26th July 2024
Share
ನಾನು ಬರೆದು ದಿನಾಂಕ:10.11.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ತಂತಾನೆ ಮನೆ ಭೂ ಪರಿವರ್ತನೆ ಆಗಬೇಕೆಂಬ ಬಗ್ಗೆ ಮಾಹಿತಿ ಗಮನಿಸಿ.

ಶ್ರೀ ನರೇಂದ್ರ ಮೋದಿಯವರ ಕಾಲದ ಯೋಜನೆ-2020- 2021

TUMAKURU:SHAKTHI PEETA FOUNDATION

 ನಾನು ಬರೆದು ದಿನಾಂಕ: 10.11.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್ -2025 ರಲ್ಲಿ ತಂತಾನೆ ಮನೆ ಭೂ ಪರಿವರ್ತನೆ ಆಗಬೇಕೆಂಬ ಬಗ್ಗೆ  ಪ್ರಸ್ತಾಪ ಮಾಡಿದ್ದೆ. ವಸತಿ ಮತ್ತು ನಿವೇಶನಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳಿಗೆ ಒಂದೇ ಉತ್ತರವಾಗಿ ಕೇಂದ್ರ ಸರ್ಕಾರ ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಿದೆ.

SVAMITVA:- SURVEY OF VILLAGES AND MAPPING WITH IMPROVISED TECHNOLOGY IN VILLAGE AREAS

  ಇದರ ಪ್ರಮುಖ ಉದ್ದೇಶ  ದೇಶದ ಎಲ್ಲಾ ಗ್ರಾಮಗಳಲ್ಲಿರುವ ವಸತಿ ಆಸ್ತಿಗಳ ಮತ್ತು ವಿವಿಧ ವಿಧವಾದ ಕಟ್ಟಡಗಳಿಗೆ ಸ್ವತ್ತಿನ ಕಾರ್ಡ್ ವಿತರಣೆ ಮಾಡುವುದಾಗಿದೆ. ಪ್ರತಿಯೊಬ್ಬರ ನಿವೇಶನ, ವಸತಿ ಅಥವಾ ಇತರೆ ಯಾವುದೇ ಕಟ್ಟಡಗಳ ಪಕ್ಕಾ ದಾಖಲೆ, ಶೇ 100  ರಷ್ಟು ಇ-ಸ್ವತ್ತು ಜನರ ಮನೆಬಾಗಿಲಿಗೆ.

 ನೂರಾರು ವರ್ಷಗಳಿಂದ ದಾಖಲೆ ಇಲ್ಲದ ಜನರಿಗೆ ಒಂದು ಸುವರ್ಣ ಅವಕಾಶ. ಗ್ರಾಮಠಾಣದಲ್ಲಿ ಮನೆ ಇರುತ್ತದೆ ಆದರೇ ದಾಖಲೆಗಳಿಲ್ಲ, ಸರ್ಕಾರಿ ಜಮೀನಿನಲ್ಲಿ ಮನೆ ಇರುತ್ತದೆ ಆದರೇ ದಾಖಲೆಗಳಿಲ್ಲ, ನಮ್ಮದೇ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ ಬ್ಯಾಂಕ್‌ನಲ್ಲಿ ಸಾಲಪಡೆಯಲು ಆಗುತ್ತಿಲ್ಲ. ಇವರೆಲ್ಲರಿಗೂ ಉತ್ತರ ಸ್ವಮಿತ್ವ ಯೋಜನೆ. ಜನರೇ ಎಚ್ಚರ ವಹಿಸಿ ದಾಖಲೆ ಪಡೆದುಕೊಳ್ಳಿ 2022  ರೊಳಗೆ ಪಕ್ಕಾ ದಾಖಲೆ ನಿಮ್ಮ ಕೈಸೇರಲಿದೆ.

   ನನ್ನ ಪುಸ್ತಕದಲ್ಲಿ ಬರೆದ ಬರವಣಿಗೆ ಸಾರ್ಥಕವಾಯಿತು. ಅಭಿವೃದ್ಧಿ ಪರ ಚಿಂತಕರಿಗೆ ಇದಕ್ಕಿಂತ ಖುಷಿ ಇನ್ನೇನು ಬೇಕು?