12th September 2024
Share

TUMAKURU:SHAKTHIPEETA FOUNDATION

27.06.2022 CNNL MD OFFICE MEETING

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಶಕ್ತಿಪೀಠ ಫೌಂಡೇಷನ್, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದ ಬಗ್ಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೌಲ್ಯಮಾಪನ ಮಾಡುತ್ತಿದೆ. ಫೈಲಟ್ ಯೋಜನೆಯಾಗಿ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮೌಲ್ಯ ಮಾಪನ ಅಂತಿಮ ಹಂತಕ್ಕೆ ಬಂದಿದೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಕ್ತ ಡಾಟಾ ಪಾಲಿಸಿ ಜಾರಿಗೊಳಿಸಿದ್ದರೂ, ಮಾಹಿತಿಗಾಗಿ ಕಛೇರಿ, ಕಛೇರಿ ಅಲೆಯುವ ಮಟ್ಟಕ್ಕೆ ಬಂದಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ನಾನೊಬ್ಬ ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯನಾಗಿ, ರಾಜ್ಯ ಸರ್ಕಾರದಿಂದ ಕರಾರುವಕ್ಕಾದ ಮಾಹಿತಿ ಇಲ್ಲದೆ, ರಾಜ್ಯದ ಪರವಾಗಿ ಹೇಗೆ ವಿಷಯ ಮಂಡಿಸಲಿ ಎಂಬ ಕಟು ಸತ್ಯ ತಿಳಿಸಿದರು.

ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆ ಮತ್ತು ಮೌಲ್ಯಮಾಪನ ಸಿದ್ಧಪಡಿಸುತ್ತಿರುವ ಶಕ್ತಿಪೀಠ ಫೌಂಡೇಷನ್ ಗೆ, ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ, ತುಮಕೂರು ಜಿಲ್ಲೆಯ ನಿಖರವಾದ ಡಿಜಿಟಲ್ ಡಾಟಾ ನೀಡಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಂಕರೇಗೌಡರವರು, ತುಮಕೂರು ನಾಲಾ ವಲಯದ ಇಂಜಿನಿಯರ್  ಗಳಿಗೆ ಸೂಚಿಸಿದರು.

  1. ಹೇಮಾವತಿ ವ್ಯಾಪ್ತಿಯಲ್ಲಿ ಕೆರೆಗಳಿಗೆ ನದಿ ನೀರು ತುಂಬುತ್ತಿರುವ ಡಿಜಿಟಲ್ ಮಾಹಿತಿ.
  2. ಹೇಮಾವತಿ ವ್ಯಾಪ್ತಿಯಲ್ಲಿ ಕೆರೆಗಳಿಗೆ ನದಿ ನೀರು ತುಂಬ ಬೇಕಾಗಿರುವ ಕೆರೆಗಳÀ ಮಾಹಿತಿ.
  3. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಹುಟ್ಟುತ್ತಿರುವ ತಲಪುರಿಕೆಗಳ ಇತಿಹಾಸ ಸಹಿತ ಜಿಐಎಸ್ ಲೇಯರ್.
  4. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಹುಟ್ಟುತ್ತಿರುವ ನದಿಗಳ ಇತಿಹಾಸ ಸಹಿತ ಜಿಐಎಸ್ ಲೇಯರ್.
  5. ಹೇಮಾವತಿ ನಾಲಾ ವಲಯದ ಅಕ್ಕ-ಪಕ್ಕ ಇರುವ ನಿಗಮದ ಜಮೀನುಗಳ ಇತಿಹಾಸ ಸಹಿತ ಜಿಐಎಸ್ ಲೇಯರ್ ಮತ್ತು ಉಳಿಕೆ ಜಮೀನುಗಳ ಬಳಕೆ ವಿವರ.
  6. ಹೇಮಾವತಿ ನಾಲಾವಲಯದ ವ್ಯಾಪ್ತಿಯಲ್ಲಿ ಹರಿ ನೀರಾವರಿಯಿಂದ, ಮೈಕ್ರೋ ಇರ್ರಿಗೇಷನ್ ಪದ್ಧತಿ ಅಳವಡಿಸುವ ಕಡತದ ಮಾಹಿತಿ.
  7. ಹೇಮಾವತಿ ಮೂಲ ಯೋಜನೆ ಅಲೋಕೇಷನ್, ಆಗಿದಾಂಗ್ಗೆ ಬದಲಾವಣೆ ಆಗಿರುವ ಅಲೋಕೇಷನ್ ಆದೇಶಗಳು.
  8. ಕೇಂದ್ರ ಸರ್ಕಾರ ತುಮಕೂರು ನಾಲಾವಲಯಕ್ಕೆ ನೀರಿನ ಕೊರತೆ ನೀಗಿಸಲು ನೇತ್ರಾವತಿ- ಹೇಮಾವತಿ ನದಿ ಜೋಡಣೆ ಪ್ರಸ್ತಾಪದ ಮಾಹಿತಿ.
  9. ರಾಜ್ಯದ ನದಿ ಜೋಡಣೆ ವರದಿ ಸಿದ್ಧಪಡಿಸಲು ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾಹಿತಿ.
  10. ಶ್ರೀ ಜಿ.ಎಸ್.ಬಸವರಾಜ್ ರವರು ಕೇಳಿರುವ 51 ವಿಚಾರಗಳ ಬಗ್ಗೆ, ಜಲಸಂಪನ್ಮೂಲ ಸಚಿವಾಲಯದಿಂದ ಮತ್ತು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಿಂದ  ಬಂದಿರುವ ಪತ್ರಗಳ ಮಾಹಿತಿ.
  11. ಕುಂದರನಹಳ್ಳಿ ರಮೇಶ್ ರವರು ಕೇಳಿರುವ 210 ಅಂಶÀಗಳ ಬಗ್ಗೆ, ಜಲಸಂಪನ್ಮೂಲ ಸಚಿವಾಲಯದಿಂದ ಮತ್ತು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಿಂದ  ಬಂದಿರುವ ಪತ್ರಗಳ ಮಾಹಿತಿ.
  12. ಕುಂದರನಹಳ್ಳಿ ರಮೆಶ್ ರವರ ಪತ್ರಗಳ ಆಧಾರದ ಮೇಲೆ ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರು ಬರೆದಿರುವ ಪತ್ರಗಳ ಮಾಹಿತಿ ನೀಡುವ ಬಗ್ಗೆ.
  13. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಯೋಜನೆಗಳ ಬಗ್ಗೆ ಸ್ಟ್ರಾಟಜಿ.
  14. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಕರಾಬುಹಳ್ಳಗಳ ಇತಿಹಾಸ ಸಹಿತ ಜಿಐಎಸ್ ಲೇಯರ್.
  15. ಕರಾಬುಹಳ್ಳಗಳು ಊಳಿನಿಂದ ತುಂಬಿ, ಬಯಲು ಪ್ರದೇಶದಲ್ಲಿ ಹೇಮಾವತಿ ನೀರು ಹರಿಯುತ್ತಿರುವ ಇತಿಹಾಸ ಸಹಿತ ಜಿಐಎಸ್ ಲೇಯರ್.
  16. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಸೀರೀಸ್ ಆಫ್ ಟ್ಯಾಂಕ್ ನ ಕರಾಬುಹಳ್ಳಗಳ ಇತಿಹಾಸ ಸಹಿತ ಜಿಐಎಸ್ ಲೇಯರ್.
  17. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಜಲಸಂಗ್ರಹಾಗಾರಗಳು ಇಲ್ಲದ ಗ್ರಾಮಗಳ ಇತಿಹಾಸ ಸಹಿತ ಜಿಐಎಸ್ ಲೇಯರ್.
  18. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ, ಪ್ರತಿಯೊಂದು ಯೋಜನೆಗಳ ಮಾಹಿತಿಯನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಅಫ್ ಲೋಡ್ ಮಾಡಲು ಮತ್ತು ಮಾಹಿತಿ ಕಣಜಕ್ಕೆ ಅಪ್ ಲೋಡ್ ಮಾಡುವ ಕೆಲಸವನ್ನು ಶೇ 100 ರಷ್ಟು ಪೂರ್ಣಗೊಳಿಸುವ ಬಗ್ಗೆ.
  19. ಕಾವೇರಿ ವಿವಾದದ ತೀರ್ಪಿನಲ್ಲಿ ಸಣ್ಣ ನೀರಾವರಿಗೆ ನಿಗದಿ ಪಡಿಸಿರುವ ಸುಮಾರು 64.09 ಟಿ.ಎಂ.ಸಿ ಅಡಿ ನೀರಿನ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಶ್ರೀ ಹರಿನಾರಾಯಣರವರು ಈ ಬಗ್ಗೆ ಬೆಳಕು ಚೆಲ್ಲಿದರು, ಈ ಸಂಬಂಧ ವಿವರವಾದ ಮಾಹಿತಿ.
  20. ಹೇಮಾವತಿ ಪ್ಲಡ್ ಪ್ಲೋ ಕೆನಾಲ್ ಯೋಜನೆ ನನೆಗುದಿಗೆ ಬೀಳಲು ಇರುವ ಕಾರಣಗಳ ಬಗ್ಗೆ ಮಾಹಿತಿ.
  21. ಮೇಕೆದಾಟು ಯೋಜನೆಯ ಮಾಹಿತಿ.
  22. ಇವುಗಳಲ್ಲದೆ ಮೌಲ್ಯಮಾಪನ ವರದಿ ಸಿದ್ಧಪಡಿಸುವಾಗ, ಅಗತ್ಯವಿರುವ ಮಾಹಿತಿಗಳನ್ನು ನೀಡುವ ಬಗ್ಗೆ.

ಹಾಜರಿದ್ದ ತುಮಕೂರು ನಾಲಾವಲಯದ ಮುಖ್ಯ ಇಂಜಿನಿಯರ್ ಶ್ರೀ ಮಹೇಶ್ ರವರು, ಎಸ್.ಇ ಶ್ರೀ ವರದಯ್ಯನವರು ಮತ್ತು ಇಂಜಿನಿಯರ್ ಗಳ ತಂಡ ನೀಡುವ ಎಲ್ಲಾ ಮಾಹಿತಿಯನ್ನು ನೀಡಲು ಅಥವಾ ಹೊಸದಾಗಿ ಜಿಐಎಸ್ ಲೇಯರ್ ಮಾಡಬೇಕಾಗಿದ್ದಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ಅವರು ಕಾಲಮಿತಿ ನಿಗದಿಯಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ನಿಗಮದ ವ್ಯಾಪ್ತಿಯಲ್ಲಿ ನೀಡಬೇಕಾಗಿರುವ ಮಾಹಿತಿಗಳನ್ನು ನೀಡಲು ಟಿಎ ರವರಾದ ಶ್ರೀಮತಿ ಹುಮೇರವರು ಮತ್ತು ಶ್ರೀಮತಿ ಮಾನಸ ರವರಿಗೆ, ಅಗತ್ಯ ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಂಕರೇಗೌಡರವರು ಸೂಚಿಸಿದರು.

ಅಂತರ ರಾಜ್ಯ ವಿವಾದ ಸಲಹೆಗಾರರಾದ  ಶ್ರೀ ಬಂಗಾರಸ್ವಾಮಿಯವರು ಹಾಜರಿದ್ದು, ಯಾವ ರೀತಿ ಮೌಲ್ಯ ಮಾಪನ ವರದಿಯಲ್ಲಿ ಮಾಹಿತಿ ನೀಡಬೇಕು ಎಂಬ ಬಗ್ಗೆ ಸಲಹೆ ನೀಡಿದರು.

‘ಶ್ರೀ ಶಂಕರೇಗೌಡರವರು ನೀವು ಬರೆಯುವಾಗ ಪ್ಲಡ್ ಇರ್ರಿಗೇಷನ್ ಎಂದು ಬರೆಯುತ್ತೀರಿ, ಪ್ಲಡ್ ಇರ್ರಿಗೇಷನ್ ಅರ್ಥವೇ ಬೇರೆ, ಪ್ಲೋ ಇರ್ರಿಗೇಷನ್ ಅರ್ಥವೇ ಬೇರೆ ಎಂಬ ಅತ್ಯುತ್ತಮವಾದ ಸಲಹೆ ನೀಡಿದರು. ನನ್ನ ತಪ್ಪನ್ನು ಇನ್ನೂ ಮುಂದೆ ತಿದ್ದಿಕೊಳ್ಳುವುದಾಗಿ ಅವರಿಗೆ ಮನವರಿಕೆ ಮಾಡಲಾಯಿತು.