27th July 2024
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಂದು ಲಕ್ಷ ಗಿಡ ಹಾಕಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಘೋಷಣೆ ಮಾಡಿದರು.

ಗಿಡ ಹಾಕಲು ಸರ್ಕಾರದ ಹಂತದಲ್ಲಿ ಅಂದರೆ ಸಂಸದರ ಅನುದಾನ, ಪಾಲಿಕೆ, ಟೂಡಾ, ಸ್ಮಾರ್ಟ್ ಸಿಟಿ, ಗಣಿ ಹಣ, ಕೆಐಡಿಬಿ ಹಣ ಇತ್ಯಾದಿ ಯಾವುದು ಇಲಾಖೆಯ ಹಣ ಮಂಜೂರು ಮಾಡಿಸುವ ಹೊಣೆಗಾರಿಕೆ ನನ್ನದು.

ಪ್ರತಿಯೊಂದು ಗಿಡಕ್ಕೂ, ಪ್ರತಿಯೊಂದು ಉಧ್ಯಾನವನಕ್ಕೂ, ಪ್ರತಿಯೊಂದು ಕೆರೆ-ಕಟ್ಟೆ- ಜಲಸಂಗ್ರಹ ಗಾರದ ಸುತ್ತ ಹಾಕುವ ಗಿಡಕ್ಕೂ, ಜಿಯೋ ಟ್ಯಾಗಿಂಗ್ ಮಾಡುವ ಮೂಲಕ ಐಸಿಸಿಸಿಯಲ್ಲಿ ಪ್ರತಿಯೊಂದು ಗಿಡದ ನಕ್ಷೆ ಸಹಿತಿ, ಪ್ರಗತಿ ಪರಿಶೀಲನೆ ಮಾಡುವಂತಿರಬೇಕು ಎಂಬ ಖಡಕ್ ಸೂಚನೆ ನೀಡಿದರು.

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿ ಪೀಠ ಫೌಂಡೇಷನ್‍ನ ಕುಂದರನಹಳ್ಳಿ ರಮೇಶ್, ಬೇವಿನ ಮರದ ಸಿದ್ದಪ್ಪ, ಲೈವ್ ಗ್ರೀನ್ ಸಂಸ್ಥೆಯ ಶ್ರೀ ಪ್ರಮೋದ್, ಶ್ರೀ ಸತ್ಯಾನಂದ್, ಶ್ರೀ ಬಸವರಾಜ್ ಸುರಣಗಿ, ಶ್ರೀ ಶಶಿವರುಗಳಿಗೆ ಯಾವ ರೀತಿ ಪಿಪಿಪಿ ಮೂಲಕ ಮಾಡಬಹುದು ಎಂಬ ಬಗ್ಗೆ ವರದಿ ನೀಡಲು ಸಂಸದರು ಸೂಚಿಸಿದರು.

ತುಮಕೂರಿನ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಷಣ್ಮುಖಪ್ಪನವರು, ಡಾ.ಸದಾಶಿವಯ್ಯನವರು ಹಾಜರಿದ್ದು ನಮ್ಮ ಕಾಲೇಜಿಗೆ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ವಿಶೇಷ ಕಾಳಜಿ ವಹಿಸಿ ಮೂಲಭೂತ ಸೌಕರ್ಯ ಒದಗಿಸಿದ್ದಾರೆ, ಇಡಿ ನಗರದ ಎಲ್ಲಾ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳ ಸಹಕಾರದಿಂದ ಗಿಡಗಳು ಬದುಕಿರುವ ಬಗ್ಗೆ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡುವ ನೋಡೆಲ್ ಶಾಲೆಯಾಗಿ ನಾವು ಶ್ರಮಿಸುತ್ತೇವೆ ಎಂದು ಸಂಸದರಿಗೆ ವಿವರಿಸಿದರು.

ಟೂಡಾ ಅಧ್ಯಕ್ಷರಾದ ಶ್ರೀ ಬಾವಿಕಟ್ಟೆ ನಾಗೇಶ್ ರವರು ನಮ್ಮ ಟೂಡಾ ವತಿಯಿಂದ ಪ್ರತಿ ವರ್ಷ ರೂ 30 ಲಕ್ಷ ಹಣ ನೀಡುತ್ತೇವೆ, ಈ ವರ್ಷ ನರ್ಸರಿ ಮಾಡಲು ಮತ್ತು ಗಿಡ ಸಂಗ್ರಹ ಮಾಡಲು ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸುತ್ತೇವೆ, ನರ್ಸರಿಗೆ ಓಡಾಡಲು ರಸ್ತೆ ಮಾಡಿ ಕೊಡುತ್ತೇವೆ, ಹಸಿರು –ತುಮಕೂರು ಗ್ರಂಥಾಲಯಕ್ಕೆ ಇಲ್ಲಿ ಇರುವ ಕಟ್ಟಡ ನೀಡುತ್ತೇವೆ, ಕಟ್ಟಡಕ್ಕೆ ಹಸಿರು ಬಣ್ಣ ಒಡೆಸುತ್ತೇವೆ, ಒಂದು ಮೈಕ್ ಸೆಟ್ ಸಹ ಹಾಕಿಸಿ ಕೊಡುತ್ತೇವೆ ಎಂದು ತಿಳಿಸಿದರು. ಟೂಡಾ ಆಯುಕ್ತರಾದ ಶ್ರೀ ಯೋಗಾನಂದ್ ರವರು ಮತ್ತು ಎಇಇ ಶ್ರೀ ಬಡಪ್ಪನವರು ಸಹಮತ ವ್ಯಕ್ತ ಪಡಿಸಿದರು.

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರು ಮಾತನಾಡಿ ಪಾಲಿಕೆಯಿಂದಲೂ ಪ್ರತಿ ವರ್ಷ ರೂ 30 ಲಕ್ಷ ಹಣ ನೀಡುತ್ತೇವೆ. ಉಧ್ಯಾನವನಗಳ ಜಿಯೋ ಫೆನ್ಸ್ ಮಾಡಲು ಸಮೀಕ್ಷೆ ಮಾಡಿಸುತ್ತೇವೆ. ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಈಗಾಗಲೇ ಬಿಎಂಸಿ ಸಮಿತಿಯಲ್ಲಿ ನಿರ್ಣಯಗಳನ್ನು ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲಿಯೂ ಚರ್ಚಿಸುತ್ತೇವೆ. ಜಿಲ್ಲಾಧಿಕಾರಿಗಳಿಗೂ ಈಗಾಗಲೇ ಪತ್ರ ಬರೆಯಲಾಗಿದೆ.

ನಗರಾಭಿವೃದ್ಧಿ ಕಾರ್ಯದರ್ಶಿಯವರಾದ ಶ್ರೀ ಅಜಯ್ ನಾಗಭೂಷಣ್ ರವರು ಈಗಾಗಲೇ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರಿಗೆ ತಿಳಿಸಿದ ಹಿನ್ನಲೆಯಲ್ಲಿ, ನನಗೆ ಸೂಚನೆ ನೀಡಿದ್ದಾರೆ. ತುಮಕೂರಿನ ಸಂಘ ಸಂಸ್ಥೆಗಳು, ಶಾಸಕರು, ಸಂಸದರು ಸಲಹೆ ಮೇರೆಗೆ ಪಕ್ಕಾ ಕೆಲಸ ಮಾಡಲು ಮೇಯರ್ ಹಾಗೂ ಪಾಲಿಕೆ ಸದಸ್ಯರು ಬೆಂಬಲ ನೀಡುತ್ತೇವೆ ಎಂದರು.

ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಮತ್ತು ಶಕ್ತಿಪೀಠ ಫೌಂಡೇಷನ್ ಮಾಡುವ ಮೌಲ್ಯ ಮಾಪನ ವರದಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ ಎಂದರು.

ಕುಂದರನಹಳ್ಳಿ ರಮೇಶ್ ಎಲ್ಲರ ಸಹಕಾರದಿಂದ, ಸಂಸದರ ಆಸೆಯಂತೆ ಒಂದು ಲಕ್ಷ ಗಿಡ ಹಾಕಲು ನೀಲಿ ನಕ್ಷೆ ಸಿದ್ಧಪಡಿಸಿ, ಶಾಸಕರ ಸೂಚನೆಯಂತೆ 939 ಉಧ್ಯಾನವನಗಳ ನಿರ್ವಹಣೆಗೆ ವಿವಿಧ ಸಮಿತಿ, ಕುಟುಂಬ, ವ್ಯಕ್ತಿಗಳನ್ನು ಪಟ್ಟಿ ಮಾಡಿ, ಮಾನ್ಯ ಮುಖ್ಯ ಮಂತ್ರಿಯವರನ್ನು ಆಹ್ವಾನಿಸಿ, ದೇಶಕ್ಕೆ ಮಾದರಿ ಕೆಲಸ ಮಾಡಲು ಶಕ್ತಿಪೀಠ ಫೌಂಡೇಷನ್ ಶ್ರಮಿಸಲಿದೆ ಎಂದು ತಿಳಿಸಿದರು.

ತುಮಕೂರು ಅಮಾನಿಕೆಯಲ್ಲಿ ನರ್ಸರಿ ಮಾಡುವ ಸ್ಥಳ ಪರಿಶೀಲನೆ ಮಾಡಿದ ಸಂಸದರ ನೇತೃತ್ವದ ತಂಡ, ಒಂದು ಅರಳಿ ಮರ ಮತ್ತು ಬೇವಿನ ಗಿಡ’ ಹಾಕಿ, ಈ ಗಿಡಗಳ ಜೋಡಣೆಗೆ ಕಟ್ಟೆ ಕಟ್ಟುವ ವೇಳೆಗೆ, ಒಂದು ಲಕ್ಷ ಗಿಡ ಹಾಕಿಸಿ ಬೆಳೆಸುವುದು ಮತ್ತು ರಾಜ್ಯದ್ಯಾಂತÀ ಊರಿಗೊಂದು ಕೆರೆ ಕೆರೆಗೆ ನದಿ ನೀರು ಘೋಷಣೆಯ 224 ವಿಧಾನ ಸಭಾ ಕ್ಷೇತ್ರಗಳ ಮೌಲ್ಯ ಮಾಪನ ವರದಿಯಂತೆ, ನದಿ ನೀರಿನ ಯೋಜನೆ ರೂಪಿಸಲು ನಿರಂತರವಾಗಿ ಶ್ರಮಿಸಲು ಕುಂದರನಹಳ್ಳಿ ರಮೇಶ್ ಗೆ ಸಲಹೆ ನೀಡಲಾಗಿದೆ ಎಂದು ಸಂಸದರು ತಿಳಿಸಿದರು.