22nd December 2024
Share
ಶ್ರೀ ನರೇಂದ್ರ ಮೋದಿಯವರ ಕಾಲದ ಯೋಜನೆ # 2020-2021
ನಾನು ಬರೆದು ದಿನಾಂಕ:10.11.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ಜಿಲ್ಲೆಗೊಂದು ಉತ್ಪನ್ನದ ಬಗ್ಗೆ ಮಾಹಿತಿ ಗಮನಿಸಿ.

TUMAKURU:SHAKTHIPEETA FOUNDATION

 ನಾನು ಬರೆದು ದಿನಾಂಕ:10.11.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ಜಿಲ್ಲೆಗೊಂದು ಉತ್ಪನ್ನದ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅಂದು ನನ್ನ ಸ್ನೇಹಿತ ಶ್ರೀ ಸಿ.ಕೆ.ಮಹೇಂದ್ರರವರು ಬಹಳ ಅತ್ಯುತ್ತಮವಾದ ಯೋಜನೆ ಸಾರ್ ನಿಮಗೆ ಹೇಗೆ ಹೊಳೆಯಿತು ಈ ‘ಐಡಿಯಾ’ ಎಂದರು.

 ನಾನು ನಕ್ಕು ಸುಮ್ಮನಾದೆ, ಅಷ್ಟಕ್ಕೆ ಮಹೇಂದ್ರ ಸುಮ್ಮನಾಗಲಿಲ್ಲ  ಪ್ರತಿ ಜಿಲ್ಲೆಯ ಪ್ರಜಾವಾಣಿ ವರದಿಗಾರರಿಗೆ ಫೋನ್ ಮಾಡಿ ಯಾವ ಜಿಲ್ಲೆಯಲ್ಲಿ ಯಾವ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂಬುದನ್ನು ತಿಳಿದುಕೊಂಡು ಜಿಲ್ಲಾವಾರು ಉತ್ಪನ್ನದ ಹೆಸರನ್ನು ಪಟ್ಟಿ ಮಾಡಿ ಬರೆಯಲು ಸಲಹೆ ನೀಡಿದರು.

 ಇನ್ನೊಬ್ಬ ಗೆಳೆಯ ತಲೆಹರಟೆ ಮಾಡಿ ಇದು ಬೇಡ ಸಾರ್, ಇದು ಸಾಧ್ಯಾವಾ ಎಂದರು. ಶ್ರೀ ಟಿ.ಆರ್.ರಘೋತ್ತಮರಾವ್‌ರವರ ಗಮನಕ್ಕೆ ಈ ವಿಷಯ ತಂದಾಗ ಬಹುಷಃ ಅವರು ತಕ-ತಕ ಕುಣಿದಾಡುವ ರೀತಿ ಖುಷಿ ಪಟ್ಟರು.

 ಕೇಂದ್ರ ಸರ್ಕಾರ 2020-2021 ನೇ ಸಾಲಿನ ಆಯವ್ಯಯದಲ್ಲಿ  ONE PRODUCT- ONE DISTRICT ಯೋಜನೆಯನ್ನು ಘೋಶಿಸಿದಾಗ ನನಗೆ ಆದ ಖುಷಿ ಅಷ್ಟಷ್ಟಿಲ್ಲ. ರೈತರ ಆದಾಯವನ್ನು 2022 ರೊಳಗೆ ದುಪ್ಪಟ್ಟುಗೊಳಿಸುವ ಯೋಜನೆಯಲ್ಲಿ ಈ ಯೋಜನೆ ಮಹತ್ತರ ಪಾತ್ರ ವಹಿಸಲಿದೆ.

 ನಾನು ಎಲ್ಲಾ ಪಕ್ಷದವರಿಗೂ, ರಾಜ್ಯ ಸರ್ಕಾರಕ್ಕೂ, ಕೇಂದ್ರ ಸರ್ಕಾರಕ್ಕೂ ಪುಸ್ತಕ ಹಂಚಿದ್ದು ಸಾರ್ಥಕವಾಯಿತು ಅನ್ನಿಸಿತು. ಈಗ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ತೆಂಗು ಹಾಗೂ ಮಾವು ಪಟ್ಟಿ ಮಾಡಿದೆ.

 ಈ ಬಗ್ಗೆ ವಿವರವಾದ ತಾಜಾ ಡೇಟಾ ತಯಾರಿಸುವ ಹೊಣೆಗಾರಿಕೆ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರು ಮತ್ತು ಜಿಲ್ಲಾ ತೋಟಗಾರಿಕಾ ಉಪ ನಿರ್ದೆಶಕರಾದ ಶ್ರೀ ರಘುರವರದ್ದು. ಅವರಿಗೆ ಇನ್‌ವೆಸ್ಟ್ ತುಮಕೂರು ಸಲಹಾಗಾರರಾದ ಶ್ರೀ ಪ್ರಮೋದ್‌ರವರು ಸಹಕರಿಸಲಿದ್ದಾರೆ.

 ಇದೇ ರೀತಿ ರಾಜ್ಯದ 30  ಜಿಲ್ಲೆಗಳ ONE PRODUCT- ONE DISTRICT ಮಾಹಿತಿಯನ್ನು ಸಂಗ್ರಹಿಸಿ ದಿಶಾ ಸಮಿತಿ ಸದಸ್ಯರಿಗೆ ನೀಡುವ ಹೊಣೆಗಾರಿಕೆ ರಾಜ್ಯ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರದ್ದು.