9th October 2024
Share

TUMAKURU:SHAKTHI PEETA FOUNDATION

‘ಕೇಂದ್ರ ಸರಕಾರದ ಕ್ಯಾಬಿನೆಟ್ ಕಮಿಟಿ ಆನ್ ಎಕ್ನಾಮಿಕ್ ಅಪೇರ್ಸ್ ನಿಂದ ಮಹತ್ವದ ಅನುಮೊದನೆ ಮತ್ತು 1701 ಕೋಟಿ ರೂ ಮೂಲ ಭೂತ ಸೌಕರ್ಯ ಪರಿಚಯಿಸಲು ಆದೇಶ’

 ಕೇಂದ್ರ ಸರ್ಕಾರ ತುಮಕೂರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ತಿಳಿಸಿದ್ದಾರೆ. ಮಂಜೂರಾತಿಗೆ ಶ್ರಮಿಸಿದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು, ಕೇಂದ್ರ ಸಚಿವರುಗಳಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದಿದ್ದಾರೆ.

‘ಕೇಂದ್ರ ಸರಕಾರದ ಕ್ಯಾಬಿನೆಟ್ ಕಮಿಟಿ ಆನ್ ಎಕ್ನಾಮಿಕ್ ಅಪೇರ್ಸ್ ನಿಂದ ಮಹತ್ವದ ಅನುಮೊದನೆ ಮತ್ತು 1701 ಕೋಟಿ ರೂ ಮೂಲ ಭೂತ ಸೌಕರ್ಯ ಪರಿಚಯಿಸಲು ಆದೇಶ’

ಕಳೆದ 3 ತಿಗಳಿನಿಂದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೇವೂ ಇಂದು ನೆಮ್ಮದಿಯಾಗಿದೆ ಎಂದು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

2012 ರಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ ಪಡೆದಿದ್ದರೂ ಮಂಜೂರಾತಿಗೆ 8 ವರ್ಷ ಕಾಲ ತೆಗೆದುಕೊಂಡರು ಸಮಾದಾನವಾಗಿದೆ ಎಂದು ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.   

ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ ದಲ್ಲಿನ ’ತುಮಕೂರು ಇಂಡಸ್ಟ್ರಿಯಲ್ ನೋಡ್  ಬಹಳ ವರ್ಷಗಳ ಕನಸು ನನಸಾಗಿದೆ ಎಂದು ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಟಿ.ಆರ್. ರಘೋತ್ತಮ ರಾವ್ ತಿಳಿಸಿದ್ದಾರೆ.

ಪೀಠಿಕೆ:- ಯೋಜನಾ ಆಯೋಗ ನವದೆಹಲಿ 12 ನೇ ಯೋಜನಾ ಅವಧಿಯಲ್ಲಿ ದೇಶದ ರಾಷ್ಟ್ರೀಯ ಜಿ ಡಿ ಪಿ ಸೂಚ್ಯಂಕ  ಬೆಳವಣಿಗೆ ಕನಿಷ್ಠ ಶೇ.25  ರಷ್ಟು ಉತ್ಪಾದನಾವಲಯದಿಂದ ಕೊಡುಗೆ ನೀರಿಕ್ಷಣೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ  ಮತ್ತುರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ನೀತಿ 2011   ಪರಿಕಲ್ಪನೆ ಯನ್ನು ಅಪ್ರೋಚ್ ಪೇಪರ್ ನಲ್ಲಿ ಚರ್ಚಿಸಿರುವುದನ್ನು ಗಮನಿಸಿ, ಈ ಹಿಂದಿನ ತಮ್ಮ ಲೋಕಸಭಾ ಅವಧಿಯಲ್ಲಿ ಶ್ರೀ ಜಿಎಸ್.ಬಸವರಾಜ್‌ರವರು   ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದು ಮತ್ತು ತುಮಕೂರು ಜಿಲ್ಲೆಯಲ್ಲಿ ಹಾದುಹೋಗುವ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಲ್ಲಿ ವಸಂತನರಸಾಪುರದಲ್ಲಿ ಬಳಿ ಸ್ಥಾಪಿಸಲು ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆಯನು ಅಕ್ಟೋಬರ್-2012  ಪಡೆದಿರುವುದು ಇತಿಹಾಸ. ಜೈಕಾ ಜಪಾನ್ ಸಂಸ್ದೆಯಿಂದ  ಪ್ರಿಲಿಮಿನರಿ ವರದಿ ಸಿದ್ದಪಡಿಸಲಾಯಿತು.

 ಇದೇ ಆವರಣದಲ್ಲಿ 2014 ರಲ್ಲಿ ತುಮಕೂರು ಇಂಡಸ್ಟ್ರಿಯಲ್ ನೋಡ್ ಸ್ಥಾಪನೆಗೆ ಕ್ರಮ, ಕೇಂದ್ರದ ತಾತ್ವಿಕ ಒಪ್ಪಿಗೆ, 2016  ರಲ್ಲಿ ಇಂದಿನ ಹಾಲಿ ಸಂಸದರಿಂದ ’ತುಮಕೂರು ಇಂಡಸ್ಟ್ರಿಯಲ್ ನೋಡ್ ಮಾಸ್ಟ್ರರ್ ಪ್ಲಾನಿಂಗ್ ಮಾಡಲು ಅಂದಿನ ಕಾಮರ್ಸ್ ಸಚಿವರಾದ ಶ್ರೀಮತಿ ನಿರ್ಮಲಾ ಸಿತಾರಾಮನ್ ಅವರಿಗೆ ಆಗ್ರಹಿಸಿ ಪತ್ರ. ಇಂಡಸ್ಟ್ರಿಯಲ್ ಕಾರಿಡಾರ್ ಸಂಬಂಧದ /ಇಂಡಸ್ಟ್ರಿಯಲ್ ನೋಡ್ ನಿಗಾ ಕ್ಕೆ   ಕೇಂದ್ರ ಸರಕಾರದಿಂದ ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಡೆವಲಪ್ಮೆಂಟ್ ಟ್ರಸ್ಟ್ ರಚನೆ ಮತ್ತು ರಾಜ್ಯ ಸರರ್ಕಾರದೊಂದಿಗೆ ಸೇರಿ ಎಸ್‌ಪಿವಿ  ರಚನೆ.

 ಈ ದಿನ ಅನುಮೋದನೆಯಾದ ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಏನೇನು ಬರಬಹುದು

  1. ಮೊದಲ ಹಂತದಲ್ಲಿ 1736  ಎಕರೆ ಭೂ ಪ್ರದೇಶದಲ್ಲ್ ಕೈಗಾರಿಕಾನಗರ ತಲೆ ಎತ್ತಲಿದೆ.
  2. ಜಾಗತಿಕ ಮಟ್ಟದ ರಸ್ತೆ ಸೌಕರ್ಯ್, ಎಲ್ಲಾಮೂಲ ಭೂತ ಸೌಕರ್ಯ ಹೊಂದಿದ ವಿಶ್ವ ಮಟ್ಟದ ಕೈಗಾರಿಕನಗರ ಇದಾಗಲಿದೆ.
  3. ಜಾಗತಿಕ ಮಟ್ಟದಲ್ಲಿ ಪ್ರಶಸ್ಥ ಹೂಡಿಕೆ ತಾಣವಾಗಲಿದೆ.
  4. ದಿನದ ಕೇಂದ್ರ ಸರಕಾರದ ಕ್ಯಾಬಿನೆಟ್ ಕಮಿಟಿ ಆನ್ ಎಕ್ನಾಮಿಕ್ ಅಪೇರ್ಸ್ ನಿಂದ ಮಹತ್ವದ ಅನುಮೊದನೆ ಮತ್ತು 1701 ಕೋಟಿ ರೂ ಮೂಲ ಭೂತ ಸೌಕರ್ಯ ಪರಿಚಯಿಸಲು ಆದೇಶ.
  5. ತುಮಕೂರು ಇಂಡಸ್ಟ್ರಿಯಲ್ ನೋಡ್‌ಗೆ  ಮಲ್ಟಿಮಾಡಲ್ ಉನ್ನತ ಮಟ್ಟದ ಭೂಸಾರಿಗೆ ವ್ಯವಸ್ಥೆ ಇರಲಿದೆ.
  6. ತುಮಕೂರು ಇಂಡಸ್ಟ್ರಿಯಲ್ ನೋಡ್‌ಗೆ  ನಿಗಾಕ್ಕೆ ಕೆಂದ್ರಸರಕಾರ ಮತ್ತು ರಾಜ್ಯಸರ್ಕಾರ ಎಸ್ಪಿವಿ ಇದೆ. ಅದರ ಮೂಲಕ ಅಭಿವೃಧ್ಧಿ, ನಿರ್ವಹಣೆ
  7. ಇದು ಭಾರತದ ಅಚುಕಟ್ಟಾಗಿ ನಿರ್ವಹಣೆ, ಬ್ರಹತ್ ಔದ್ಯೋಮಿಕ ಕೇಂದ್ರವಾಗಿ ೫೦೦೦೦ ಕೋಟಿ ಹೂಡಿಕೆ ಆಗಲಿದೆ. ಮತ್ತು ಎರಡು ಲಕ್ಷ ಉದ್ಯೋಗ ಸೃಷ್ಠಿ
  8. ಬೆಂಗಳೂರಿಗೆ ಪಡಸಾಲೆ ನಗರ ತುಮಕೂರು ಆಲ್ಟರ್‌ನೇಟ್ ಹೂಡಿಕೆಗೆ ಪ್ರಶಸ್ಥ ತಾಣ ಆಗಲಿದೆ.
  9. ಎರಡೆನೆಯ ಹಂತದಿಂದ ಐದನೇ ಹಂತದವರಿಗೆ ಒಟ್ಟು 13500  ಎಕರೆ ಭೂ ಪ್ರದೇಶದ  ಮೆಗಾ ಇಂಡಸ್ಟ್ರಿಯಲ್ ಟೌನ್ ಶಿಪ್ ಇದಾಗಲಿದೆ.
  10. ಈ ಆವರಣದಲ್ಲಿ ವಿವಿಧ  ಸ್ವತಂತ್ರ ಕೈಗಾರಿಕಾ ವಲಯಗಳ ಜೊತೆಗೆ ನಾಲೆಡ್ಜ್ ಪಾರ್ಕ್, ಮಾಹಿತಿ ತಂತ್ರಜ್ಞಾನ ವಲಯ, ಎಮ್.ಎಸ್.ಎಂ.ಇ ವಲಯಕ್ಕೆ ಮೀಸಲು ವಲಯ ಇರಲಿದೆ.
  11. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಘೋಷಣೆಗೆ ಪೂರಕವಾದ ಕೈಗಾರಿಕ ಟೌನ್ ಶಿಪ್
  12. ಭವಿಷ್ಯದಲ್ಲಿ ಇದು ಗ್ರೇಟರ್ ನೊಯಿಡಾ ಮಾದರಿಯಲ್ಲಿ ತುಮಕೂರು ಅಭಿವೃಧ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.