13th June 2024
Share

TUMAKURU:SHAKTHIPEETA FOUNDATION

 ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌ನಲ್ಲಿ ಗಂಗಾ ಮಾತೆ’ ಯೇ, ಅಂದರೆ ‘ನೀರೇ’ ನಮ್ಮ ಪೂಜ್ಯ ದೇವತೆ. ನಮ್ಮ ಶಕ್ತಿಪೀಠ ಫೌಂಡೇಷನ್ ಈಗಾಗಲೇ ಈ ನೀರಿಗೆ ದೇವಾಲಯ ನಿರ್ಮಾಣ ಮಾಡಿದೆ. ಕೃತಕವಾಗಿ ನಿರ್ಮಾಣ ಮಾಡಿರುವ ಹಿಂದೂ ಮಹಾಸಾಗರ, ಅರಬ್ಭಿ ಸಮುದ್ರ ಮತ್ತು ಬಂಗಾಳಕೊಲ್ಲಿ’ ಗಳೇ ಬೃಹತ್ ದೇವಾಲಯ ಎಂಬ ಭಾವನೆ ನಮ್ಮದು. ಇವುಗಳಲ್ಲಿ ಸಂಗ್ರಹವಾಗಿರುವ ನೀರೇ ಗಂಗಾಮಾತೆ’.

 ಇಲ್ಲಿ ಮಾತೆಯ ವಿಗ್ರಹಗಳ ಪೂಜೆಗೆ ವಿಶೇಷ ಒತ್ತು ನೀಡಿಲ್ಲ, ನೀಡುವುದಿಲ್ಲ ಎಂದು ನಿರ್ಣಯವನ್ನೂ ಮಾಡಿಲ್ಲ, ಸತಿಯ ದೇಹದ ಯಾವ ಭಾಗ ಬಿದ್ದ ಜಾಗದಲ್ಲಿರುವ, ಯಾವ ಶಕ್ತಿಪೀಠದ ವಿಗ್ರಹ ಸ್ಥಾಪನೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈಗ ಪರಿಸರವೇ ದೇವರು.

 ವಿಶ್ವದ 108 ಶಕ್ತಿಪೀಠಗಳ ಜೊತೆಗೆ ಭಾರತ ದೇಶದಲ್ಲಿರುವ ಎಲ್ಲಾ ನದಿಗಳ ಪ್ರತಿಯೊಂದು ಹನಿ ನೀರಿನ ಚರ್ಚೆಯೇ ಇಲ್ಲಿ ಪಾರಾಯಣ ಗ್ರಂಥ. ಯಾವ ನದಿಯ ಪಾತ್ರದಲ್ಲಿ ಯಾವ ಶಕ್ತಿಪೀಠ ಸ್ಥಾಪನೆಯಾಗಿದೆ, ಎಂಬ ಮಾಹಿತಿ ಜನರಿಗೆ ನೀರು ಮತ್ತು ಶಕ್ತಿಪೀಠಗಳ ಸಂಭಂದ ಪೂಜನೀಯ ಭಾವನೆ ತರುವುದೇ’ ನಮ್ಮ ಪ್ರಮುಖ ಉದ್ದೇಶ.

ದಿನಾಂಕ:18.03.2018 ರಂದು ಕ್ಯಾಂಪಸ್‌ನ ಭೂಮಿ ಪೂಜೆ ಮಾಡಿಯಾಗಿದೆ. ಸುಮಾರು 12 ಎಕರೆ 15 ಗುಂಟೆ ಜಮೀನಿನಲ್ಲಿ ಪ್ರತಿಯೊಂದು ಇಂಚು ಭೂಮಿಯಲ್ಲಿ ಈಗ ಏನಿದೆ, ಮುಂದೆ ಏನಿರಬೇಕು, ಅದು ಏಕೆ ಇರಬೇಕು ಮತ್ತು ಹೇಗಿರಬೇಕು ಎಂಬುದೇ ನಮ್ಮ ಅಧ್ಯಯನದ ಮಹತ್ವ.

  ಸಂಶೋಧನೆ/ಅಧ್ಯಯನವನ್ನು ಮಾಡಿ ಕಸದ ಬುಟ್ಟಿಯಲ್ಲಿಡುವುದು ನಮ್ಮ ಗುರಿಯಲ್ಲ. ಲೈವ್ ಆಗಿ ಈ ಯೋಜನೆಯ ಪ್ರಾತ್ಯಕ್ಷಿಕೆಗಳು ಮತ್ತು ನಿಖರವಾದ ತಾಜಾ ಡಿಜಿಟಲ್ ಮಾಹಿತಿ ಸಂಗ್ರಹ ಮತ್ತು ಯೋಜನೆ ಅನುಷ್ಠಾನಕ್ಕೆ ಶ್ರಮಿಸುವುದೇ ನಮ್ಮ ಗುರಿ. ಈ ಉದ್ದೇಶಕ್ಕೆ ಸ್ಥಾಪನೆಯಾಗಿರುವುದೇ ಶಕ್ತಿಪೀಠ ಫೌಂಡೇಷನ್.

 ಈ ಯೋಜನೆಗೆ ಯಾವುದೇ ನಿಧಿ ಇಲ್ಲ, ಸರ್ಕಾರಗಳು ನೀಡುವ ಅನುದಾನ ಮತ್ತು ಜನರು ನೀಡುವ ಧಾನವೇ ನಮ್ಮ ಆರ್ಥಿಕ ಕಣಜ. ಹಣ ಬಂದಹಾಗೆ ಕೆಲಸ ಮಾಡಬೇಕು, ಇಲ್ಲಿ ಸಾಲಮಾಡಿ ಯೋಜನೆ ಪೂರ್ಣಗೊಳಿಸುವುದು ನಮ್ಮ ಪರಿಕಲ್ಪನೆ/ಚಿಂತನೆಯೇ ಅಲ್ಲ.

 ವಿಶ್ವದಲ್ಲಿಯೇ ವಿನೂತನವಾದ ಗಂಗಾಮಾತೆ’ ಪುಣ್ಯ ಸ್ಥಳ ಮತ್ತು ರಾಜ್ಯದಲ್ಲಿರುವ ಪ್ರತಿಯೊಂದು ಜಲಸಂಗ್ರಹಾಗಾರಗಳನ್ನು ದೇವತೆ ಎಂದು ಪೂಜಿಸಿ ಸಂರಕ್ಷಣೆ ಮಾಡಲು ವ್ಯಾಪಕ ಆಂದೋಲನವೇ ನಮ್ಮ ಪ್ರಮುಖ ಗುರಿ.

 ರಾಜ್ಯದಲ್ಲಿರುವ ಸುಮಾರು 38608 ಕೆರೆ-ಕಟ್ಟೆಗಳು ಅಥವಾ ಡಿಜಿಟಲ್ ದಾಖಲೆಯಲ್ಲಿ ಇರುವ ಜಲಸಂಗ್ರಹಾಗಾರಗಳನ್ನು, ಸದಾ ನದಿ ನೀರು ಮತ್ತು ಮಳೆನೀರಿನಿಂದ ತುಂಬಿಸಿದರೇ ಅದೇ ದೇವತೆಯ ವಿಶೇಷ ಪೂಜೆ. ಇದೇ ಮಹಾಯಜ್ಞ. ಸುಮಾರು 23 ವರ್ಷಗಳ ನಿರಂತರ ನಮ್ಮ ಹೋರಾಟವೇ ತಪಸ್ಸು.

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ನಾಲ್ಕು ದಶಕಗಳ ತಪಸ್ಸು ಇದೆ ಆಗಿದೆ. ಮಾಡು ಇಲ್ಲವೇ ಮಡಿ ಎಂಬ ಮಂತ್ರವೇ ಬಸವರಾಜ್‌ರವರ ಗುರಿ. ಕಳೆದ ಅವರ ಚುನಾವಣೆಯ ಪ್ರಧಾನ ಅಂಶವೇ ’ಗಂಗಾಮಾತೆ’.

 ತಮ್ಮ ಜೀವಮಾನದಲ್ಲಿ ಈ ಕೆಲಸ ಆರಂಭ ಮಾಡಿ ಎಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರತಿ ನಿತ್ಯ ಜಲಮಂತ್ರ ಪಠಣ’ ಮಾಡುತ್ತಿದ್ದಾರೆ.

  ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಈ ಯೋಜನೆ ಆರಂಭಿಸಿ, ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ದೇಶದ ಏಕತೆಗಾಗಿ ಸರ್ಧಾರ್ ವಲ್ಲಭ ಬಾಯಿಪಾಟೀಲ್ ಪ್ರತಿಮೆ ಸ್ಥಾಪಿಸಿದ ಹಾಗೆ, ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಶಿಸಿ, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ‘ನದಿ ನೀರಿನ ಅಲೋಕೇಷನ್ ಮಾಡಿದ ಮಹಾತ್ಮ/ಪುಣ್ಯಾತ್ಮ’ ಎಂದು, ತುಮಕೂರಿನಲ್ಲಿ ನಿಮ್ಮ ವಿಗ್ರಹ ಸ್ಥಾಪನೆ ಮಾಡಲಾಗುವುದು ಎಂದು ಈಗಾಗಲೇ  ಬಹಿರಂಗವಾಗಿ ಘೋಶಿಸಿದ್ದಾರೆ.

ಇದೂ ಜಿಎಸ್‌ಬಿರವರ ಭೂಟಾಡಿಕೆ ಮಾತಲ್ಲ, ರಾಜಕೀಯ ತೆವಲಿಗಾಗಿ ಆಡಿದ ಮಾತಲ್ಲ, ತಮ್ಮ ಹೃದಯದ ಅಂತರಾಳದಿಂದ ಬಂದಿರುವ ಮಾತುಗಳು. ತಮ್ಮ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಆಗುತ್ತದೆಯೋ ಅಥವಾ ಇಲ್ಲವೋ ಅದರೆ, ನದಿ ನೀರಿನ ಹಂಚಿಕೆಯ ಗೆಜಿಟ್ ನೋಟಿಫೀಕೇಷನ್ ಮಾಡುವ ಶಕ್ತಿಯನ್ನು ಶಕ್ತಿದೇವತೆ ಬಿಎಸ್‌ವೈ ಅವರಿಗೆ ನೀಡಿದ್ದಾಳೆ’

  ಈ ಯೋಜನೆ ಆರಂಭಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣರವರು, ಶ್ರೀ ಹೆಚ್.ಕೆ.ಪಾಟೀಲ್‌ರವರು  ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಅಲ್ಲಿಂದ ಬಂದ ಎಲ್ಲಾ ಮುಖ್ಯ ಮಂತ್ರಿಗಳು, ಜಲಸಂಪನ್ಮೂಲ ಸಚಿವರು ಬೆಂಬಲಿಸಿದ್ದಾರೆ. ಆದರೇ ‘ಸಾಮಾಜಿಕ ನ್ಯಾಯದಡಿ ನದಿ ನೀರಿನ ಹಂಚಿಕೆ’ ಮಾಡಲು ಎಲ್ಲರೂ ವಿಫಲರಾಗಿದ್ದಾರೆ. ಈ ಯೋಜನೆಯ ‘ಮಹಾಯಜ್ಞದ ಪೂರ್ಣ ಆಹುತಿ ‘ಇನ್ನೂ ಆಗಿಲ್ಲ.

ಈ ಅವಕಾಶ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಜಲಸಂಪನ್ಮೂಲ ಸಚಿವರಾದ  ಶ್ರೀರಮೇಶ್‌ಜಾರಕಿಹೊಳೆರವರಿಗೆ ಈಗ ಬಂದಿದೆ. ಅವರು ಹೇಗೆ ಬಳಸಿಕೊಳ್ಳುತ್ತಾರೆ ಕಾದು ನೋಡೋಣ.

108 ಶಕ್ತಿದೇವತೆಗಳಿಗೆ ನಮ್ಮ ಪೂಜೆ/ ಮಂತ್ರ ಅಂದರೇ, ಈ ಯೋಜನೆ ಜಾರಿಗೆ ನಿರಂತರವಾಗಿ ಶ್ರಮಿಸುವುದೇ ಆಗಿದೆ. ರಾಜ್ಯದ ನದಿ ಜೋಡಣೆ ಯೋಜನೆಯ ಪ್ರತಿಯೊಂದು ಹಂತದ ಮಾಹಿತಿ ನಮ್ಮ ಕ್ಯಾಂಪಸ್‌ನಲ್ಲಿ ಡಿಜಿಟಲ್ ದಾಖಲೆಯಾಗಲಿದೆ.

  ಇದಕ್ಕೆ ಪೂರಕವಾಗಿ ‘ಕ್ಯಾಂಪಸ್ ಲೇಔಟ್ ಡಿಸೈನ್’ ಮಾಡುವುದು ಅಗತ್ಯವಾಗಿದೆ. ವಿನ್ಯಾಸಕಾರರು, ಚಿತ್ರಕಲಾವಿದರು, ಮನಸ್ಸಿನಲ್ಲಿಯೇ ಅದ್ಭುತ ಲೋಕ ಸೃಷ್ಠಿ ಮಾಡಿ, ಭೂಮಿಗೆ ಇಳಿಸಲು ಸಹಕರಿಸಲು   ತುಮಕೂರಿನ ಶ್ರೀ ರವಿರವರು, ಬೆಂಗಳೂರಿನ ಶ್ರೀಮತಿ ಶಿಲ್ಪರವರು ಮತ್ತು ಮೈಸೂರಿನ ಶ್ರೀ ಲೋಕೇಶ್‌ರವರು ಮುಂದೆ ಬಂದಿದ್ದಾರೆ.

ಶಕ್ತಿದೇವತೆ ಯಾರಿಗೆ ಕೆಲಸ ಮಾಡಲು ಅವಕಾಶ ನೀಡುವರೋ?