TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ರಾಜ್ಯದ ನದಿ ಜೋಡಣೆ ಮತ್ತು ದೇಶದ ನದಿ ಜೋಡಣೆ ವಿಚಾರದಲ್ಲಿ ತಮ್ಮದೇ ಆದ ಸ್ಪಷ್ಟ ಅಭಿಪ್ರಾಯಗಳನ್ನು ನೀಡುವ ಪ್ರಮುಖ ಹುದ್ದೆಗಳನ್ನು ಹೊಂದಿರುವವರು ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಓ.ಎಸ್.ಡಿ ಶ್ರೀ ರುದ್ರಯ್ಯನವರು ಸೇರಿದಂತೆ ಈ 9 ಜನರು ಪ್ರಮುಖರಾಗಿದ್ದಾರೆ.
ಅವರೆಲ್ಲರ ವ್ಯಾಪ್ತಿಯಲ್ಲಿ ಹಾಗೂ ರಾಜ್ಯಾಧ್ಯಾಂತ ಒಂದೊಂದು ಹನಿ ನೀರನ್ನು ಬಳಸುವ ಯೋಜನೆ ರೂಪಿಸಲು ಮುಂದಾಗಿದ್ದಾರೆ. ಕೊರೊನಾ ಮಹಾಮಾರಿಯ ಕಾಲವನ್ನು ‘೦’ ವರ್ಷ ಎಂದು ಕರೆಯಲು ವಿಶ್ವಾಧ್ಯಾಂತ ಚರ್ಚೆ ನಡೆಯುತ್ತಿರುವ, ಈ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ದೇಶದಲ್ಲಿಯೇ ವಿನೂತನವಾದ ಕಾರ್ಯಕ್ರಮ ರೂಪಿಸಲು ದೃಢ ಸಂಕಲ್ಪ ಮಾಡಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಮತ್ತು ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಇವರೆಲ್ಲರನ್ನೂ ಬಳಸಿಕೊಂಡು ಸಮರೋಪಾದಿಯಲ್ಲಿ ಯೋಜನೆ ರೂಪಿಸಿದಲ್ಲಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಅನೂಕೂಲವಾಗಲಿದೆ ಎಂಬುದು ರಾಜ್ಯದ ನೀರಾವರಿ ಪರಿಣಿತರ ಅಭಿಪ್ರಾಯ.
ಶ್ರೀ ರಾಕೇಶ್‌ಸಿಂಗ್‌ರವರು, ಅಪರ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಹಾಗೂ ಡೈರೆಕ್ಟರ್ ಜನರಲ್ ACIWRM
ಶ್ರೀ ಅನಿಲ್‌ಕುಮಾರ್ ರವರು, ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ.
ಶ್ರೀ ಮೃತ್ಯುಂಜಯ ಸ್ವಾಮಿರವರು ಕಾರ್ಯದರ್ಶಿ ಸಣ್ಣ ನೀರಾವರಿ ಇಲಾಖೆ.
ಶ್ರೀ ಮಲ್ಲಿಕಾರ್ಜುನ್ ಬಿ.ಗುಂಗೆರವರು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ನೀರಾವರಿ ನಿಗಮ.
ಶ್ರೀ ಪ್ರಭಾಕರ್ ಹೆಚ್.ಚಿನ್ನಿರವರು, ವ್ಯವಸ್ಥಾಪಕ ನಿರ್ದೇಶಕರು ಕೃಷ್ಣಾ ಭಾಗ್ಯ ಜಲ ನಿಗಮ.
ಶ್ರೀ ಕೆ.ಜೈಪ್ರಕಾಶ್‌ರವರು, ವ್ಯವಸ್ಥಾಪಕ ನಿರ್ದೇಶಕರು ಕಾವೇರಿ ನೀರಾವರಿ ನಿಗಮ.
ಶ್ರೀ ಎನ್.ಲಕ್ಷ್ಮಣರಾವ್‌ಪೇಶ್ವೇರವರು. ವ್ಯವಸ್ಥಾಪಕ ನಿರ್ದೇಶಕರು ವಿಶ್ವೇಶ್ವರಯ್ಯ ಜಲ ನಿಗಮ.
ಶ್ರೀ ಗುರುಪಾದಸ್ವಾಮಿರವರು ಡೈರೆಕ್ಟರ್ ಆಫ್ ಕಮ್ಯಾಂಡ್ ಏರಿಯಾ ಡೆವಲಪ್‌ಮೆಂಟ್.
ಇವರೆಲ್ಲರೂ ಸರ್ಕಾರಿ ಅಧಿಕಾರಿಗಳಾಗಿರುವುದರಿಂದ ಬಹಿರಂಗವಾಗಿ ಯಾವುದೇ ಯೋಜನೆ ಬಗ್ಗೆ ಹೇಳಿಕೆ ನೀಡಲು ಕೆಲವರು ಹಿಂಜರಿಯಬಹುದು. ಬೆಂಗಳೂರಿನ ಇಐ ಟೆಕ್ನಾಲಜಿಯ ಶ್ರೀ ರಂಗನಾಥ್‌ರವರು ರಾಜ್ಯ ಸರ್ಕಾರದಲ್ಲಿರುವ ಎಲ್ಲಾ ವರದಿಗಳನ್ನು ಕ್ರೋಢಿಕರಿಸಿ ಸುಮಾರು 484 ಟಿಎಂಸಿ ಅಡಿ ನೀರಿನ ಬಳಕೆಯ ಬಗ್ಗೆ ಪರಿಕಲ್ಪನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.
ಜೊತೆಗೆ ಕೇಂದ್ರ ಸರ್ಕಾರದ ಉದ್ದೇಶಿತ ನದಿ ಜೋಡಣೆಯಿಂದ ರಾಜ್ಯಕ್ಕೆ ಎಷ್ಟು ನೀರನ್ನು ಪಡೆಯ ಬಹುದು ಎಂಬ ಮಾಹಿತಿಯನ್ನು ಕ್ರೋಢಿಕರಿಸಿ ಪ್ರತಿಯೊಂದು ಯೋಜನೆಗಳ ಸಾಧಕ-ಬಾಧಕ ಗಳ ಬಗ್ಗೆ ಪ್ರತ್ಯೇಕವಾಗಿ ಇವರೆಲ್ಲರ ಅಭಿಪ್ರಾಯಗಳನ್ನು ಪಡೆಯುವುದು ಉತ್ತಮ.
ನಂತರ ಸಚಿವರು ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿ ಒಂದು ಕರಡು ವರದಿಯನ್ನು ಸಿದ್ಧಪಡಿಸಿ, ರಾಜ್ಯದಲ್ಲಿರುವ ನೀರಾವರಿ ತಜ್ಞರ, ನೀರಾವರಿ ಹೋರಾಟಗಾರರ, ಜಲಸಂಪನ್ಮೂಲ ಮಾಜಿ ಸಚಿವರುಗಳ, ಮಾಜಿ ಮುಖ್ಯ ಮಂತ್ರಿಗಳ ಮತ್ತು ರಾಜ್ಯದ ಸರ್ವ ಪಕ್ಷಗಳ ಅಭಿಪ್ರಾಯ ಪಡೆಯುವುದು ಸೂಕ್ತವಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೂ ಒಬ್ಬೊಬ್ಬ ಮುಖ್ಯ ಇಂಜಿನಿಯರ್ ಅಥವಾ ನಿವೃತ್ತ ಮುಖ್ಯ ಇಂಜಿನಿಯರ್‌ರವರನ್ನು ನೇಮಿಸಿ, ಆಯಾ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚಿಸಿದ ನಂತರ, ದಿಶಾ ಸಮಿತಿಯಲ್ಲಿ ಅನುಮೋದಿಸಿ, ಎಲ್ಲರ ಅಭಿಪ್ರಾಯದ ವರದಿಯನ್ನು ಎರಡು ಸದನಗಳಲ್ಲಿ ಚರ್ಚಿಸಿ, ಪಕ್ಷಬೇಧ ಮರೆತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆ ಮಂಜೂರಾತಿಗೆ ನಿರಂತರವಾಗಿ ಶ್ರಮಿಸುವುದು ಅನಿವಾರ್‍ಯವಾಗಿದೆ.
ಯೋಜನೆ ಜಾರಿ ಮಾಡುವ ಮುನ್ನ ಪಾರದರ್ಶಕವಾಗಿರುವುದು ಒಳ್ಳೆಯದು. ಪರ-ವಿರೋಧಗಳು ಬರುವುದು ಸಹಜ, ನಾನೇ ಬುದ್ದಿವಂತ ಎಂಬ ಅಹಂಕಾರವನ್ನು ರಾಜ್ಯದ ಹಿತದೃಷ್ಠಿಯಿಂದ ಎಲ್ಲರೂ ತ್ಯಜಿಸುವುದು ಉತ್ತಮ. ಒಬ್ಬರಿಗಿಂತ ಒಬ್ಬರು ಬುದ್ಧಿವಂತರೂ ಆದರೇ ಬಹುತೇಕ ಎಲ್ಲರೂ ಒಳಗೊಳಗೆ ’ಇಂಡಿಯಾ – ಪಾಕಿಸ್ಥಾನ ಕ್ರಿಕೇಟ್ ಟೀಮ್’ ಥರ ಕತ್ತಿ ಮಸೆಯುತ್ತಿದ್ದಾರೆ.
ವೈಯಕ್ತಿಕ ದ್ವೇಷ ಮರೆತು, ಪ್ರತಿಷ್ಠೆ ಬದಿಗಿರಿಸಿ, ನಾವೆಲ್ಲಾ ಒಂದೇ ಎಂದು ಎಲ್ಲಾ ಅಧಿಕಾರಿಗಳು ಒಮ್ಮತವಾಗಿ ಯೋಜನೆ ರೂಪಿಸಲು, ಶಕ್ತಿದೇವತೆ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಬಹುತೇಕ ಎಲ್ಲರೂ ಶೀಘ್ರವಾಗಿ ನಿವೃತ್ತ ಅಧಿಕಾರಿಗಳಾಗುವ ಸಮಯ ಬಂದಿದೆ. ನನ್ನ ಪ್ರಕಾರ ಒಂದು ನಿಮಿಷವನ್ನು ವೇಸ್ಟ್ ಮಾಡುವುದು ಸರಿಯಲ್ಲ.
‘ಇವರೆಲ್ಲರೂ ಒಮ್ಮತವಾದಲ್ಲಿ ಇಡೀ ವಿಶ್ವವೇ ಕರ್ನಾಟಕದ ನೀರಾವರಿ ಮಾಡೆಲ್ ಆಗಿ ಪರಿಗಣಿಸಲೇ ಬೇಕು. ಅಂತಹ ಯೋಜನೆ ರೂಪಿಸುವ ಶಕ್ತಿ ಇವರೆಲ್ಲರಿಗಿದೆ. ನವಗ್ರಹಗಳು, ನವದುರ್ಗೇಯರು ಹಾಗೂ ಮೋದಿಯವರು ಹಚ್ಚಿಸಿದ 9 ದೀಪಗಳಾಗ ಬೇಕು’
ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರತಿಯೊಬ್ಬರ ಬಳಿಯೂ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. 5 ನೇ ಭಾರಿ ಸಂಸದರಾದ ನಂತರ ನಿರಂತರವಾಗಿ ಒಂದೇ ಸಮನೆ ಜಲಸಂಪನ್ಮೂಲ ಸಚಿವಾಲಯದ ಎಲ್ಲಾ ಕಚೇರಿಗಳಿಗೆ ಬೇಟಿ ನೀಡುವುದು ಎಂದರೆ, ದೇವಾಲಯಕ್ಕೆ ಬೇಟಿ ನೀಡಿದ್ದಷ್ಟೆ ಖುಷಿ ಪಡುತ್ತಿದ್ದಾರೆ.
‘ಅವರ ತಾಳ್ಮೆ ಯಾವಾಗ ಮಿತಿ ಮೀರುವುದೋ ಗೊತ್ತಿಲ್ಲ. ಈಗಾಗಲೇ ಒಂದು ಬೀಗವನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ತಯಾರದಂತಿದೆ. ಯಾವಾಗ ಯಾವ ಕಚೇರಿಗೆ ಬೀಗ ಹಾಕಿ, ಅಧಿಕಾರಿ ಕೂಡಿ ಹಾಕಿ, ಧರಣಿ ಕುಳಿತು ಕೊಳ್ಳುವರೋ ಎಂಬ ವಾತವಾರಣ ಸೃಷ್ಠಿಯಾಗಿದೆ ಎಂದು ಅವರ ನಿಕಟವರ್ತಿಗಳ ಅಭಿಪ್ರಾಯವಾಗಿದೆ’
ಪಲಿತಾಂಶ ಕಾದು ನೋಡೋಣ?