26th July 2024
Share

TUMAKURU:SHAKTHIPEETA FOUNDATION

ಅಧ್ಯಕ್ಷರ ಭಾಷಣದ ಪ್ರತಿ

ತುಮಕೂರು ಜಿಲ್ಲೆಯ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾತನಾಡಿ ಈ ದಿನ ಸುಮಾರು 5 ಗಂಟೆ 45 ನಿಮಿಷಗಳ ಕಾಲ ಸುಧೀರ್ಘವಾಗಿ ಚರ್ಚೆ ನಡೆದಿದೆ. 

 ಬಹುತೇಕ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ, ಕೆಲವು ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಕರೆಯದೆ ಇರುವ ವಿಚಾರಗಳ ಬಗ್ಗೆ ಮುಂದಿನ ಸಭೆಯಿಂದ ಚರ್ಚಿಸೋಣ.

 ಕುಂದರನಹಳ್ಳಿ ರಮೇಶ್‌ರವರು ದಿಶಾ ಸಮಿತಿ ವ್ಯಾಪ್ತಿಗೆ ಬರುವ ಒಂದು ಅಭಿವೃದ್ಧಿ ಗ್ರಂಥವನ್ನು, ಈ ದಿನ ಪಟ್ಟಿ ಮಾಡಿ ನೀಡಿದ್ದಾರೆ. ಅವರು ಸಹ ಹಲವಾರು ಯೋಜನೆಗಳನ್ನು ಪಟ್ಟಿಯಲ್ಲಿ ಬರೆದಿಲ್ಲ, ಪ್ರತಿಯೊಂದು ಇಲಾಖೆಯವರು ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಅನುದಾನ ಅಥವಾ ಅನುದಾನ ನೀಡದೆಯೂ ಸೂಚಿಸಿರುವ ಎಲ್ಲಾ ಯೋಜನೆಗಳ ಬಗ್ಗೆ ದಿಶಾ ಸಮಿತಿ ಚರ್ಚಿಸಲು ಅವಕಾಶವಿದೆ.

ಆದ್ದರಿಂದ ಈ ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸಭೆ ನಡವಳಿಕೆಯಲ್ಲಿ ಪ್ರಸ್ತಾಪಿಸಿ, ಯಾವ ಇಲಾಖೆ, ಯಾವ ಯೋಜನೆಗಳ ಬಗ್ಗೆ ಕ್ರಮವಹಿಸಬೇಕು ಎಂದು ಅಗತ್ಯ ಕ್ರಮಕ್ಕಾಗಿ ಸೂಚಿಸಲು ಸದಸ್ಯ ಕಾರ್ಯದರ್ಶಿರವರಿಗೆ ತಿಳಿಸಿದರು.

ಪ್ರತಿಯೊಂದು ಇಲಾಖೆ ಅಧಿಕಾರಿಗಳು ವಿವರವಾಗಿ, ಆಯಾ ಇಲಾಖೆಯ ಅಡಿಯಲ್ಲಿ ಬರುವ ಯೋಜನೆಗಳ ಮಾಹಿತಿಯನ್ನು ತುಮಕೂರು ಜಿಐಎಸ್‌ನಲ್ಲಿ ಲೇಯರ್‌ವಾರು ಪ್ರಕಟಿಸಬೇಕು. ಸಭೆಯಲ್ಲಿ ಸದಸ್ಯರು ಯಾವುದನ್ನು ಕೇಳಿದರು ನಕ್ಷೆಯಲ್ಲಿ ತೋರಿಸುವ ಮಟ್ಟಕ್ಕೆ ಸಿದ್ಧರಾಗಲು ಕರೆ ನೀಡಿದರು.

 ರಾಜ್ಯ ವಲಯ ಹಾಗೂ ಕೇಂದ್ರ ವಲಯದ ಯೋಜನೆಗಳ ಬಗ್ಗೆಯೂ ತುಮಕೂರು ಜಿಐಎಸ್‌ನಲ್ಲಿ ಪ್ರಕಟಿಸಲೇಬೇಕು. ಇದು ಡಿಜಿಟಲ್ ಇಂಡಿಯಾ ಯುಗ, ಕೇಂದ್ರ ಸರ್ಕಾರದ ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದಾಗಿದೆ. ಆದ್ದರಿಂದ ಯಾರು ಸಹ ಉದಾಸೀನ ಮಾಡಬಾರದು.

 ಸದಸ್ಯರು ಮನೆಯಲ್ಲಿ ಕುಳಿತು ಕಾಮೆಂಟ್ ಮಾಡಿದರೆ, ತಕ್ಷಣ ಆಯಾ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಯಾವ ವಿಚಾರಗಳು ಜಟಿಲವಾಗಿ ಇರುತ್ತವೆಯೋ ಅಂಥಹ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ.

 ಕೇಂದ್ರ ಸರ್ಕಾರ ಒಂದು ಹೊಸ ಯೋಜನೆ ಘೋಶಿಸಿದರೆ ತಕ್ಷಣ ನಾವು ದಿಶಾ ವ್ಯಾಪ್ತಿಗೆ ಸೇರ್ಪಡೆಮಾಡಿಕೊಂಡು ಅನುಷ್ಠಾನಕ್ಕೆ ಶ್ರಮಿಸಲೇ ಬೇಕು. ಕೇಂದ್ರದಿಂದ ಬಂದಿರುವ ಪತ್ರಗಳನ್ನು ಸದಸ್ಯರು ಗಮನಿಸಿದರೆ ಅವರಿಗೂ ಮಾಹಿತಿ ದೊರೆಯುತ್ತದೆ.

 ಅಲ್ಲದೇ ಕೇಂದ್ರ ಸರ್ಕಾರದಿಂದ ಯಾವುದೇ ತಂಡ ಜಿಲ್ಲೆಗೆ ಬಂದಾಗ ಸದಸ್ಯರಿಗೆ ಮತ್ತು ನನ್ನ ಗಮನಕ್ಕೆ ತನ್ನಿ, ನಾವೂ ಸಹ ಅವರೊಂದಿಗೆ ಚರ್ಚಿಸಿದಲ್ಲಿ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಮನವರಿಕೆಯಾಗಲಿದೆ.

 ವಿಷಯವಾರು ಕೆಲವು ಭಾರಿ ಕಠೀಣ ಶಬ್ಧಗಳಲ್ಲಿ ಸೂಚಿಸದರೇ ಅದಕ್ಕೆ ಅಸಮಾಧಾನ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಒಂದೇ ಮನೆಯ ಸದಸ್ಯರಂತೆ ಶ್ರಮಿಸಿದರೆ ಮಾತ್ರ, ತುಮಕೂರು ಜಿಲ್ಲಾ ದಿಶಾ ಸಮಿತಿ ದೇಶಕ್ಕೆ ಮಾದರಿಯಾಗುವುದರಲ್ಲಿ ಸಂಶಯವೇ ಇಲ್ಲ.

 ಈ ಸಭೆಯೂ ಸೇರಿದಂತೆ ಸುಮಾರು ಐದು ಸಭೆಗಳನ್ನು ನಡೆಸಿದ್ದೇವೆ, ಎಲ್ಲಾ ಸಭೆಯಲ್ಲೂ ಉತ್ತಮವಾಗಿ ಚರ್ಚೆಸಲಾಗಿದೆ. ಪಾಲಾನಾ ವರದಿ ಇಲ್ಲಿ ಬಹಳ ಮುಖ್ಯ, ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಲ್ಲಿ ಮಾತ್ರ ಸಭೆಗೆ ಅರ್ಥಪೂರ್ಣ. ಪದೇ ಪದೇ ಅದೇ ರಾಗ ಎಂದಾದರೆ, ಈ ಸಮಿತಿಯ ಉದ್ದೇಶವಾದರೂ ಏನು?

 ಮುಂದಿನ ಸಭೆಯನ್ನು ಡೆಸೆಂಬರ್ ಒಳಗೆ ಕರೆದು ತುಮಕೂರು ಜಿಐಎಸ್ ಲೋಕಾರ್ಪಣೆ ಮಾಡಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ. ಸದಸ್ಯಕಾರ್ಯದರ್ಶಿಗಳು ಈಗಾಗಲೇ ಸನ್ನದರಾಗಿದ್ದಾರೆ. ಅವರಿಗೆ ಎಲ್ಲಾ ಇಲಾಖೆಗಳು ಕೈಜೋಡಿಸಲು ಸೂಚಿಸಿದರು.

 ಸಂಪನ್ಮೂಲ ಕೇಂದ್ರ ದಿಶಾ ಭವನದಂತೆ ಕಾರ್ಯನಿರ್ವಹಿಸಬೇಕು, ಇನ್ನೂ ಮುಂದೆ ಎಲ್ಲಾ ಇಲಾಖೆಗಳು ಜಿಐಎಸ್ ಮಯವಾಗಬೇಕು. ತುಮಕೂರು ಜಿಲ್ಲೆ ಡೇಟಾ ಜಿಲ್ಲೆಯಾಗಿ ಬದಲಾಗಬೇಕು. ಅಗತ್ಯ ಬಿದ್ದಲ್ಲಿ ಹೊರಗುತ್ತಿಗೆ ನೀಡಿ ಮಾಹಿತಿ ಸಂಗ್ರಹಿಸಿಕೊಳ್ಳಿ, ಜೊತೆಗೆ ತಮ್ಮ ತಮ್ಮ ಇಲಾಖೆಗಳು ಈಗಾಗಲೇ ಸಿದ್ಧಪಡಿಸರುವ ಯೋಜನೆಗಳ ಲಿಂಕ್ ಮಾಡಿ, ತುಮಕೂರು ಜಿಐಎಸ್ ಅಭಿವೃದ್ಧಿ ಮಾಹಿತಿ ಕಣಜವಾಗ ಬೇಕು ಎಂದು ಪ್ರತಿಪಾದಿಸಿದರು.