  ಈ ಯೋಜನಗೆ ಆಯ್ಕೆ ಮಾಡಿರುವುದಾಗಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುತ್ತಾರೆ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯು ಜಿಐಎಸ್ ಲೇಯರ್ ಮತ್ತು ರಿಯಲ್ ಟೈಮ್ ಡಾಟಾ ಸಂಗ್ರಹಣೆ ಬಗ್ಗೆ ಬಹಳ ಒತ್ತು ನೀಡಿದೆ. ಇದರಿಂದ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಯಲ್ಲಿ ಪಾರದರ್ಶಕತೆಗೆ ಪೂರಕವಾಗಿರುತ್ತದೆ.

ತುಮಕೂರಿನ ಶಕ್ತಿ ಪೀಠ ಫೌಂಡೇಷನ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮತ್ತು ಡಾಟಾ ವಿಜ್ಞಾನಿ ಚಿ.ಕೆ.ಆರ್.ಸೋಹನ್, ರಾಜ್ಯ ಸರ್ಕಾರದ ಯೋಜನಾ ಇಲಾಖೆ ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಚರ್ಚಿಸಿ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ಕಾರ್ಯತಂತ್ರ ರೂಪಿಸುವ ಕೆಲಸ ಆರಂಭಿಸಿದ್ದಾರೆ.

ಫೈಲಟ್ ಯೋಜನೆಯಾಗಿ

  1. ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಗಳನ್ನು ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೌಲ್ಯಮಾಪನ ಮಾಡುವುದು. ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆ ವರದಿ ಸಿದ್ಧಪಡಿಸಿ ರಾಜ್ಯಾಂಧ್ಯಾಂತ ವಿಸ್ತರಣೆ ಮಾಡುವುದು.
  2. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿಯನ್ನು  ಡಾಟಾ ಗ್ರಾಮ ವಾಗಿ ಘೋಷಣೆಗೆ ಅಧ್ಯಯನ ಮಾಡುವುದು.
  3. ತುಮಕೂರು ಮಹಾನಗರ ಪಾಲಿಕೆಯ ಉಧ್ಯಾನವನಗಳ ಮೌಲ್ಯ ಮಾಪನ ವರದಿ ಸಿದ್ಧಪಡಿಸುವುದು.
  4. ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕಿನ. ಸ್ವಾಂದೇನಹಳ್ಳಿ ಗ್ರಾಮದಲ್ಲಿ ಜಲಗ್ರಾಮ ಕ್ಯಾಲೇಂಡರ್ ಯೋಜನೆ ಸಂಶೋಧನೆ ಮಾಡುವುದು.
  5. ಪೂರಕವಾಗಿ ವಸಂತನರಸಾ ಪುರದ ಕೈಗಾರಿಕಾ ಪ್ರದೇಶದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಸ್ಥಾಪಿಸಲು ತುಮಕೂರು  ಜಿಲ್ಲಾ ಕೈಗಾರಿಕಾ ಕೇಂದ್ರದ ಸಿಂಗಲ್ ವಿಂಡೋ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗಿದೆ.

  ಮಾಹಿತಿ ಕಣಜದ ಉದ್ದೇಶಗಳ ಜೊತೆಗೆ, ಕುಂದರನಹಳ್ಳಿ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಂದು ಕುಟುಂಬದ, ಪ್ರತಿಯೊಂದು ಗ್ರಾಮಠಾಣ ಸ್ವತ್ತಿನ ಮತ್ತು ಪ್ರತಿಯೊಂದು ಸರ್ವೆ ನಂಬರ್ ಸ್ವತ್ತಿನ ಸಂಪೂರ್ಣ ಡಿಜಿಟಲ್ ಮಾಹಿತಿ, ಜಿಐಎಸ್ ಲೇಯರ್ ಹಾಗೂ ಎಲ್ಲಾ ವಿವಾದಗಳಿಂದ ಮುಕ್ತಗೊಳಿಸಿ ಗ್ರಾಮದ ಜನತೆಗೆ ಸಂತೋಷ, ನೆಮ್ಮದಿ ತರುವಂತ ಪ್ರಯತ್ನವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ವಿಶೇಷ ಯೋಜನೆಯಾಗಿ, ಶಕ್ತಿಪೀಠ ಫೌಂಡೇಷನ್ ಶ್ರಮಿಸುತ್ತಿದೆ. ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂಧಿಸುತ್ತಿವೆ.

ಜನತೆಯ ಸಹಭಾಗಿತ್ವದ ಪಿಪಿಪಿ ಯೋಜನೆಯಡಿಯಲ್ಲಿ ಒಂದು ಡಿಜಿಟಲ್ ಡಾಟಾ ಕ್ರಾಂತಿಗೆ ಮುನ್ನಡಿ ಬರೆಯುವುದು, ಮೂಲ ಉದ್ದೇಶವಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ  ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆಯುವ ಸಭೆ ಮಹತ್ವದ್ದಾಗಿದೆ.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಯ ನಾಯಕತ್ವ ವಹಿಸಿರುವ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈ ಎಲ್ಲಾ ಯೋಜನೆಗಳ ನಾಯಕತ್ವ ವಹಿಸಿದ್ದಾರೆ. ಜಲರಥ, ಸಂಸದರ ಮ್ಯೂಸಿಯಂ ಪರಿಕಲ್ಪನೆ ಬಗ್ಗೆಯೂ ಚಿಂತನೆ ಆರಂಭವಾಗಿದೆ.

ಕಂದಾಯ ಇಲಾಖೆ ಸಚಿವರಾದ ಶ್ರೀ ಆರ್.ಅಶೋಕ್ ರವರ ಗ್ರಾಮ ವಾಸ್ತವ್ಯ ಯೋಜನೆಯಂತೆ, ರಾಜ್ಯ ಸರ್ಕಾರದ ಯೋಜನಾ ಸಚಿವರಾದ ಶ್ರೀ ಮುನಿರತ್ನರವರು ರಿಯಲ್ ಟೈಮ್ ಡಾಟಾ ಬಗ್ಗೆ ಗ್ರಾಮ ವಾಸ್ತವ್ಯ ಮಾಡಲು ಚಿಂತನೆ ಮೊಳಕೆ ಒಡೆಯುತ್ತದೆ. ಇ- ಆಡಳಿತ ಕೇಂದ್ರದ ಡಿಜಿಟಲ್ ಡೈಲಾಗ್ ಕಾರ್ಯಕ್ರಮಕ್ಕೆ ಪೂರಕವಾಗಿÀ  ಮಾಹಿತಿ ಕಣಜದ ಗ್ರಾಮ ವಾಸ್ತವ್ಯ ಮಾಡುವುದು ಸೂಕ್ತವಾಗಿದೆ.

ಇವೆಲ್ಲಾ ಸಾಮಾಜಿಕ ಭದ್ರತೆಯ ಸಂಶೋಧಕರಾಗಿರುವ, ನೀರಾವರಿ ತಜ್ಞರಾಗಿರುವ, ಮನೆಬಾಗಿಲಿಗೆ ಸರ್ಕಾರ ಯೋಜನೆಯ ಚಿಂತಕರಾಗಿರುವ ಗ್ರಾಮ ಒನ್ ಪರಿಕಲ್ಪನೆಗೆ ವಿಶೇಷ ಒತ್ತು ನೀಡಿರುವ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಕೂಸು ಎಂದರೆ ತಪ್ಪಾಗಲಾರದು.

ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು   ಡಾಟಾ ಹೀರೋ ಆಗಿ ಸ್ಪಂಧಿಸವುದು ಅಗತ್ಯವಾಗಿದೆ. ದೇಶಕ್ಕೆ ಮಾಡೆಲ್ ಯೋಜನೆ ರೂಪಿಸಲು ಶಕ್ತಿಪೀಠ ಫೌಂಡೇಷನ್ ಮತ್ತು  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಲವಾರು ಪರಿಣಿತರ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹೆಜ್ಜೆ ಹಾಕಿದೆ, ಪಲಿತಾಂಶ ಕಾದು ನೋಡಬೇಕಿದೆ.