21st November 2024
Share
CEO YOGISH T. & KUNDARANAHALLI RAMESH

TUMAKURU:SHAKTHIPEETA FOUNDATION

ಚಿತ್ರದುರ್ಗ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಬಾಗಕ್ಕೂ ಮನೆ ಮನೆಗೆ ನಲ್ಲಿ ನೀರು ನೀಡಲು ವ್ಯಾಪಕ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಕೇವಲ ನಾಲ್ಕು ಹೋಬಳಿಗಳಿಗೆ ಮಾತ್ರ ನದಿ ನೀರು ಅಲೋಕೇಷನ್ ಮಾಡಬೇಕಿದೆ. ಉಳಿದ ಎಲ್ಲಾ ಭಾಗಕ್ಕೂ ನದಿ ನೀರಿನ ಅಲೋಕೇಷನ್ ಆಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ದಿಶಾ ಸದಸ್ಯಕಾರ್ಯದರ್ಶಿಯವರಾದ ಶ್ರೀ ಟಿ.ಯೋಗೀಶ್‌ರವರು ಮಾಹಿತಿ ನೀಡಿದರು.

  ಶೀಘ್ರವಾಗಿ ನಾಲ್ಕು ಹೋಬಳಿಗಳಿಗೆ   ನದಿ ನೀರು ಅಲೋಕೇಷನ್ ಮಾಡಿಸಿ, ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಜಿಲ್ಲೆಯಾಧ್ಯಾಂತ ನದಿ ನೀರು ಅಲೋಕೆಷನ್ ಮಾಡಿರುವ ಬಹುತೇಕ ಪ್ರಥಮ ಜಿಲ್ಲೆ ಚಿತ್ರದುರ್ಗ ಜಿಲ್ಲೆಯಾಗ ಬಹುದು ಎಂಬ ಸಲಹೆ ನೀಡಲಾಯಿತು.

 ಯೋಜನೆ ಜಾರಿ ಪೂರ್ಣಗೊಳಿಸುವುದು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಲಿದೆ. ಆದರೇ ನೀರಿನ ಅಲೋಕೇಷನ್ ಬಹಳ ಪ್ರಮುಖ ಹಂತವಾಗಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದಾಗಿ ಸಿಇಓ ರವರು ತಿಳಿಸಿದರು.

ದಿನಾಂಕ:25.11.2020 ರಂದು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಸದಸ್ಯ ಕಾರ್ಯದರ್ಶಿಯರವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಚಿತ್ರದುರ್ಗ ಜಿಲ್ಲಾ ಮಟ್ಟದ ದಿಶಾ ಕಾರ್ಯ ವೈಖರಿ ಬಗ್ಗೆ ಅಧಿಕಾರಿಗಳು ಮತ್ತು ನೌಕರರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಾಯಿತು.

MAHAMAD MOBIDDIN,. EE. DAYANAND SWAMY. MANJUNATH, ANAND, SHASHI & KUNDARANAHALLI RAMESH

ಚಿತ್ರದುರ್ಗ ಲೋಕಸಭಾ ಸದಸ್ಯರು ಹಾಗೂ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣಸ್ವಾಮಿರವರು ಇದೂವರೆಗೂ ವಿವಿಧ ವರ್ಗದ ಸದಸ್ಯರನ್ನು ನಾಮನಿರ್ದೇಶನ ಮಾಡಲು ಹೆಸರುಗಳನ್ನೇ ಸೂಚಿಸಿಲ್ಲ ಎಂಬ ವಿಷಯ ನಿಜಕ್ಕೂ ಆಶ್ಚರ್ಯವಾಗಿತ್ತು.

 ಭರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ ಮನೆಗೆ ಕುಡಿಯುವ ನೀರು ನೀಡಲು ಬಹಳ ಹಿಂದಿನಿಂದಲೂ ಶ್ರಮಿಸಿರುವ ಮಾಹಿತಿ ಪಡೆಯಲಾಯಿತು. ಈ ಬಗ್ಗೆ ನಿಖರವಾದ ಮಾಹಿತಿ ನೀಡುವುದಾಗಿ ಇಇ ಯವರಾದ ಶ್ರೀ ದಯಾನಂದಸ್ವಾಮಿರವರು ಮತ್ತು ಜೆಜೆಎಂ ಡಿಪಿಎಂ ಶ್ರೀ ಮಂಜುನಾಥ್‌ರವರು ತಿಳಿಸಿದರು.

ಕೇಂದ್ರ ಸರ್ಕಾರ ಘೋಶಿರುವಂತೆ 100 ದಿನಗಳೊಳಗಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲೆಗೆ ನಲ್ಲಿ ನೀರು ಸರಬರಾಜು ಮಾಡುವುದಾಗಿ ಸಿಇಓ ರವರು ಖಚಿತ ಭರವಸೆ ನೀಡಿದ್ದಾರೆ.

ದಿಶಾ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲು ಸಂಸದರೊಂದಿಗೆ ಚರ್ಚಿಸಿ, ಅಗತ್ಯ ಕ್ರಮಕೈಗೊಳ್ಳಲು ಪಿಡಿಯವರಾದ ಶ್ರೀ ಗಾಯತ್ರಿರವರೊಂದಿಗೆ ಚರ್ಚಿಸಲಾಯಿತು.

 ಎನ್‌ಆರ್‌ಡಿಎಂಎಸ್ ವಿಭಾಗಕ್ಕೆ ಭೆಟಿ ನೀಡಿ ಶ್ರೀ ಆನಂದ್‌ರವರೊಂದಿಗೆ ಜಿಐಎಸ್ ಲೇಯರ್ ಬಗ್ಗೆ ಸಮಾಲೋಚನೆ ನಡೆಸಲಾಯಿತು.