9th October 2024
Share

TUMAKURU:SHAKTHIPEETA FOUNDATION

ನನಗೆ ತುಮಕೂರು ನಗರದ ಉಧ್ಯಾನವನಗಳ ಹುಚ್ಚು ಹತ್ತಿಸಿದ್ದು, 2000 ನೇ ಇಸವಿಯಲ್ಲಿ ಮಾರುತಿ ನಗರದ ದಿ.ಪ್ರಹ್ಲಾದ್ ರಾವ್‍ರವರು. ನಂತರ ಉಧ್ಯಾನವನಗಳ ಕಾನೂನು ಪಾಠ ಮಾಡಿದ್ದು ಡಾ.ಎಂ.ಎಸ್.ರುದ್ರÀಮೂರ್ತಿರವರು.

ಉಧ್ಯಾನವನಗಳ ಸಮೀಕ್ಷೆಗೆ ಚಾಲನೇ ನೀಡಿದ್ದು, ನಂತರÀ ಜಿಲ್ಲಾಧಿಕಾರಿಯವರಾಗಿದ್ದ ಶ್ರೀ ಎಸ್.ಉಮಾಶಂಕರ್‍ರವರು, ಉಧ್ಯಾನವನಗಳ ಸಮೀಕ್ಷೆ ಮಾಡಿದ್ದು ಶ್ರೀ ಶಿವಶಂಕರ್‍ರವರು, ಉಧ್ಯಾನವನಗಳ ಪಟ್ಟಿ ಘೋಷಣೆ ಮಾಡಿದ್ದು ಆಗಿನ ಆಯುಕ್ತರಾಗಿದ್ದ ಶ್ರೀ ಆದರ್ಶಕುಮಾರ್ ರವರು.

ನಾನು 2000 ರಿಂದಲೂ ಉಧ್ಯಾನವನಗಳ ಹುಡುಕಾಟಕ್ಕೆ ಶ್ರಮಿಸುತ್ತಿದ್ದರೂ, ಅಂದಿನಿಂದಲೂ ಶ್ರೀ ಜಿ.ಎಸ್.ಬಸವರಾಜ್ ರವರು ಸಹಕಾರ ನೀಡುತ್ತಿದ್ದರೂ, ಈಗ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹಕಾರ ನೀಡುತ್ತಿದ್ದರೂ, ನಗರದಲ್ಲಿರುವ ಸುಮಾರು 939 ಉಧ್ಯಾನವನಗಳ ಹುಡುಕಾಟ ಪೂರ್ಣಗೊಳಿಸಲು ಆಗಿಲ್ಲ. ಆದರೇ 939 ಇವೆ ಎಂದು ಹೇಳುವ ಹಂತಕ್ಕೆ ಬರಲಾಗಿದೆ.

ವಿಶ್ವ ಪರಿಸರ ದಿನದ ಗಡುವು ನೀಡಿ, ಅಂದು ಎಲ್ಲಾ ಉಧ್ಯಾನವನಗಳ ಅಂತಿಮ ಘೋಷಣೆ ಮಾಡಿದರೆ ಶ್ರಮಿಸಿದ ಅಧಿಕಾರಿಗಳಿಗೆ ಸನ್ಮಾನ, ಘೋಷಣೆ  ಮಾಡದಿದ್ದರೆ ಅಪಮಾನ ಮಾಡಿ, ಧರಣೆ ಕೂರುವುದಾಗಿ ಘೋಷಣೆ ಮಾಡಿದ್ದೆ.

ಗಡುವಿನೊಳಗೆ ಅಂತಿಮವಾಗಿ ಉಧ್ಯಾನವನಗಳ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಲು, ಯಾವುದೇ ಅಧಿಕಾರಿಗಳಿಗೆ ಸಾಧ್ಯಾವಾಗಲಿಲ್ಲ. ಧರಣಿ ಕೂರುವುದಕ್ಕಿಂತ, ನಾನೇ ಮುಂದೆ ನಿಂತು ಜಿಐಎಸ್ ಲೇಯರ್ ಮಾಡಿಸಲು ಶ್ರಮಿಸೋಣ ಎಂಬ ಅಲೋಚನೆ ಬಂತು.

ಈಗ ಹಾವೇರಿ ಜಿಲ್ಲೆಯ, ರಾಣಿಬೆನ್ನೂರಿನ ಜಿ.ಐ.ಎಸ್.ತಜ್ಞ ಶ್ರೀ ಬಸವರಾಜ್ ಸುರಣಗಿಯವರು, ತುಮಕೂರು ನಗರದ ಕೆರೆ-ಕಟ್ಟೆಗಳ ಮತ್ತು ಉಧ್ಯಾನವನಗಳ ವೆಬ್ ಆಫ್ ಮಾಡಿ, ಜಿಐಎಸ್ ಲೇಯರ್ ಮಾಡುವುದಾಗಿ ಮುಂದೆ ಬಂದಿದ್ದಾರೆ. ಅವರಿಗೆ ತುಮಕೂರಿನವರೇ ಆದ ಶ್ರೀ ಸತ್ಯಾನಂದ್ ರವರು, ಶ್ರೀ ಶಶಿರವರು ಸಹಕಾರ ನೀಡುವುದಾಗಿ ಹೇಳುತ್ತಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಕೋಟಿಗಟ್ಟಲೇ ಜಿಐಎಸ್ ಲೇಯರ್ ಮಾಡಲು ಹಣ ಖರ್ಚಾದರೂ ಅವರಿಗೂ ಸಾಧ್ಯಾವಾಗಿಲ್ಲ. ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುತ್ತಿರುವ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದವರಿಗೂ ಸಾಧ್ಯಾವಾಗಿಲ್ಲ. 471 ಉಧ್ಯಾನವನಗಳ ಜಿಐಎಸ್ ಲೇಯರ್ ಅನ್ನು ತುಮಕೂರು ಮಹಾನಗರ ಪಾಲಿಕೆ ಮಾಡಿದೆ ಎಂದು ಹೇಳುತ್ತಿದೆ. ಮೌಲ್ಯಮಾಪನ ಮಾಡಿದ ನಂತರವೇ ಸತ್ಯಾಂಶ ಹೊರಬೀಳಲಿದೆ. ಆದರೂ ಮೆಚ್ಚುವಂತ ಕೆಲಸ ಎಂಬ ಅನಿಸಿಕೆ ನನ್ನದಾಗಿದೆ.

ಸಂಸದರು ಮತ್ತು ಶಾಸಕರು ಮುಂದಿನ ಒಂದು ತಿಂಗಳಲ್ಲಿ ಘೋಷಣೆ ಮಾಡಲು ಸಲಹೆ ನೀಡಿದ್ದಾರೆ. ಪಲಿತಾಂಶ ಕಾದು ನೋಡೋಣ?

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಮತಿ ರೇಣುಕರವರು ಪಾಲಿಕೆ ಇಂಜಿನಿಯರ್ ಶ್ರೀಮತಿ ವನಿತರವರು, ಹಿಂದೆ ಸಮೀಕ್ಷೆ ಮಾಡಿದ್ದ ಶ್ರೀ ಶಿವಶಂಕರ್ ಸಹಕಾರದೊಂದಿಗೆ, ಜಿಐಎಸ್ ಲೇಯರ್ ಮಾಡಲು ಸಹಕಾರ ನೀಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ಉಧ್ಯಾನವನಗಳ ಉಳಿದ ಜಾಗದಲ್ಲಿ ಗಿಡಹಾಕುವ ಕೆಲಸವನ್ನು ಇಲಾಖೆ ಮಾಡಬೇಕು. ನಿರ್ವಹಣೆ ಮಾಡಲು ಅಕ್ಕ-ಪಕ್ಕದ ನಾಗರೀಕರು ಅಥವಾ ಸಂಘಸಂಸ್ಥೆಗಳು ಮುಂದೆ ಬರಬೇಕು. ಈ ಆಂದೋಲನಕ್ಕೆ ಶೀಘ್ರದಲ್ಲಿ ಚಾಲನೇ ನೀಡಲಾಗುವುದು.