22nd November 2024
Share

TUMAKURU:SHAKTHIPEETA FOUNDATION

ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ನಿವೃತ್ತಿ ಆಗುವಾಗ ಸುದ್ಧಿ ಮಾಡಿದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ನನಗೆ ಸುಮಾರು 22 ವರ್ಷದ ಸ್ನೇಹ.

 ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣಾ ರವರ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಇಬ್ಬರು ಇಇ ಗಳಿದ್ದರು, ಮಧುಗಿರಿಯಲ್ಲಿ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ತುಮಕೂರಿನಲ್ಲಿ ಶ್ರೀ ಮೃತ್ಯುಂಜಯಸ್ವಾಮಿರವರು. ಈಗ ಇವರು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರಿಬ್ಬರನ್ನು ಆಗಿನ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಲವಕುಶ’ ಎಂದು ಮಾತನಾಡಿಕೊಳ್ಳುತಿದ್ದೆವು, ಇಬ್ಬರು ಬುದ್ದಿವಂತರು ಬಹಳ ಚೆನ್ನಾಗಿ ಕೆಲಸ ಮಾಡಿದವರು. ನಂತರ ಇವರಿಬ್ಬರೂ ಇಂಡಿಯಾ ಮತ್ತು ಪಾಕಿಸ್ಥಾನ ದಂತೆ ದ್ವೇಷಿಗಳಾಗಿರುವ ಹಾಗೆ ಕಾಣಿಸುತ್ತದೆ.

ಯಾರು ನಮ್ಮನ್ನು ಆತ್ಮೀಯವಾಗಿ ಕಾಣುತ್ತಾರೆ, ಯಾರು ನಮ್ಮ ಚಿಂತನೆಗೆ ಸ್ಪಂಧಿಸುತ್ತಾರೆ, ಅವರ ಜೊತೆ ಸ್ನೇಹ ಬೆಳೆಸುವುದು ವಾಡಿಕೆ. ಇಲ್ಲಿ ಜಾತಿ, ಪಕ್ಷ, ವಯಸ್ಸು ಅಡ್ಡ ಬರುವುದಿಲ್ಲ. ನಾನು ಮತ್ತು ಜಿಎಸ್‍ಬಿ ರವರು ಜೈಪ್ರಕಾಶ್ ರವರ ಜೊತೆ ಸ್ವಲ್ಪ ಜಾಸ್ತಿ ಎನ್ನುವ ರೀತಿ, ಬೇರೆಯವರು ‘ಹೊಟ್ಟೆ ಉರಿದುಕೊಳ್ಳುವಷ್ಟು ಹತ್ತಿರ ಇರುವುದು ಸರಿಯೇ’.

ನಮ್ಮಿಬ್ಬರಿಗೆ ಏನು ಎಲ್ಲರಿಗೂ ತಿಳಿದಿರುವ ವಿಚಾರ ಜೈಪ್ರಕಾಶ್ ರವರು ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೆಗೌಡರವರ ಕುಟುಂಬಕ್ಕೆ ಆತ್ಮೀಯವಾಗಿದ್ದಾರೆ. ಹಣೆ ಬರಹ ಇದ್ದರೆ ರಾಜಕೀಯಕ್ಕೂ ಬರಬಹುದು. ಬಸವರಾಜ್ ರವರು ಮತ್ತು ದೇವೇಗೌಡರವರು ಜಿದ್ದಾ ಜಿದ್ಧಿ ರಾಜಕಾರಣ ಮಾಡಿರುವಾಗ ಯಾರು ಎಲ್ಲಿಗೆ ಬಂದರೂ ನಮಗೆ ಏನು ಅನ್ನಿಸುವುದಿಲ್ಲಾ.

ನಿನ್ನೆ ಒಬ್ಬ ಸ್ನೇಹಿತರು ನನಗೆ ಬಹಿರಂಗವಾಗಿ ಹೇಳಿದ ಮಾತು ಜೈಪ್ರಕಾಶ್ ನಿವೃತ್ತಿ ಆಗಿದ್ದಾರೆ, ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ವಿರುದ್ಧ ಕ್ಯಾಂಡಿಡೇಟ್ ಆಗುತ್ತಾರೆ. ಆಗ ರಮೇಶ್‍ಗೂ ಮತ್ತು ಎಂಪಿಯವರಿಗೂ ಗೊತ್ತಾಗುತ್ತದೆ. ಎಂದು ಟೀಕೆ ಮಾಡಿದ್ದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. ಅದೇನೆ ಇರಲಿ ಬಿಡಿ.

ರಾಜ್ಯದ ನದಿ ಜೋಡಣೆ ಪರಿಕಲ್ಪನೆ ವರದಿ ಬಗ್ಗೆ. ಜೈಪ್ರಕಾಶ್ ರವರಿಗೂ  ನನಗೂ ಒಂದು ಭಿನ್ನಾಭಿಪ್ರಾಯವಿದೆ. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ರಾಜ್ಯದ ನದಿ ಜೋಡಣೆ, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯ ಬಗ್ಗೆ ಪರಿಕಲ್ಪನಾ ವರದಿ ಸಿದ್ಧಪಡಿಸಲು ಜೈ ಪ್ರಕಾಶ್ ರವರನ್ನು ಅಂದರೆ ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕರನ್ನು, ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ್ದರು.

ಆಗಿನ ಜಲಸಂಪನ್ಮೂಲ ಕಾರ್ಯದರ್ಶಿಯಾಗಿದ್ದ, ಈಗ ಮಾನ್ಯ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿರುವ ಶ್ರೀ ಅನಿಲ್ ಕುಮಾರ್ ರವರು ಮತ್ತು ನಾನು ಅವರ ಅಧಿಕಾರದ ಅವಧಿ ಕೇವಲ ಒಂಭತ್ತು ತಿಂಗಳು ಮಾತ್ರ ಇತ್ತು.

 ಈ ಅವಧಿಯಲ್ಲಿ ರಾಜ್ಯದ ಜಲಗ್ರಂಥ ಸಿದ್ಧಪಡಿಸಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಲು, ರಾಜ್ಯದ ಪ್ರತಿ ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಲೇ ಬೇಕು, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ, ಆಧ್ಯತೆಗೆ ಅನುಗುಣವಾಗಿ ಸರ್ಕಾರಗಳು ಯೋಜನೆ ಮಾಡಲಿ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದೆವು.

  ಆದರೇ ಜೈ ಪ್ರಕಾಶ್ ರವರು ಏಕೋ ಎನೋ ಈ ವಿಚಾರದ ಬಗ್ಗೆ ಚರ್ಚೆ ಬೇಡ ರಮೇಶ್ ಸುಮ್ಮನಿದ್ದು ಬಿಡಿ ಎಂದಾಗ ನನಗೆ ಬಹಳ ಆಘಾತವಾಯಿತು. ಆದರೂ ನಾನು ಮೌನಿಯಾಗಲೇ ಬೇಕಾಯಿತು.

 ಈ ಬಗ್ಗೆ ಶ್ರೀ ಅನಿಲ್ ಕುಮಾರ್ ರವರ ಜೊತೆಯೂ ಚರ್ಚೆ ಮಾಡಿದ್ದೆ. ಅವರು ಸ್ವಲ್ಪ ದಿವಸ ಕಾಯಿರಿ ಎಂದು ಸಲಹೆ ನೀಡಿದ್ದರು. ಈಗ ಮತ್ತೆ ಚಾಲನೇ ನೀಡ ಬೇಕಿದೆ. ಶಕ್ತಿ ದೇವತೆ ನೀರಾವರಿ ತಜ್ಞ  ಹಾಗೂ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರ ಅವಧಿಯಲ್ಲಿ ಯೋಜನೆ ಆಗಲಿ ಎಂಬ ವರ ನೀಡಿರ ಬಹುದು, ಎಂಬ ಅನಿಸಿಕೆ ನನ್ನದಾಗಿದೆ.

 ಈ ಪೀಠಿಕೆ ಏಕೆಂದರೆ, ಜನ ಅಂತೂ-ಇಂತೂ ಜೈಪ್ರಕಾಶ್ ರವರನ್ನು  ದೇವೇಗೌಡರ ಕುಟುಂಬದ ಸದಸ್ಯರು ಎನ್ನುತ್ತಿರುವಾಗ, ಗೌಡರು ಆರಂಭಿಸಿರುವ ಜನತಾ ಜಲಧಾರೆ  ಪರಿಕಲ್ಪನೆ ಬಗ್ಗೆಯಾದರೂ ಅಧ್ಯಯನ ಮತ್ತು ಸಂಶೋಧನೆ ಮಾಡ ಬಹುದಲ್ಲ ಎಂಬ ಅನಿಸಿಕೆ ನನ್ನದಾಗಿದೆ. ಸ್ವೀಕರಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ.

ಪ್ರತಿಯೊಂದು ರಾಜಕೀಯ ಪಕ್ಷದವರು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಘಟಕ ಆರಂಭಿಸಲಿ ಎನ್ನುವ ಆಲೋಚನೆಯಲ್ಲಿರುವ ನನಗೆ,   ನನಗೂ ಆತ್ಮೀಯರಾಗಿ ಇರುವವರೇ ಎಲ್ಲಾ ಪಕ್ಷಗಳಲ್ಲೂ ಇದ್ದರೆ. ಅನೂಕೂಲ ಎನ್ನುವ ಭಾವನೆ ನನ್ನದಾಗಿದೆ.

ನಿನ್ನೆ (03.06.2022) ರಂದು  ಕಾವೇರಿ ನೀರಾವರಿ ನಿಗಮದ ಪ್ರಭಾರಿ ವ್ಯಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಶಂಕರೇ ಗೌಡರವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದೆ. ಅವರು ಕಡತ ನೋಡುವುದಾಗಿ ಹೇಳಿದ್ದಾರೆ.