3rd March 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೂಕು ಆಡಳಿತಕ್ಕೆ ಆ ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಇವರುಗಳ ಪತ್ರಕ್ಕೆ ಬೆಲೆ ಇದೆಯಾ. ಹಾಗಾದರೆ ಇಲ್ಲಿನ ಆಡಳಿತ ಯಾರ ಅಧೀನದಲ್ಲಿದೆ.

 ದಿನಾಂಕ:21.11.2020 ರಂದು ನಡೆಯುವ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಯಾರ ಬಳಿ ಕಡತ ವಿಳಂಭವಾಗಿದೆ, ಎಂಬುದನ್ನು ಪರೀಶೀಲಿಸಿ ಅವರಿಗೆ ಶಾಲುಹೊದಿಸಿ ಸನ್ಮಾನ ಮಾಡಿ ಅಥವಾ ನಿಯಮ ಪ್ರಕಾರ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಲೂ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

ಅಂದು ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಈ ವಿಚಾರ ಗಂಬೀರವಾಗಿ ಚರ್ಚೆಯಾಗಲಿದೆ. ಇದು ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮಾಡಿದ ಅಪಮಾನ ಎಂದೇ ಭಾವಿಸಬೇಕಾಗಿದೆ.

  1. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಮಾಡಲು ಜಮೀನಿನ ಮಾಹಿತಿಯೊಂದಿಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಪತ್ರಕ್ಕೆ ವರದಿ ನೀಡಲು ಗುಬ್ಬಿ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರೂ ವರದಿ ನೀಡಿಲ್ಲ ಏಕೆ?
  2. ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು ಬಿದರೆಹಳ್ಳ ಕಾವಲ್ ನಲ್ಲಿರುವ ಸರ್ಕಾರಿ ಜಮೀನಿನನಲ್ಲಿ ಕೈಗಾರಿಕಾ ವಲಯ ಮಾಡಲು ಜಮೀನು ಗುರುತಿಸಲು ಪತ್ರ ನೀಡಿದ್ದರೂ ಇದೂವರೆಗೂ ವರದಿ ನೀಡಿಲ್ಲ ಏಕೆ?
  3. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸರ್ಕಾರಿ ಜಾಗವನ್ನು ಗುರುತಿಸಿ ವರದಿ ನೀಡಲು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿದ್ದರೂ ಇದೂವರೆಗೂ ವರದಿ ನೀಡಿಲ್ಲ ಏಕೆ?
  4. ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಕ್ರೀಡಾ ಗ್ರಾಮ ಯೋಜನೆಗಾಗಿ ಜಮೀನು ನೀಡಲು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಪತ್ರ ಬರೆದಿದ್ದರೂ ಇದೂವರೆಗೂ ವರದಿ ನೀಡಿಲ್ಲ ಏಕೆ.
  5. ಹೆಚ್.ಎ.ಎಲ್. ಘಟಕದ ಸಂಸ್ರ್ತತ್ಥರಿಗೆ ನಿವೇಶನ ಮತ್ತು ಮನೆ ನೀಡಲು ಸರ್ಕಾರಿ ಜಾಗದ ಮಾಹಿತಿ ನೀಡಿ ಎಂದು ಹಲವಾರು ಸಭೆಗಳನ್ನು ಲೋಕಸಭಾ ಸದಸ್ಯರು ಮತ್ತು ಉಪವಿಭಾಗಾಧಿಕಾರಿಗಳು ನಡೆಸಿದ್ದರೂ ಇದೂವರೆಗೂ ವರದಿ ನೀಡಿಲ್ಲ ಏಕೆ?
  6. ಉದ್ದೇಶಿತ ಕುಂದರನಹಳ್ಳಿ ಪೋಲೀಸ್ ಸ್ಟೇಷನ್‌ಗೆ ಸರ್ಕಾರಿ ಜಮೀನು ಗುರುತಿಸಿ ಜಮೀನು ನೀಡಲು ಪೋಲೀಸ್ ಇಲಾಖೆ ಕೇಳಿದ್ದರೂ ಇದೂವರೆಗೂ ವರದಿ ನೀಡಿಲ್ಲ ಏಕೆ?

ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ನಾರಾಯಣಸ್ವಾಮಿರವರು ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಕೆಡಿಪಿ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಸ್ವಾಮಿ ತಾವೂ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಉಪಾಧ್ಯಕ್ಷರಾಗಿದ್ದೀರಿ, ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲೂ ಇದಕ್ಕಿಂತ ಇನ್ನೂ ಯಾವ ಘನಕಾರ್ಯ  ಬೇಕು? ಯೋಚಿಸಿ ಸ್ವಾಮಿ.

About The Author