22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಾದ ಶ್ರೀಮತಿಶಾಲಿನಿರಜನೀಶ್‌ರವರಿಗೆ ಬರೆದ ಪತ್ರದ ಸಾರಾಂಶ.

ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರು ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ರಾಜ್ಯದ ಕೆಳಕಂಡ ಎಲ್ಲಾ ವರ್ಗದವರಿಗೂ ಪತ್ರ ಬರೆಯಿಸಿ, ಅವರವರ ವ್ಯಾಪ್ತಿಯಲ್ಲಿ ಈ ಮಾಹಿತಿಗಳನ್ನು ಸಂಗ್ರಹಿಸಲು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿಯೂ ಚರ್ಚೆಮಾಡಿ ಸಭೆ ನಡವಳಿಕೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಕೋರಿದೆ.

  1. ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು.
  2. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗ ಬೇಕಿರುವ ಯೋಜನಾವಾರು ಅನುದಾನ.(ಯುಸಿ ಸಲ್ಲಿಸಿರುವ)
  3. ಕೇಂದ್ರ ಸರ್ಕಾರದಲ್ಲಿ ಮಂಜೂರಾಗ ಬೇಕಿರುವ ಯೋಜನೆಗಳು.(ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವ)
  4. ಕೇಂದ್ರ ಸರ್ಕಾರವೇ ಮೂಲಭೂತ ಯೋಜನೆಗಳಿಗೆ ಪೈಪ್‌ಲೈನ್ ಯೋಜನೆಗಳ ಪಟ್ಟಿಯನ್ನು ಇಲಾಖಾವಾರು  ಮಾಡುತ್ತಿರುವುದರಿಂದ ಅವರವರ ವ್ಯಾಪ್ತಿಯಲ್ಲಿನ ಹೊಸ ಚಿಂತನೆಗಳು, ಪರಿಕಲ್ಪನೆಗಳ ಯೋಜನೆಗಳು
  5. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ವಿವಿಧ ಯೋಜನೆಗಳ ತಾಜಾ ಲೆಕ್ಕ(ಖರ್ಚು ಅಥವಾ ಬ್ಯಾಂಕಿನಲ್ಲಿ ಡಿಪಾಸಿಟ್ ಅಥವಾ ಇಲಾಖೆಯಲ್ಲಿರುವ ಮೊತ್ತದ ಮಾಹಿತಿ)

ರಾಜ್ಯದ ಇವರೆಲ್ಲರಿಗೂ ಪತ್ರ ಬರೆಯುವ ಮೂಲಕ ರಾಜ್ಯ ಮಟ್ಟದ ದಿಶಾ ಸಮಿತಿಯ ಬಗ್ಗೆ ವಿಶೇಷ ಗಮನ ನೀಡುವಂತೆ ಮಾಡುವುದು ಸೂಕ್ತವಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ರಾಜ್ಯದ ಯೋಜನೆಗಳ ಚಿತ್ರಣ ಬೆರಳತುದಿಯಲ್ಲಿ ಇರುವಂತೆ ಮಾಡುವುದೇ ದಿಶಾ ಸಮಿತಿಯ ಆದ್ಯಕರ್ತವ್ಯವೂ ಆಗಿದೆ. 

  1. ಲೋಕಸಭಾ ಸದಸ್ಯರು.
  2. ರಾಜ್ಯಸಭಾ ಸದಸ್ಯರು
  3. ಜಿಲ್ಲಾ ಉಸ್ತವಾರಿ ಸಚಿವರು.
  4. ವಿಧಾನಸಭಾ ಸದಸ್ಯರು.
  5. ವಿಧಾನಪರಿಷತ್ ಸದಸ್ಯರು.
  6. ಜಿಲ್ಲಾ ಪಂಚಾಯತ್ ಅಧ್ಯಕ್ಷರು.
  7. ತಾಲ್ಲೂಕು ಪಂಚಾಯತ್ ಅಧ್ಯಕ್ಷರು.
  8. ಗ್ರಾಮಪಂಚಾಯತ್ ಅಧ್ಯಕ್ಷರು/ಆಡಳಿತಾಧಿಕಾರಿಗಳು.
  9. ಮಹಾನಗರಪಾಲಿಕೆ ಅಧ್ಯಕ್ಷರು.
  10. ನಗರಸಭೆ ಅಧ್ಯಕ್ಷರು.
  11. ಪುರಸಭೆ ಅಧ್ಯಕ್ಷರು
  12. ಪಟ್ಟಣ ಪಂಚಾಯಿತಿ ಅಧ್ಯಕ್ಷರು
  13. ನಿಗಮ,ಮಂಡಳಿ, ಕಾರ್ಪೋರೇಷನ್ ಅಧ್ಯಕ್ಷರು.
  14. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ.
  15. ಜಿಲ್ಲಾಧಿಕಾರಿಗಳು.
  16. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್.