TUMAKURU:SHAKTHIPEETA FOUNDATION
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-5, ದಿನಾಂಕ: 14.11.2020
ಕರ್ನಾಟಕ ರಾಜ್ಯದ, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ ಗ್ರಾಮ. ನೀರಾವರಿಯಲ್ಲಿ ವಿಶ್ವದ ಗಮನ ಸೆಳೆದ ತಜ್ಞರ ನೆನಪು ಸದಾ ಕಣ್ಣಿನ ಮುಂದೆ ಬರಲಿದೆ. ಇವರ ಹೆಸರಿನಲ್ಲಿ ರಾಜ್ಯದಲ್ಲಿ ನೀರಾವರಿ ವಿಶ್ವವಿದ್ಯಾಲಯ ಆರಂಭವಾಗ ಬೇಕೆಂಬ ನಮ್ಮ ಕನಸಿಗೆ ಮತ್ತೆ ಚಾಲನೇ ನೀಡಬೇಕಿದೆ.
ವಿಶ್ವೇಶ್ವರಯ್ಯನವರ ಜನ್ಮಸ್ಥಳ ’ರಾಜ್ಯದ ನದಿ ಜೋಡಣೆ’ಗೆ ಸ್ಪೂರ್ತಿ ತುಂಬುವ ಆಶಾ ಭಾವನೆಯೂ ಇದೆ. ಇಲ್ಲಿನ ಮಣ್ಣಿಗೆ ಆ ಶಕ್ತಿಯೂ ಇದೆ. ಅವರ ಜನ್ಮ ದಿನದಂದು ತುಮಕೂರಿನ ಪ್ರಜಾಪ್ರಗತಿ ಮತ್ತು ಪ್ರಗತಿ ಟೀವಿ ಆಯೋಜಿಸಿದ್ದ ನೀರಾವರಿ ಸಂವಾದದಲ್ಲಿ ಪಾಲ್ಗೊಂಡಿದ್ದ ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ಶ್ರೀ ಆಂಜನೇಯ ರೆಡ್ಡಿರವರು, ಶ್ರೀ ನಾಗಣ್ಣವರು, ಶ್ರೀ T.N.ಮಧುರವರು, T.N.ಶಿಲ್ಪಶ್ರೀರವರು, ಶ್ರೀ ಸಾ.ಚಿ.ರಾಜಕುಮಾರ್ ರವರು ಮತ್ತು ಶ್ರೀ ಹರೀಶ್ ಆಚಾರ್ಯರವರು ಸೇರಿದಂತೆ ’ರಾಜ್ಯದ ನದಿ ಜೋಡಣೆ’ಗೆ ಚಾಲನೆ ನೀಡುವ ಬಗ್ಗೆ ಚರ್ಚಿಸಿದ್ದು ಇತಿಹಾಸ.
ಅಂದಿನಿಂದ ಬಾರುಗೋಲು ಹಿಡಿದು ಕಡತದ ಹಿಂದೆ ಬೀಳುವ ಕೆಲಸವನ್ನು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಆರಂಭಿಸಿದೆ. ಅಲ್ಲೇ ಹತ್ತಿರದಲ್ಲಿ ಸಾಯಿ ಗ್ರಾಮವೂ ಇದೆ. ಸಾಯಿಗ್ರಾಮವೂ ನದಿ ಜೋಡಣೆಗೆ ಹಲವಾರು ಯೋಜನೆ ರೂಪಿಸುತ್ತಿದೆ.
ಇಲ್ಲಿರುವ ಶ್ರೀ ಡಾ.ಮುಂಜುನಾಥ್‌ರವರು ಆಶ್ರಮದಲ್ಲಿ ನಡೆಯುವ ’ಅತಿರಥ ಮಹಾರುದ್ರಯಾಗ’ ದಲ್ಲಿ ಪಾಲ್ಗೊಳ್ಳಲು ಶ್ರೀ ಜಿ.ಎಸ್.ಬಸವರಾಜ್‌ರವರನ್ನು, ನನ್ನನ್ನು ಆಹ್ವಾನಿಸಿದ್ದಾರೆ. ಅಗಿಂದಾಗ್ಗೆ ಇಲ್ಲಿಗೆ ಭೇಟಿ ನೀಡುವುದು ನಮ್ಮ ಕಾಯಕವೂ ಹೌದು.
ದಿನಾಂಕ:19.11.2020 ನೇ ಗುರುವಾರ ಬೆಳಿಗ್ಗೆ 9 ಘಂಟೆಗೆ ಸಾಯಿಗ್ರಾಮದಲ್ಲಿ ನಡೆಯುವ ಯಜ್ಞದ ಪೂರ್ಣ ಆಹುತಿ ಮುಗಿದ ನಂತರ, ಶ್ರೀಗಳ ಜೊತೆಯಲ್ಲಿ ರಾಜ್ಯದ ನದಿ ಜೋಡಣೆ ಬಗ್ಗೆ ಸಮಾಲೋಚನೆ ನಡೆಸುವ ಆಲೋಚನೆಯೂ ಇದೆ. ಈ ಹಿಂದೆ ಭೇಟಿ ನೀಡಿದ್ದಾಗ ನದಿ ಜೋಡಣೆ ವಿಚಾರದ ಬಗ್ಗೆಯೂ ಸಮಾಲೋಚನೆ ನಡೆಸಲಾಗಿತ್ತು.
‘ಪ್ರಸ್ತುತ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ರಾಜ್ಯದ ನದಿ ಜೋಡಣೆ ಯೋಜನೆಗೆ ಡಿಪಿಆರ್ ಮಾಡಲು ಆದೇಶ ನೀಡಿರುವುದರಿಂದ ಈ ಭೇಟಿಗೆ ಹೆಚ್ಚಿನ ಮಹತ್ವವಿದೆ. ಸಾಧ್ಯವಾದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಹೋರಾಟಗಾರರಾದ ಶ್ರೀ ಆಂಜನೇಯ ರೆಡ್ಡಿರವರು, ಶ್ರೀ ಚೌಡಪ್ಪನವರು ಇನ್ನೂ ಮಂತಾದವರು ಮತ್ತು ಅವರ ತಂಡದ ಜೊತೆ ಚರ್ಚಿಸಲು ಚಿಂತನೆಯಿದೆ.’