22nd November 2024
Share
HASSAN ZP PD S.C MAHESH WITH KUNDARANAHALLI RAMESH

TUMAKURU:SHAKTHIPEETA FOUNDATION

ಹಾಸನ ಜಿಲ್ಲಾ ಮಟ್ಟದ ದಿಶಾ ಕಾರ್ಯ ವೈಖರಿ ಬಗ್ಗೆ ಅಧಿಕಾರಿಗಳು ಮತ್ತು ನೌಕರರೊಂದಿಗೆ (28.10.2020) ಸಮಾಲೋಚನೆ ನಡೆಸಲಾಯಿತು. ಪಿಡಿ ಶ್ರಿಮಹೇಶ್‌ರವರು ಮತ್ತು ಕೇಸ್‌ವರ್ಕರ್ ಶ್ರೀಮತಿ ವೀಣಾರವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಪಡೆಯಲಾಯಿತು.

 ನವೆಂಬರ್ 2 ರಂದು ಹಾಸನ ದಿಶಾ ಸಭೆನಡೆಯಲಿದೆ. ಸಭೆಗೆ ಎಲ್ಲಾ ಇಲಾಖೆಗಳಿಂದ ಪ್ರಗತಿ ಪರಿಶೀಲನೆಗಾಗಿ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಜಿಲ್ಲೆಯ 267 ಗ್ರಾಮಪಂಚಾಯತ್‌ಗಳಿಗೆ ಭಾರತ್‌ನೆಟ್ ಸಂಪರ್ಕ ಒದಗಿಸಲಾಗಿದೆ. ಆದರೆ ಹಲವಾರು ಗ್ರಾಮಪಂಚಾಯತ್‌ಗಳು ಹಣ ಪಾವತಿಸಿಲ್ಲ ಹಣಪಾವತಿಸಲು ಅಗತ್ಯ ಕ್ರಮಕೈಗೊಳ್ಳಿ ಎಂಬ ಮನವಿಯನ್ನು ಬಿಎಸ್‌ಎನ್‌ಎಲ್ ಅಧಿಕಾರಿಗಳು ಪಿಡಿ ಶ್ರೀ ಮಹೇಶ್‌ರವರಿಗೆ ನೀಡಿದರು.

 ಮಾಹಿತಿ ದಾಖಲೆ ಪರಿಶೀಲಿಸಿದ ಮಹೇಶ್‌ರವರು ನನ್ನ ಅನುಭವದ ಪ್ರಕಾರ ಹಲವಾರು ಗ್ರಾಮಪಂಚಾಯಿತಿಗಳಿಗೆ ಇಂಟರ್‌ನೆಟ್ ಸಂಪರ್ಕ ಸರಿಯಾಗಿ ಆಗುತ್ತಿಲ್ಲ. ಯಾವ ಪಂಚಾಯಿತಿಗಳಿಗೆ, ಯಾವ ಕಾರಣದಿಂದ, ಎಷ್ಟೆಷ್ಟು ಸಮಯ ಸಂಪರ್ಕ ನೀಡಲು ತಮಗೆ ಸಾದ್ಯಾವಾಗಿಲ್ಲ, ಎಂಬ ಬಗ್ಗೆ ಮಾಹಿತಿಯ ಪಟ್ಟಿ ನೀಡಲು ಸೂಚಿಸಿದರು.

 ಇದು ಡಿಜಿಟಲ್ ಇಂಡಿಯಾ ಯುಗ, ಜನತೆಗೆ ಸಮರ್ಪಕ ಸೇವೆ ಸಲ್ಲಿಸಲು ಇಂಟರ್‌ನೆಟ್ ಸೌಲಭ್ಯ ಪ್ರಮುಖವಾಗಿದೆ. ಇಂಟರ್‌ನೆಟ್ ಇಲ್ಲದೆ ನೂರಾರು ಜನ ಗ್ರಾಮಪಂಚಾಯತ್ ಕಚೇರಿಗೆ ಅಲೆಯುವ ಪರಿಸ್ಥಿತಿ ಇದೆ. ಇದೂ ಸುಧಾರಣೆಯಾಗಬೇಕು.

 ಸಭೆಯ ವೇಳೆಗೆ ಆ ಮಾಹಿತಿ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದೇ ದಿಶಾ ಸಮಿತಿಯ ಪ್ರಮುಖ ಉದ್ದೇಶ. ಈ ರೀತಿ ಪ್ರತಿಯೊಂದು ಇಲಾಖೆಗಳ ಸೇವೆ ಮತ್ತು ಅನುದಾನದ ಯೋಜನೆಗಳ ಅಡಚಣೆಗಳ ಬಗ್ಗೆ ಪರಸ್ಪರ ವಿವಿಧ ಇಲಾಖೆಗಳು ಸಮಾಲೋಚನೆ ನಡೆಸುವ ಮೂಲಕ ಕಾಲಮಿತಿ ನಿಗದಿಯಲ್ಲಿ ಸಮಸ್ಯೆ ಪರಿಹಾರ ನೀಡಲು ಶ್ರಮಿಸುವ ವೇದಿಕೆಯೇ ದಿಶಾ.

 ರಾಜ್ಯ ಮತ್ತು ಜಿಲ್ಲಾಮಟ್ಟದ ಸಮಿತಿಗಳು ಯಾವ ರೀತಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಲಾಯಿತು. ಜೊತೆಗೆ ಹಾಸನ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ವಿಳಂಭವಾಗಿರುವ ಯೋಜನೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.