27th July 2024
Share

TUMAKURU:SHAKTHI PEEATA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ಮಾಜಿ ಪ್ರಧಾನ ಮಂತ್ರಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರು ‘ಡಿಜಿಟಲ್ ಡಾಟಾ ಜನಕರು ಹಾಗೂ  ಮಾಜಿ ಪ್ರಧಾನಿಯ ವರಾದ ಶ್ರೀ ಹಚ್.ಡಿ.ದೇವೇಗೌಡರವರು ‘ಜಲಭಕ್ತರು ಎನ್ನುತ್ತಾರೆ.

ಈ ಮೂರು ಜನರ ಪಕ್ಷದ 11 ಶಾಸಕರು ತುಮಕೂರು ಜಿಲ್ಲೆಯಲ್ಲಿದ್ದಾರೆ.ಟೇಬಲ್ ನಲ್ಲಿ ಅವರ ಕ್ಷೇತ್ರ ಮತ್ತು ಹೆಸರು, ಪಕ್ಷಗಳನ್ನು ಹಾಕಲಾಗಿದೆ. ಅವರೆಲ್ಲರೂ ಅವರ ಮತದಾರರಿಗೆ ತಿಳಿಸಬೇಕಾಗಿರುವ ಅಂಶಗಳನ್ನು ಹಾಕಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರವಾರು ಎಷ್ಟು ಕೆರೆಗಳು ಇವೆ, ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ತುಂಗಾಭಧ್ರಾ ನದಿ ನೀರಿನಿಂದ ನಿಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಎಷ್ಟು ನದಿ ನೀರು ಅಲೋಕೇಷನ್ ಆಗಿದೆ. ಎಷ್ಟು ನೀರನ್ನು, ಎಷ್ಟು ಕೆರೆಗಳಿಗೆ ತುಂಬಿಸುತ್ತಿದ್ದೀರಿ. ಅಲೋಕೇಷನ್ ಆಗಿರುವ ನೀರಿನಲ್ಲಿ ಬಳಸದೇ ಇರುವ ನೀರು ಎಷ್ಟು? ನಿಮ್ಮ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಲು ಇನ್ನೂ ಅಗತ್ಯವಿರುವ ನದಿ ನೀರಿನ ಪ್ರಮಾಣ ಎಷ್ಟು ಉತ್ತರಿಸಲು ಸಾಧ್ಯಾವೇ?

ಪ್ರಧಾನಿಯವರು ಕೋಟಿಗಟ್ಟಲೇ ಕೆರೆಗಳ ಡಿಜಿಟಲ್ ಲೆಕ್ಕ ಮಾಡಲು ಹಣ ವ್ಯಯಿಸಿದ್ದಾರೆ. ನಿಮ್ಮ ವಿಧಾನಸಭಾ ಕ್ಷೇತ್ರವಾರು ಎಷ್ಟು ಕೆರೆಗಳು ಇವೆ ಎಂಬ ಪಟ್ಟಿ ನೀಡಲಾಗಿದೆ. ಇದರಲ್ಲಿ ಯಾವುದು ಸತ್ಯ ಎಂದು ತಿಳಿಯಬೇಕಾದರೇ ಪ್ರತಿ ಜಲಸಂಗ್ರಹಗಾರಗಳವಾರು ಕೋಆರ್ಡಿನೇಟ್ಸ್ ಸಹಿತ ಮಾಹಿತಿಯನ್ನು ಜನರಿಗೆ ನೀಡಲು ಸಾಧ್ಯಾವೇ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಕ್ತ ಡಾಟಾ ಪಾಲಿಸಿ ಜಾರಿಗೊಳಿಸಿವೆ. ಈ ಮಾಹಿತಿ ನೀಡಿ ಎಂದೇ ಹಲವಾರು ಯೋಜನೆಗಳು ಜಾರಿಯಾಗಿವೆ. 75 ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲೂ ಪಕ್ಕಾ ಡಾಟಾ ನೀಡಲು ಸಾಧ್ಯಾವಿಲ್ಲ ಎಂದರೆ ಇದಕ್ಕಿಂತ ನಾಚಿಕೆ ಗೇಡು ಇನ್ನೇನಿದೆ.

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಅವರ ಇಲಾಖೆಯಡಿ ಟೇಬಲ್ ನಲ್ಲಿ ಹಾಕಿರುವ ಹಾಗೇ ಸುಮಾರು 1250 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸುತ್ತಿದ್ದಾರೆ.  ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇದರ ಜೊತೆಗೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳವಾರು ಎಲ್ಲಾ ಕೆರೆಗಳಿಗೂ ನದಿ ನೀರು ತುಂಬಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅಗತ್ಯವಿರುವ ಅನುದಾನ ಮತ್ತು ಇನ್ನೂ ಅಗತ್ಯವಿರುವ ನದಿ ನೀರಿನ ಯೋಜನೆಗೂ ಕೇಂದ್ರ ಸರ್ಕಾರದ ಅನುದಾನ ಕೇಳೋಣ, ಮಂಜೂರು ಮಾಡುವುದು ಬಿಡುವುದು ಬೇರೆ ವಿಚಾರ ಪ್ರಯತ್ನ ಮಾಡೋಣ ಎಂದು ಪಟ್ಟು ಹಿಡಿದಿದ್ದಾರೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಊರಿಗೊಂದು ಕೆರೆ- ಆ ಕೆರೆ ಯೋಜನೆಗೆ ಪೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆ ಆಯ್ಕೆ ಮಾಡಿ, ನಂತರ ರಾಜ್ಯದ ಎಲ್ಲಾ ಭಾಗಕ್ಕೂ ವಿಸ್ತರಣೆ ಮಾಡಲು, ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ.

ಆದರೇ ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವ ಧಾತರು ಯಾರು ಸ್ವಾಮಿ. ಎಲ್ಲಾ ಡಾಟಾ ಬೋಗಸ್, ಪಕ್ಕಾ ಡಾಟಾವನ್ನು ನೀಡುವರು ಯಾರು. ಕಡೇ ಪಕ್ಷ ತುಮಕೂರು ಜಿಲ್ಲೆಯ 11 ಶಾಸಕರು ತಮ್ಮ ತಮ್ಮ ಕ್ಷೇತ್ರದ ಕೆರೆಗಳ ಮಾಹಿತಿಯನ್ನು ಪಕ್ಕಾ ಮಾಡಿದ್ದಾರೆ ಎಂದು ಘೋಷಣೆ ಮಾಡಲು ಸಾಧ್ಯವೇ?

ನಾನು ಕಳೆದ 2019 ರಿಂದ ತುಮಕೂರು ಜಿಲ್ಲೆಯ ದಿಶಾ ಸಮಿತಿ ಸದಸ್ಯನಾಗಿ, ರಾಜ್ಯ ದಿಶಾ ಸಮಿತಿಯ ಸದಸ್ಯನಾಗಿ, ಎಷ್ಟು ಶ್ರಮಿಸಿದರು ಪಕ್ಕಾ ಡಾಟಾ ಪಡೆಯಲು ಸಾಧ್ಯಾವಿಲ್ಲ. ಈ ಲೆಕ್ಕ ಸಿಗುವವರೆಗೂ ಸುಮ್ಮನೆ ಇರಲು ಸಾಧ್ಯವಿಲ್ಲ.

ಇದು ಡಿಜಿಟಲ್ ಯುಗ ಸ್ವಾಮಿ, 11 ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತಶಾಖೆ ಅಥವಾ ಅಭಿಮಾನಿಗಳಾದರೂ, ಈ ಟೇಬಲ್‍ನಲ್ಲಿರುವ ಮಾಹಿತಿ ನೀಡಲು ಶ್ರಮಿಸುವರಾ?

ಕೆರೆಗಳ ಮಾಲೀಕ ಇಲಾಖೆಗಳು ಕರಾರುವಕ್ಕಾದ ಮಾಹಿತಿ ನೀಡಲು ವಿಫಲವಾಗಿವೆ. ಸುಮಾರು 10 ಕ್ಕೂ ಹೆಚ್ಚು ದಿಶಾ ಸಮಿತಿಯಲ್ಲಿ ಚರ್ಚೆ ಮಾಡಿದರು, ಅಧಿಕಾರಿಗಳು ಮಾಹಿತಿ ನೀಡಿಲ್ಲ. ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಜಿಲ್ಲಾಪಂಚಾಯತ್ ಸಿ.ಇ.ಓ ರವರು ಏಕೋ ಮೌನವಾಗಿರುವ ಹಾಗೆ ಇದೆ.

ಅನುಪಾಲನಾ ವರದಿಯ ಬಗ್ಗೆ ಶ್ರಮಿಸಬೇಕಾದವರು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿರವರು.  30 ದಿನಗಳ ಒಳಗೆ ಕ್ರಮ ಕೈಗೊಳ್ಳಿ ಎಂದು ಮೋದಿಯವರು ಹೇಳುತ್ತಾರೆ. ಇಲ್ಲಿ ಮೋದಿಯವರಿಗೆ ಟೋಪಿ ಹಾಕುತ್ತಿದ್ದಾರೆ.

ಊರಿಗೊಂದು ಕೆರೆ ಕೆರೆಗೆ ನದಿ ನೀರು ಮತ್ತು ಜಲಶಕ್ತಿ ಸಚಿವಾಲಯದ ವಿವಿಧ ಯೋಜನೆಗಳ ಬಗ್ಗೆ, ತುಮಕೂರು ಜಿಲ್ಲೆಯಲ್ಲಿ ನಿರ್ಣಯ ಮಾಡಿರುವ ದಿಶಾ ಸಮಿತಿಯ ಅನುಪಾಲನಾ ವರದಿ ನೀಡಿ ಎಂದು ಧರಣೆ ಮಾಡುವ ಕಾಲ ದೂರವಿಲ್ಲ.