12th September 2024
Share

TUMAKURU:SHAKTHIPEETA FOUNDATION

ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ ಸಾಂವಿಧಾನಕವಲ್ಲವಂತೆ. ಅದು ರೂಡಿಯಲ್ಲಿರುವ ಹುದ್ದೆ. ಜಿಲ್ಲೆಗಳಿಗೆ ನೇಮಿಸುವ ಅಧಿಕಾರ ಮಾನ್ಯ ಮುಖ್ಯ ಮಂತ್ರಿಯವರದ್ದು. ಕೇಂದ್ರ ಬಿಜೆಪಿ ಆಯಾ ಜಿಲ್ಲೆಯವರನ್ನು ಆಯಾ ಜಿಲ್ಲೆಗೆ ಉಸ್ತುವಾರಿ ಮಾಡುವುದು ಬೇಡ ಎಂಬ ನಿರ್ಣಯ ಮಾಡಿದೆಯಂತೆ ಇದು ಸರ್ಕಾರದ ನಿಯಮವಲ್ಲ ಪಕ್ಷದ ನಿಯಮ. ಪಕ್ಷದ ಆಂತರೀಕ ವಿಚಾರ ನಮಗೆ ಸಂಬಂಧಿಸಿಲ್ಲ.

ಹೊಸದಾಗಿ ತುಮಕೂರು ಜಿಲ್ಲೆಗೆ ಉಸ್ತುವಾರಿ ಸಚಿರಾಗಿರುವ ಶ್ರೀ ಅರಗಜ್ಞಾನೇಂದ್ರ ರವರು ಮಾಧ್ಯಮದಲ್ಲಿ ನೀಡಿರುವ ‘ಸಚಿವರೇನು ಪ್ರೈಮರಿ ಸ್ಕೂಲ್ ಮೇಸ್ಟ್ರಾ?’ ಹೇಳಿಕೆ ಗಮನಿಸಿದೆ.

ಹೌದು ಅವರು ಆರ್.ಎಸ್.ಎಸ್ ನಲ್ಲಿ ಪಳಗಿದವರಂತೆ, ಏನಾದರೂ ವಿಶೇಷತೆ ಮಾಡುವ ಛಲವಿರಬಹುದು. ಉಳಿದಿರುವ ಅವಧಿಯಲ್ಲಿ ಒಂದೊಂದು ದಿವಸವೂ ಮುಖ್ಯ. ತುಮಕೂರು ಜಿಲ್ಲೆಗೆ ಅವರ ಕೊಡುಗೆ ಬಗ್ಗೆ ಅವಲೋಕನ ಮಾಡುವುದು ಜಿಲ್ಲೆಯ ಜನರ ಕರ್ತವ್ಯ.

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಬಿಜೆಪಿಯ ಘೋಷಣೆ. ಆದರೇ ನನಗೆ ಹೇಳಲು ನಾಚಿಕೆಯಾಗುತ್ತಿದೆ.ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಯೋಜನಾ ಸಮಿತಿ ಸಭೆಗಳೇ ರಾಜ್ಯಾಧ್ಯಾಂತ ನಡೆದಿರುವುದು ವಿರಳ.

ತುಮಕೂರು ಜಿಲ್ಲೆ ಗಮನಿಸಿದಾಗ ಶ್ರೀ ಟಿ.ಬಿ.ಜಯಚಂದ್ರರವರು ಒಂದು ಸಭೆ ಮತ್ತು ಶ್ರೀ ಜೆ.ಸಿ.ಮಾಧುಸ್ವಾಮಿರವರು ಒಂದು ಸಭೆ ಮಾಡಿದ್ದಾರೆ. ಈ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ.

ತಾವಾದರೂ ಈ ಸಭೆಗಳನ್ನು ನಡೆಸಿ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಇರುವ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಮತ್ತು ಇತರ ಇಲಾಖಾವಾರು ವರದಿಗಳ ಸಲಹೆಗಳಿಗೆ ಅಗತ್ಯವಾಗಿ ಯೋಜನೆ ರೂಪಿಸುವಿರಾ?

ಏಕೆಂದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌಲ್ಯಮಾಪನ ಮಾಡಲು ಈಗ ಆರಂಭಿಸಿದೆ. ತುಮಕೂರಿನ ಶಕ್ತಿಪೀಠ ಫೌಂಡೇಷನ್ ವಿಶೇಷ ಆಸಕ್ತಿ ವಹಿಸಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆ ಮಾದರಿ ಮಾಡುವ ಆಲೋಚನೆ ನಮ್ಮ ಸಂಸ್ಥೆಯದ್ದಾಗಿದೆ.

ಪ್ರೈಮರಿ ಸ್ಕೂಲ್ ಮಾಸ್ಟ್ರು ಅಲ್ಲದವರು ಏನು ಮಾಡುತ್ತಾರೆ ಕಾದು ನೋಡೋಣ? ಇದು ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಬೇಕಾದ ವಿಚಾರ.