27th July 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಬಯೋ ಡೈವರ್ಸಿಟಿ ಪಾರ್ಕ್’ ನಿರ್ಮಾಣ ಮಾಡಲು ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿದ್ದರು.

ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಚನ್ನಬಸಪ್ಪನವರು ಸಂಸದರು ಪತ್ರ ನೀಡಿದ ದಿವಸವೇ ಜಿಲ್ಲೆಯ ಸಂಭಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಪತ್ರ ಬರೆದು ಒಂದು ದಾಖಲೆ ನಿರ್ಮಿಸಿದರು’.

ನೋಡಿ ಕಾಕತಾಳೀಯ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯೂ ಇದೇ ಮಾದರಿಯ ಪವಿತ್ರವನ’ ನಿರ್ಮಾಣ ಮಾಡಲು ರಾಜ್ಯಾಧ್ಯಾಂತ ಸುತ್ತೋಲೆ ಹೊರಡಿಸಿದೆ. ಇದು ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಐಡಿಯಾ ನ ಎಂಬ ಬಗ್ಗೆ ಅಧ್ಯಯನ ಆರಂಭ ಮಾಡಿದ್ದೇನೆ.

ಪವಿತ್ರವನದ ಜನ್ಮ ಹೇಗಾಯಿತು ಎಂಬ ಮಾಹಿತಿ  ಇದ್ದರೆ ನೀಡಲು ಮನವಿ.

ರಾಜ್ಯದ ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರು, ಈ ಬಗ್ಗೆ ತಮ್ಮ ತಮ್ಮ ವ್ಯಾಪ್ತಿಯ ಗ್ರಾಮಪಂಚಾಯಿತಿಗಳಿಗೆ ಬೇಟಿ ನೀಡಿ ನೊಂದಾಯಿಸಿಕೊಂಡು, ಬಿಎಂಸಿಯಲ್ಲಿ ಕಾರ್ಯನಿರ್ವಹಿಸಲು ಮನವಿ ಮಾಡಿದ್ದೇನೆ.

ಮನೆಬಾಗಿಲಿಗೆ ಅಧಿಕಾರಿಗಳು ಬರುವ ಕಾಲ ಇಲ್ಲ. ಬರೀ ಮಾಧ್ಯಮಗಳಲ್ಲಿ ಹೇಳಿಕೆಗೆ ಸೀಮೀತವಾಗಿದೆ. ತಾವುಗಳೇ ಮೇಲೆ ಬಿದ್ದು ನೊಂದಾಯಿಸಿಕೊಳ್ಳಿ, ಯಾರಾದರೂ ನೊಂದಾಯಿಸಿಕೊಳ್ಳದೇ ಇದ್ದಲ್ಲಿ, ತಮ್ಮ ಸೇವೆ ಬಳಸಿಕೊಳ್ಳಲು ನಿರಾಕರಸಿದ್ದಲ್ಲಿ ನನಗೆ ಮಾಹಿತಿ ನೀಡಲು ಮನವಿ’.

ಪ್ರತಿ ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಓಗಳು ಬಿಎಂಸಿ ಕಮಿಟಿಗಳನ್ನು ಚುರುಕುಗೊಳಿಸುವ ಮೂಲಕ ಈ ಯೋಜನೆಗೆ ಜಾರಿಗೆ ಶ್ರಮಿಸಲು ಮನವಿ.

ನೀವೂ ಮತ್ತು ನಿಮ್ಮ ಕುಟುಂಬ ಈ ದೇಶದಲ್ಲಿ ಬದುಕಬೇಕಾದರೆ ಊರಿಗೊಂದು ಪವಿತ್ರವನ ಅಥವಾ ಬಯೋಡೈವರ್ಸಿಟಿ ವನ ನಿರ್ಮಾಣದ ಅಗತ್ಯ ಇದೆ.

ಉದಾಸೀನ ಬೇಡವೇ ಬೇಡ?