12th July 2024
Share

TUMAKURU:SHAKTHIPEETA FOUNDATION

                ತುಮಕೂರು ಸಮೀಪದ ವಸಂತ ನರಸಾಪುರ ಬಳಿ ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಯೋಜನೆ ಅಡಿ  ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯದಲ್ಲಿನ  ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಮುಂದಿನ ದಿನಗಳಲ್ಲಿ ಬರುವ  ಎಂ.ಎಸ್.ಎಸ್.ಇ ಉತ್ಪಾದನಾ ಚಟುವಟಿಕೆಗೆ ಗಳನ್ನು ಗಮನದಲ್ಲಿ ಇಟ್ಟುಕೊಂಡು  ಎಂ.ಎಸ್.ಎಸ್.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆಗೆ 1೦೦ ಕೋಟಿರೂ ಹೂಡಲು ಕೇಂದ್ರ ಸರಕಾರ ೨೦೧೪-೧೫ ರಲ್ಲೇ ಕ್ರಮವಹಿಸಿ, ಪ್ರತಿ ವರ್ಷ 5000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ  ಹೊಂದಲಾಗಿತ್ತು.

 ಈ ಕಾರಣಕ್ಕಾಗಿ ಸೂಕ್ಷ್ಮ,ಲಘು ಮತ್ತು ಮಧ್ಯಮ ಮಂತ್ರಾಲಯ  2017 ರಲ್ಲಿ ಸದರಿ ತುಮಕೂರು ಕೇಂದ್ರಕ್ಕೆ ಅಗತ್ಯವಾದ 15 ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ರಾಜ್ಯ ಸರಕಾರಕ್ಕೆ ಕೋರಿದ್ದರು . ಉಪನಿರ್ದೇಶಕರು ಸೂಕ್ಷ್ಮ,ಲಘು ಮತ್ತು ಮಧ್ಯಮ ಮಂತ್ರಾಲಯ [ಎಂ.ಎಸ್.ಎಸ್.ಇ] ರವರು,  ತುಮಕೂರು  ಪ್ರಸ್ಥಾವಿತ ಎಂ.ಎಸ್.ಎಸ್.ಇ ಟೆಕ್ನಾಲಜಿ ಸೆಂಟರ್ ಗೆ ಗುರುತಿಸಿರುವ ಜಮೀನನ್ನು ಸ್ಥಳೀಯ ಅಧಿಕಾರಿಗಳೊಂದಿಗೆ ಸ್ಥಳ ಪರೀಕ್ಷೆ ಮಾಡಿ,ಜಮೀನು ಸೂಕ್ತವಾಗಿರುವುದರಿಂದ ೧೫ ಎಕರೆ ಜಮೀನನ್ನು ಅಭಿವೃಧ್ಧಿ ಆಯುಕ್ತರು , ಎಂ.ಎಸ್.ಎಸ್.ಇ, ಭಾರತ ಸರ್ಕಾರ, ನವದೆಹಲಿ ಇವರಿಗೆ ಉಚಿತವಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

 ಇದರ ಅನುಸರಣೆ ಕ್ರಮವಾಗಿ, ರಾಜ್ಯ ಸರಕಾರ ದಿನಾಂಕ 02.08.2017  ರಲ್ಲಿ ಸರ್ಕಾರದ ಆದೇಶದ ಸಂಖ್ಯೆ: ಆರ್‌ಡಿ74ಎಲ್ ಜಿ ಟಿ 2015  ಮಂಜೂರು ಮಾಡಿ ಆದೇಶಮಾಡಿದೆ. ನಂತರದ ಕ್ರಮವಾಗಿ ಖಾತಾವನ್ನು ಸಹಾ ಅಭಿವೃಧ್ಧಿ ಆಯುಕ್ತರು , ಎಂ.ಎಸ್.ಎಸ್.ಇ, ಭಾರತ ಸರ್ಕಾರ, ನವದೆಹಲಿ, ಇವರ ಹೆಸರಿಗೆ ವರ್ಗಾಯಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಜನವರಿ 2018 ರಲ್ಲಿ ನಿರ್ಧೇಶಕರು, ಎಂ.ಎಸ್.ಎಸ್.ಇ ಡೆವೆಲಪ್ ಮೆಂಟ್ ಇನ್ಸ್‌ಟಿಟ್ಯೂಟ್, ಬೆಂಗಳೂರು ಇವರು ನವದೆಹಲಿಯ ತಮ್ಮ ಮುಖ್ಯ ಕಛೇರಿಗೆ ಪತ್ರ ಬರೆದು ತುಮಕೂರು ಕೇಂದ್ರ ಸ್ಥಾಪನೆಗೆ ಅಂದಾಜು ಪತ್ರಿಕೆ ಮತ್ತು ಇತರೆ ಕ್ರಮಗಳಿಗೆ ಪ್ರಾಥಮಿಕವಾಗಿ ರೂ 5289000   ಬಿಡುಗಡೆ ಮಾಡಲು ಸಹಾ ಕೋರಿರುತ್ತಾರೆ.

 ಮೇಲಿನ ಅನುಸರಣೆ ಕ್ರಮಗಳಿಗಾಗಿ ಐದು ವರ್ಷಗಳು ಸವೆದಿದ್ದು, ಈ ಮಧ್ಯೆ ದಿನಾಂಕ 01.02.2020   ರ ನಿರ್ಧೇಶಕರು, ಎಂ.ಎಸ್.ಎಸ್.ಇ ಡೆವೆಲಪ್ ಮೆಂಟ್ ಇನ್ಸ್‌ಟಿಟ್ಯೂಟ್, ಬೆಂಗಳೂರು ತಿಳಿಸುತ್ತಾ 2019 ನಂತರದಲ್ಲಿ ಸೂಕ್ಷ್ಮ, ಲಘು ಮತ್ತು ಮಧ್ಯಮ ಮಂತ್ರಾಲಯ  ನವದೆಹಲಿ -ಎಂ.ಎಸ್.ಎಸ್.ಇ .ಟೆಕ್ನಾಲಜಿ ಸೆಂಟರ್ ಸ್ಥಾಪನೆ ಸಂಬಂಧ ಮಾರ್ಗಸೂಚಿ ಬದಲಾವಣೆ ಮಾಡಲಾಗಿದ್ದು, ಅದರಂತೆ ಸೆಂಟರ್ ಸ್ಥಾಪನೆಗೆ ರಾಜ್ಯಸರಕಾರವೇ 3೦೦೦೦ ಚ.ಮೀ ಹೊಸದು/ಹಳೆಯದು ಕಟ್ಟಡದ ಆವರಣ ಉಚಿತವಾಗಿ ಅಭಿವೃಧ್ಧಿ ಆಯುಕ್ತರು, ಎಂ.ಎಸ್.ಎಸ್.ಇ, ಭಾರತ ಸರ್ಕಾರ,ನವದೆಹಲಿ ಇವರಿಗೆ ಒದಗಿಸಿದರೆ ಮಾತ್ರ ಎಂ.ಎಸ್.ಎಸ್.ಇ ಟೆಕ್ನಾಲಜಿ ಸೆಂಟರ್‌ಸ್ಥಾಪನೆ ಕ್ರಮವಹಿಸ ಬೇಕು ಎಂದು ತಿಳಿಸಲಾಗಿದೆ .

 ಆದರೆ ತುಮಕೂರು  ಪ್ರಸ್ಥಾವಿತ ಎಂ.ಎಸ್.ಎಸ್.ಇ .ಟೆಕ್ನಾಲಜಿ ಸೆಂಟರ್ ಸ್ಥಾಪನೆ  ಬದಲಾದ ಮಾರ್ಗಸೂಚಿ ಬಿಡುಗಡೆ ಹಿಂದೆಯೇ ಮಂಜೂರು ಆಗಿ ಕ್ರಮವಹಿಸಿರುವುದರಿಂದಲೂ ,ಈ ಸೆಂಟರ್ ಬೆಂಗಳೂರಿನ ವಿಸ್ತರಿತ ಸೆಂಟರ್ ಆಗಿರದೆ, ಪೂರ್ಣಪ್ರಮಾಣದ ಕೇಂದ್ರ ಆಗಿದೆ ಎಂದು ಮತ್ತು ಈ ಹಿಂದಿನ ಮಾರ್ಗಸೂಚಿಯಂತೆ 15 ಎಕರೆ ಭೂಮಿ ಈಗಾಗಲೇ  ಉಚಿತವಾಗಿ ಅಭಿವೃಧ್ಧಿ ಆಯುಕ್ತರು, ಎಂ.ಎಸ್.ಎಸ್.ಇ, ಭಾರತ ಸರ್ಕಾರ, ನವದೆಹಲಿ   ಹಸ್ತಾಂತರ ಆಗಿರುವುದರಿಂದ.

 ಬದಲಾದ ಹೊಸ ಮಾರ್ಗಸೂಚಿ ಪ್ರಸ್ಥಾವಿತ ತುಮಕೂರು   ಎಂ.ಎಸ್.ಎಸ್.ಇ .ಟೆಕ್ನಾಲಜಿ ಸೆಂಟರ್‌ಗೆ ಪಾಲನೆಗೆ ನ್ಯಾಯ ಸಮ್ಮತ ಅಲ್ಲವೆಂದು ಮಾನ್ಯ ಸಂಸದರಾದ ಶ್ರಿ ಜಿಎಸ್ ಬಸವರಾಜ್‌ರವರು 7/2019, 2/2020 ಹಾಗೂ 10.2020  ರಲ್ಲಿ ಮಾನ್ಯ ಸಚಿವರಾದ ಶ್ರೀ ನಿತೀಶ್ ಗಡ್ಕಕರಿ ಮತ್ತು ರಾಜ್ಯ ಸಚಿವರಾದ ಶ್ರೀ ಪ್ರತಾಪ್ ಚಂದ್ರ ಸಾರಾಂಗಿ ಅವರಿಗೆ ಪತ್ರ ಮುಖೇನ ಹಾಗೂ ಫೆಬ್ರವರಿ 2020 ರಲ್ಲಿ ಮೊಕ್ತ ಸಹಾ ಬೇಟಿಯಾಗಿ ಚರ್ಚಿಸಲಾಗಿದೆ ಎಂದೂ  ಮತ್ತು  ಮಾನ್ಯ ಸಚಿವರು   ತುಮಕೂರು  ಪ್ರಸ್ಥಾವಿತ ಎಂ.ಎಸ್.ಎಸ್.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆ ವಿಷಯವಾಗಿ ತಾವು ನ್ಯಾಯೋಚಿತ ಕ್ರಮ ವಹಿಸುವುದಾಗಿ ಮಾನ್ಯ ಸಂಸದರಾದ ಶ್ರಿ ಜಿ.ಎಸ್.ಬಸವರಾಜ್‌ರವರಿಗೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ.

 ಈ ಕೇಂದ್ರ ಸ್ಥಾಪನೆಗೆ  2014 ರಿಂದಲೂ ಅನುಸರಣೆ  ಮಾಡುತ್ತಿರುವ ಸದ್ಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಶ್ರೀಯುತ ಕುಂದರನಹಳ್ಳಿ ರಮೇಶ ರವರು  ಹೊಸ ಮಾರ್ಗಸೂಚಿ ಹಿನ್ನಲೆಯಲ್ಲಿ ವಿಲೆ ಇರುವ ತುಮಕೂರು  ಪ್ರಸ್ಥಾವಿತ ಎಂ.ಎಸ್.ಎಸ್.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆ ವಿಷಯ ಸವಾಲಾಗಿ ಸ್ವೀಕರಿಸಿ ಅವರ ಮಂದಿನ ನಡೆ  ಹೇಗಿರುತ್ತೆ ಎಂಬುದು ನೋಡಬೇಕಿದೆ.

                                                                                              ಟಿ.ಆರ್.ರಘೋತ್ತಮರಾವ್