TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆಯಲು ಪ್ರತಿಯೊಂದು ಯೋಜನೆಗೂ ವಿಷನ್ ಗ್ರೂಪ್ ರಚಿಸಲು ಚಿಂತನೆ ನಡೆಸುತ್ತಿದೆ. ಪ್ರಸ್ತುತ ವಾಟರ್ ವಿಷನ್ ಗ್ರೂಪ್ ರಚಿಸಿ, ಮಾದರಿಯಾಗಿ ಕಾರ್ಯ ನಿರ್ವಹಿಸಲು ಯೋಚಿಸಿರುವ ಅಧಿಕಾರಿಗಳು ಒಂದು ಪರಿಕಲ್ಪನಾ ವರದಿಯನ್ನು/ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಮಾನ್ಯ ಮುಖ್ಯ ಮಂತ್ರಿಯವರಿಗೆ ಸಲ್ಲಿಸಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯದ /ಕೆಂದ್ರದ ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ, ನಿವೃತ್ತರಾಗಿರುವ ಕಾರ್ಯದರ್ಶಿಗಳು, ನಿವೃತ್ತ ಮುಖ್ಯ ಇಂಜಿನಿಯರ್, ಸಲಹಾ ಸಂಸ್ಥೆಗೆಳು, ನೀರಾವರಿ ಅಧ್ಯಯನ ಕೇಂದ್ರಗಳು, ನೀರಾವರಿ ಪರಿಣಿತರು, ಪ್ರಗತಿಪರ ರೈತರು, ನೀರಾವರಿಯಲ್ಲಿ ಸೇವೆ ಸಲ್ಲಿಸುವ ಸಂಘಸಂಸ್ಥೆಗಳ ಅಭಿಪ್ರಾಯ ನೀಡಲು ಈ ಮೂಲಕ ಮನವಿ ಮಾಡಲಾಗಿದೆ.
ದಿಶಾ ಸಮಿತಿ ವಿಷನ್ ಗ್ರೂಪ್ ರಚಿಸುವ ಮುನ್ನ, ಪ್ಯಾನಲ್ ಲಿಸ್ಟ್ ಮಾಡಲು ಯೋಚಿಸುತ್ತಿದೆ. ಪ್ರಥಮ ವಿಷನ್ ಗ್ರೂಪ್ ಮಾದರಿ ಹೇಗಿರಬೇಕು ಎಂಬ ಬಗ್ಗೆ ಒಂದು ವರದಿ ನೀಡುವ ಕೆಲಸವನ್ನು ನಮ್ಮ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಲು ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.