15th September 2024
Share

ಶ್ರೀ ನರೇಂದ್ರ ಮೋದಿಯವರ ಕಾಲದ ಯೋಜನೆ-2020- 2021

TUMAKURU:SHAKTHI PEETA FOUNDATION

 ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯದಲ್ಲಿ ಸಹಕಾರ ಬಂಧು ಯೋಜನೆಯನ್ನು ಜಾರಿಗೊಳಿಸಿದ್ದರು. ಬಹುತೇಕ ಇದೇ ಮಾದರಿ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಜಾರಿಗೆ ತಂದಿದ್ದಾರೆ.

 ಸ್ವನಿಧಿ ಯೋಜನೆ ಜಾರಿಗೆ ತರುವ ಮೂಲಕ ಕಟ್ಟಕಡೆಯ ಜನರ ಮನೆ ಬಾಗಿಲಿಗೂ ಯೋಜನೆ ರೂಪಿಸಿದ್ದಾರೆ. ಕೊರೊನಾ ವಿಶೇಷ ಪ್ಯಾಕೇಜ್ ಪಾಲು ಬೀದಿ ವ್ಯಾಪಾರಿಗಳಿಗೂ ಲಭ್ಯವಾಗಲಿದೆ. ನಗರ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆಯ ಶೇ. ಒಂದು ಭಾಗದಷ್ಟು ಜನರಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ.

 ಬೀದಿ ಬದಿ ವ್ಯಾಪಾರಿಗಳಿಗೆ ರೂ 1೦೦೦೦ ಸಾಲ ನೀಡುವ ಯೋಜನೆಗೆ ಸಮಾನ 10  ಕಂತುಗಳಲ್ಲಿ ಮರುಪಾವತಿಗೆ ಅವಕಾಶ. ಸಕಾಲದಲ್ಲಿ ಮರುಪಾವತಿ ಮಾಡಿದರೇ ಶೇ 7 ರಷ್ಟು ಬಡ್ಡಿ ರಿಯಾಯತಿ ದೊರೆಯಲಿದೆ.

 ಯೋಜನೆ ಜಾರಿಗೆ ತಂದು ಸುಮ್ಮನೆ ಕುಳಿತಿಲ್ಲ ಮೋದಿಜಿ. ಪ್ರತಿ ದಿವಸ ಸಾಲ ನೀಡಿದ ರ್‍ಯಾಂಕಿಗ್ ಪಟ್ಟಿ ಪ್ರಕಟಿಸುವ ಮೂಲಕ ಎಲ್ಲರಿಗೂ ಚಾಟಿ ಬೀಸುತ್ತಿದ್ದಾರೆ. ಮಹಾನಗರ ಪಾಲಿಕೆಗಳಲ್ಲಿ ತುಮಕೂರು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

  ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಅಧಿಕಾರಿಗಳು ಮತ್ತು ನೌಕರರ ಅನುಸರಣೆ ಮಾದರಿಯನ್ನು ಸರ್ಕಾರ ಗುರುತಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ  ಸಂಸ್ಥೆಗಳು ಅಳವಡಿಸಿಕೊಳ್ಳಲು ಸೂಚಿಸಿರುವುದು ನಿಜಕ್ಕೂ ಹೆಮ್ಮೆ.