ಎಲ್ಲದರಲ್ಲೂ ನನಗೇನು ಲಾಭ? ಎನ್ನುವ ಜೀವನ.
TUMAKURU:SHAKTHIPEETA FOUNDATION
‘ತಾಳಿದವನು ಬಾಳಿಯಾನು, ಅನುಮಾನ ಪೆದ್ದರೋಗ’
ಯಾವುದೇ ಒಂದು ಪರಿಕಲ್ಪನೆ, ಕನಸು ನನಸಾಗಬೇಕಾದರೆ ಬಹಳಷ್ಟು ಉಳಿಯೇಟು ತಿನ್ನ ಬೇಕಾಗುತ್ತದೆ. ಹಿರಿಯರ ಗಾದೆ ಮಾತಿನಂತೆ ‘ತಾಳಿದವನು ಬಾಳಿಯಾನು’ ಎಂಬ ಮಾತಿನ ಅರ್ಥ ಗೊತ್ತಿರಬೇಕು.
ಯಾವುದೇ ಅನುಮಾನ ಒಂದು ಪೆದ್ದರೋಗ, ಹಾಗಂತ ಇಂದು ಯಾರನ್ನೂ ನಂಬುವ ಹಾಗಿಲ್ಲ. ಯಾರನ್ನೂ ಬಿಡುವ ಹಾಗೇಯೂ ಇಲ್ಲ. ಹುಟ್ಟಿದ ಹುಳುವು ದುಡ್ಡಿಗಾಗಿಯೇ ಬಾಯಿ ಬಿಡುತ್ತದೆ.
ಇದೊಂದು
ನಾಟಕದ ಜೀವನ.
ಅನುಮಾನದ ಜೀವನ.
ಯಾಂತ್ರಿಕ ಜೀವನ.
ಪರಸ್ಪರ ನಂಬಿಕೆ ಇಲ್ಲದ ಜೀವನ.
ಆತ್ಮೀಯತೆ ಇಲ್ಲದ ಜೀವನ.
ವಿಶ್ವಾಸ ವಿಲ್ಲದ ಜೀವನ.
ವಾತ್ಸಲ್ಯವಿಲ್ಲದ ಜೀವನ.
ದ್ವೇಷದ ಜೀವನ.
ಅಸೂಯೇಯ ಜೀವನ.
ದುರಂಹಕಾರದ ಜೀವನ.
ಪ್ರತಿಷ್ಟೆಯ ಜೀವನ.
ಆಡಂಬರದ ಜೀವನ.
ಅರ್ಥವೇ ಇಲ್ಲದ ಜೀವನ.
ಸಮಯ ಸಾಧಕ ಜೀವನ.
ಎಲ್ಲದರಲ್ಲೂ ನನಗೇನು ಲಾಭ? ಎನ್ನುವ ಜೀವನ.
ನಾಲ್ಕು ದಿನದ ಜೀವನಕ್ಕಾಗಿ ಇಷ್ಟೆಲ್ಲಾ ಬೇಕೆ, ಎಂಬ ಚಿಂತನೆ ಆರಂಭವಾಗಿದೆ. ಇವುಗಳ ಮಧ್ಯೆ ಬದುಕಲೇ ಬೇಕಲ್ಲವೇ? ಶಕ್ತಿದೇವತೆಯ ಆಶಯದಂತೆ, ಶಕ್ತಿಪೀಠ ಕ್ಯಾಂಪಸ್ ನಲ್ಲಿ ‘CENTER OF EXCELLENCE- CAPTURING GOI FUNDS’ ಸ್ಥಾಪನೆಯ ಕನಸು, ನನಗೆ ಒಂದು ಹೊಸ ಅನುಭವ ನೀಡುತ್ತಿದೆ.
ಕೇಂದ್ರ ಸರ್ಕಾರದಿಂದ ಅತಿಹೆಚ್ಚು ಅನುದಾನ ಪಡೆದ ರಾಜ್ಯ ಕರ್ನಾಟಕ ರಾಜ್ಯವಾಗಬೇಕು, ಅಭಿವೃದ್ಧಿ ಯಲ್ಲಿ ಸಾಮಾಜಿಕ ನ್ಯಾಯ ಇರಲೇ ಬೇಕು ಎಂಬ ಹುಚ್ಚು ಕನಸಿಗಾಗಿ, ಯಾವುದೇ ಲಾಭದಾಯಕವಲ್ಲದ ಒಂದು ಶಕ್ತಿಪೀಠ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ, ಆರಂಭವಾಗಿರುವ ಕ್ಯಾಂಪಸ್‍ನಲ್ಲಿನ ಅವತಾರಗಳು ನಿಜಕ್ಕೂ ಆರಂಭದಲ್ಲಿಯೇ ‘ನಗುವುದೋ, ಅಳುವುದೋ ನೀವೇ ಹೇಳಿ ಹಾಡು’ ನನೆಪಿಗೆ ತರುತ್ತದೆ.
ಒಂದಂತು ಕಟು ಸತ್ಯ, ಯಾವುದೇ ಪಕ್ಷಕಾತ, ಜಾತೀಯತೆ ಇಲ್ಲದೆ ರಾಜ್ಯದ ಎಲ್ಲಾ ಪಕ್ಷಗಳನ್ನು, ಎಲ್ಲಾ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗುವುದೇ ಒಂದು ತಂತಿಯ ನಡಿಗೆ.
ನನಗೆ ಒಂದು ರೋಗ ಅಂಟಿಕೊಂಡಿದೆ, ಕುಂದರನಹಳ್ಳಿ ರಮೇಶ್ ಎಲ್ಲಾ ಸರಿ, ಆದರೇ ಶ್ರೀ ಜಿ.ಎಸ್.ಬಸವರಾಜ್ ರವರು ಒಬ್ಬರೇ ಅವರ ಕಣ್ಣಿಗೆ ಕಾಣುವುದು ಎಂಬ ಮಾತು ಪದೇ ಪದೇ ಕೇಳಿಬರುತ್ತದೆ.
ಹೌದು ಪ್ರತಿಯೊಬ್ಬರಿಗೂ ಒಂದು ಮನೆ ದೇವರು, ಪ್ರತಿ ಗ್ರಾಮಕ್ಕೂ ಒಂದು ಗ್ರಾಮದೇವತೆ ಇರಲೇ ಬೇಕು. ನಂತರ ಎಲ್ಲಾ ದೇವರ ಮೇಲೂ ಭಕ್ತಿ ಇರುತ್ತದೆ ಅಲ್ಲವೇ? ಈ ಮಾತನ್ನು ನಮ್ಮ ಕೆಲವು ನಾಯಕರು ಅರ್ಥಮಾಡಿಕೊಳ್ಳುವುದಿಲ್ಲ. ಅವರ ಮಾತಿನಲ್ಲಿ ತಪ್ಪು ಇಲ್ಲ ಎಂದು ನನಗೂ ಅನ್ನಿಸುತ್ತಿದೆ. ನನ್ನ ಮತ್ತು ಶ್ರೀ ಜಿ.ಎಸ್.ಬಸವರಾಜ್‍ರವರ ಸುಮಾರು 31 ವರ್ಷಗಳ ಒಡನಾಟವೇ ಹಾಗಿದೆ.
ಆದರೇ ಅಧಿಕಾರಿ ವರ್ಗ ಅರ್ಥ ಮಾಡಿಕೊಂಡಿದೆ. ಜೀವನದ ಗುರಿಯಿಲ್ಲದ ಕನಸಿನ ಯೋಜನೆಗೆ 108 ಶಕ್ತಿದೇವತೆಗಳ ಆಶೀರ್ವಾದವೇ ಒಂದು ಶಕ್ತಿ. ಒಂದು ಪವಾಡ! ನೋಡೋಣ ಎತ್ತ ಸಾಗಲಿದೆ ನನ್ನ ಕನಸಿನ ದೋಣಿ.
ಜೀವನದ ಇಷ್ಟು ವರ್ಷ ಸುಧೀರ್ಘವಾದ ಸಾಮಾಜಿಕ ಜೀವನದಲ್ಲಿ ಯಾವುದೇ ದೇಣಿಗೆ, ಅನುದಾನದ ಹಿಂದೆ ಬೀಳದೆ, ಇದ್ದ ನನಗೆ ಈಗ ಕ್ಯಾಂಪಸ್‍ಗಾಗಿ ಎತ್ತುವ ‘ಬಿಕ್ಷೆ’ ಒಂದು ಸ್ವಾಭಿಮಾನವಿಲ್ಲದ ಜೀವನವೇನೋ ಎನ್ನಿಸಲು ಆರಂಭಿಸಿದೆ. ಇದೆಲ್ಲಾ ಬೇಕಾ ಎನ್ನಿಸುತ್ತಿದೆ. ಆದರೂ ಮುನ್ನುಗ್ಗಲೇ ಬೇಕಲ್ಲವೇ?