11th December 2024
Share
DIC JD NAGESH, KRISHNA PATIL, D.BASAVARAJ & KUNDARANAHALLI RAMESH

TUMAKURU:SHAKTHI PEETA FOUNDATION

ತುಮಕೂರು  ಇನ್‌ವೆಸ್ಟ್ ವರದಿಯನ್ನು ತಯಾರಿಸಲು ನಾವು ಮತ್ತು ತುಮಕೂರಿನ ಸ್ಮಾರ್ಟ್ ಸಿಟಿಯವರು ಜಂಟಿಯಾಗಿ ಕ್ರಮಕೈಗೊಂಡಿದ್ದೇವೆ, ಈಗಾಗಲೇ ಸಲಹಾಗಾರರ ಆಯ್ಕೆ ಮಾಡಿದ್ದು ಶ್ರೀ ಪ್ರಮೋದ್‌ರವರು ಜಿಲ್ಲಾಧ್ಯಾಂತ ಮಾಹಿತಿಗಳ ಸಂಗ್ರಹಣೆ ಕಾರ್ಯ ಆರಂಭಿಸಿದ್ದಾರೆ ಎಂದು ತುಮಕೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರು ತಿಳಿಸಿದರು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯು ದಿನಾಂಕ:21.11.2020 ನೇ ಶನಿವಾರ ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂಬಂದ ತುಮಕೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರೊಂದಿಗೆ ತುಮಕೂರು ಇನವೆಸ್ಟ್ ಅಂಗವಾಗಿ ಕೈಗೊಂಡಿರುವ ವರದಿಯು ಯಾವ ಹಂತದಲ್ಲಿದೆ ಎಂಬ ಬಗ್ಗೆ ದಿನಾಂಕ:12.11.2020 ನೇ ಗುರುವಾರ ಸಮಾಲೋಚನೆ ಸಭೆ ನಡೆಸಲಾಯಿತು.

ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಪ್ರತ್ಯೇಕವಾಗಿ ಕೆಮಿಕಲ್ ಇಂಡಸ್ಟ್ರಿ ಝೋನ್’ ಮಾಡಲಾಗಿದೆಯೇ, ಜಿಲ್ಲೆಯಲ್ಲಿ ಎಷ್ಟು ಕೆಮಿಕಲ್ ಇಂಡಸ್ಟ್ರಿಗಳು ನಡೆಯುತ್ತಿವೆ ಎಂಬ ಮಾಹಿತಿ ಕೇಳಿದಾಗ ಒಂದೆರೆಡು ದಿನದಲ್ಲಿ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.

ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಪ್ರತ್ಯೇಕವಾಗಿ ಐಟಿ-ಬಿಟಿ ಪಾರ್ಕ್’  ಮಾಡಲು ಎಷ್ಟು ಎಕರೆ ಪ್ರದೇಶ ನಿಗದಿಗೊಳಿಸಲಾಗಿದೆ ಎಂಬ ಪ್ರಶ್ನೆಗೆ ಶೀಘ್ರವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು.

 ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಲಾಜಿಸ್ಟಿಕ್‌ಹಬ್’ ನ್ನು ಎಷ್ಟು ಎಕರೆ ಪ್ರದೇಶದಲ್ಲಿ ಮಾಡಲು ಉದ್ದೇಶಿಸಲಾಗಿದೆ, ಯೋಜನೆಯ ಪ್ರಗತಿ ಯಾವ ಹಂತದಲ್ಲಿದೆ ಎಂಬ ವಿಷಯಕ್ಕೆ ನಾಗೇಶ್ ರವರು ನಾಲ್ಕನೇ ಹಂತದಲ್ಲಿ ಲಾಜಿಸ್ಟಿಕ್ ಹಬ್‌ಗೆ ಸುಮಾರು 300 ರಿಂದ 500 ಎಕರೆ ಜಮೀನು ನಿಗದಿಗೊಳಿಸಲು ಯೋಚಿಸಲಾಗಿದೆ. ಮಾಸ್ಟರ್ ಪ್ಲಾನ್ ಅಂತಿಮವಾದ ಬಳಿಕ ಮಾಹಿತಿ ನೀಡಲಾಗುವುದು ಎಂದರು.

ದಿಶಾ ಸಮಿತಿ ಸಭೆಯಲ್ಲಿ ತುಮಕೂರು ಇನವೆಸ್ಟ್ ಬಗ್ಗೆ ಪಿಪಿಟಿ ಪ್ರದರ್ಶಿಸಿ ಸಮಿತಿಯ ಸಲಹೆಗಳನ್ನು ಪರಿಗಣಿಸಿ, ಶೀಘ್ರದಲ್ಲಿ ದೇಶದಲ್ಲಿಯೇ ವಿನೂತನವಾದ ವರದಿ ಸಿದ್ಧಪಡಿಸಲಾಗುವುದು. ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗಿ ರಹಿತ ಜಿಲ್ಲೆ ಮಾಡಲು ಶ್ರಮಿಸಲು, ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಸೂಚಿಸಿದ್ದರಿಂದ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಶ್ರೀ ಜಗದೀಶ್‌ಶೆಟ್ಟರ್‌ರವರು ಬೆಂಬಲಿಸಿದ ಹಿನ್ನೆಲೆಯಲ್ಲಿ, ಜಿಲ್ಲೆಯ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳವಾರು ಸಂಪೂರ್ಣ ಚಿತ್ರಣ, ಬೆರಳ ತುದಿಯಲ್ಲಿ ದೊರೆಯುವ ಪೋರ್ಟಲ್ ಸಿದ್ಧವಾಗುತ್ತಿದೆ.

 ಈ ಸಂದರ್ಭದಲ್ಲಿ ಶ್ರೀ ಕೃಷ್ಣಪಾಟೀಲ್, ಶ್ರೀ ಡಿ.ಬಸವರಾಜ್, ಶ್ರೀ ಗೋವಿಂದಪ್ಪ, ಶ್ರೀ ಸುರೇಶ್, ಶ್ರೀ ಪ್ರಮೋದ್ ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು.