12th October 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌ನಲ್ಲಿ ಹಿಂದೂ ಧಾರ್ಮಿಕ ಪದ್ಧತಿಗಳಿಗೆ ವಿಶೇಷ ಆಧ್ಯತೆ ನೀಡಲು ಉದ್ದೇಶಿಸಲಾಗಿದೆ. ಇಲ್ಲಿ 8  ದಿಕ್ಕುಗಳ ರಸ್ತೆಗಳನ್ನು ಆಯಾ ಗ್ರಹಗಳ ಹೆಸರಿನಲ್ಲಿ ಕರೆಯಲು ಚಿಂತನೆ ನಡೆಸಲಾಗಿದೆ.

 ಆಯಾ ರಸ್ತೆಗಳಲ್ಲಿ ಆಯಾ ಗ್ರಹಕ್ಕೆ ಅನುಗುಣವಾಗಿರುವ ಗಿಡ ಮತ್ತು ಬೆಳೆಗಳನ್ನು ಲೈವ್ ಆಗಿ ಬೆಳೆಸಲು ಯೋಚಿಸಲಾಗಿದೆ. ಕ್ಯಾಂಪಸ್‌ನ 8 ದಿಕ್ಕುಗಳಲ್ಲಿಯೂ ಪ್ರವೇಶ ಧ್ವಾರ ಮಾಡುವ ಬಗ್ಗೆಯೂ ಆಲೋಚನೆ ಇದೆ. ನಾಲ್ಕು ದಿಕ್ಕುಗಳಲ್ಲಿ ಧ್ವಾರ ಇದ್ದರೆ ಬಹಳ ಶ್ರೇಷ್ಠ ಎನ್ನುತ್ತಾರೆ.

8 ದಿಕ್ಕುಗಳ ರಸ್ತೆಗಳಿಗೆ ಶುಕ್ರ ಮಾರ್ಗ್ ಅಥವಾ ಗುರು ಪಥ ಅಥವಾ ಶನಿ ದಾರಿ ಅಥವಾ ಚಂದ್ರ ಆಸ್ಥಾನ ಹೀಗೆ ಯಾವುದಾದರೊಂದು ಹೆಸರಿನಲ್ಲಿ ಕರೆಯಲು ಹೆಸರು ಹೇಳಲು ಇಚ್ಚಿಸದ ಪರಿಣಿತರು ಸಲಹೆ ನೀಡಿದ್ದಾರೆ.

SQUARE ಹೊರ ಭಾಗದಲ್ಲಿ ರಾಜ್ಯದ 3೦ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಅಧ್ಯಯನ ಮಾಡುವವರಿಗೆ, 3೦ ಜಿಲ್ಲಾ ಭವನಗಳನ್ನು ಮತ್ತು ಕಾಮನ್ ಫೆಸಿಲಿಟಿ ಕಟ್ಟಡಗಳ ನಿರ್ಮಾಣ ಮಾಡಲು ನಿವೇಶನಗಳನ್ನು ಮಾಸ್ಟರ್ ಪ್ಲಾನ್‌ನಲ್ಲಿ ಕಾಯ್ದಿರಿಸಲಾಗುವುದು.

SQUARE  ಬದಲಾದ ಹಿನ್ನೆಲೆಯಲ್ಲಿ ಇದೂವರೆಗೂ ಮಾಡಿರುವ ಎಲ್ಲಾ ಪ್ಲಾನ್‌ಗಳ ಬದಲಾವಣೆ ಆಗುವುದು ಸಹಜವಾಗಿದೆ. ಇದರಲ್ಲಿ ಲಗತ್ತಿಸಿರುವ ನಕ್ಷೆಯ ಪ್ರಕಾರ, ಪರಿಣಿತರ ಸಲಹೆಗಾಗಿ ಮನವಿ ಮಾಡಲಾಗಿದೆ. ನಮ್ಮ ಸಂಸ್ಥೆಯ ಪ್ರಕಾರ ಪರಿಣಿತರು ನೀಡಿದ ಅಭಿಪ್ರಾಯಗಳನ್ನು, ಇನ್ನೂ ಹಲವಾರು ಪರಿಣಿತರೊಂದಿಗೆ ಹಂಚಿಕೊಳ್ಳುವುದು ಸಹಜ ಪ್ರಕ್ರೀಯೇ.

 ಶಕ್ತಿಪೀಠ ಫ್ಯಾಮಿಲಿಗಳೆಲ್ಲರಿಗೂ ವೈಯಕ್ತಿಕವಾಗಿ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ.  ಪ್ರತಿಯೊಂದು ವಿಚಾರಗಳು ಪಾರದರ್ಶಕವಾಗಿರಲಿ ಎಂಬ ದೃಷ್ಠಿಯಿಂದ, ಆಸಕ್ತ ಎಲ್ಲರಿಗೂ ವಿಚಾರ ಮುಟ್ಟಿಸುವುದು ನಮ್ಮ ಕರ್ತವ್ಯ. ಹೂಸಿದ್ದು – ಕೆಮ್ಮಿದ್ದು’ ಎಲ್ಲವನ್ನು ಎಲ್ಲರಿಗೂ ಏಕೆ ಹೇಳಬೇಕು ಎನ್ನುವವರಿಗೆ ನಮ್ಮಲ್ಲಿ ಉತ್ತರವಿಲ್ಲ.

ನಮ್ಮೊಂದಿಗೆ ಚರ್ಚೆ ಮಾಡಿದ ವಿಚಾರಗಳನ್ನು ಗುಟ್ಟಾಗಿ ಇಡಿ, ಎಂದು ಮೊದಲೇ ಹೇಳಿದಲ್ಲಿ ರಹಸ್ಯವಾಗಿ ಇಡಲಾಗುವುದು. ನಮ್ಮ ಹೆಸರು ಬರೆಯುವುದು ಬೇಡ ಎಂದರೆ ಬರೆಯುವುದಿಲ್ಲ. ಒಂದು ರೂ ದಾನ ನೀಡಿದವರಿಗೂ ಎಲ್ಲಾ ವಿಷಯ ಮುಟ್ಟಿಸುವುದು ನಮ್ಮ ಆಧ್ಯತೆ ಅಷ್ಟೆ.