TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ, ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡಲು, ಜಿಲ್ಲೆಯ ಹಲವಾರು ಕೆರೆಗಳಿಗೆ ನದಿ ನೀರಿನ ಅಲೋಕೇಷನ್ ನೋಡಿದರೆ ಇದೊಂದು ಮ್ಯಾಜಿಕ್ ಮಾಡುವಂತಿದೆ.
ಇಷ್ಟು ನೀರನ್ನು ಲೋಹದ ಕೆರೆಯಲ್ಲಿ, ಬಾಯಿ ಮುಚ್ಚಿ ಇಟ್ಟರೆ ಕುಡಿಯಲು ನೀರು ನೀಡಬಹುದು. ಆದರೇ ಮಣ್ಣಿನ ಕೆರೆಯಲ್ಲಿ ನೀರು ನಿಲ್ಲಿಸುವುದಾದರೆ, ದಾಖಲೆಯಲ್ಲಿ ಮಾತ್ರ ನೀರಿನ ಯೋಜನೆ ಪೂರ್ಣಗೊಳ್ಳುತ್ತದೆ. ‘ಜನರಿಗೆ ನಲ್ಲಿಯಲ್ಲಿ ನೀರಿನ ಬದಲು ಗಾಳಿ ಬರಲಿದೆ.’ ಈ ಬಗ್ಗೆ ಗಂಭೀರವಾದ ಚರ್ಚೆ ಅಗತ್ಯ.