26th April 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಜೆಜಿಹಳ್ಳಿ ಹೋಬಳಿ, ಕೆ.ಆರ್.ಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ, ವಡ್ಡನಹಳ್ಳಿ ಪಕ್ಕದಲ್ಲಿರುವ, ಬಗ್ಗನಡು ಕಾವಲ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಉದ್ದೇಶಿತ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠಗಳ ಕ್ಯಾಂಪಸ್‌ಗೆ ಒಂದು ಅತ್ತುತ್ತಮವಾದ ಹೆಸರನ್ನು ಸೂಚಿಸಲು ಶಕ್ತಿಪೀಠ ಫ್ಯಾಮಿಲಿ ಸದಸ್ಯರು ಹಾಗೂ ನಮ್ಮ ಸಂಸ್ಥೆಯ ಇ-ಪೇಪರ್ ಓದುಗರಲ್ಲಿ ಮನವಿ ಮಾಡಿದೆ.

 ಜಲಭಾರತದ ನಕ್ಷೆಯನ್ನು ಹಿಂದೂ ಸಂಸ್ಕೃತಿಯ ಪ್ರಕಾರ ಅಂತಿಮಗೊಳಿಸಲು ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 12 ಎಕರೆ 15 ಗುಂಟೆ ಜಮೀನನ್ನು ಶಕ್ತಿಪೀಠ ಫೌಂಡೇಷನ್ ಸುಮಾರು 33 ವರ್ಷಗಳ ಅವಧಿಗೆ ಶ್ರೀಮತಿ ಬಿ.ಸುಜಾತಕುಮಾರಿ ರವರಿಂದ ಗುತ್ತಿಗೆ ಪಡೆದಿದೆ.

 ದೇಶದ ಯಾವುದೇ ಮೂಲೆಯಲ್ಲಿ ಶಕ್ತಿಪೀಠ ತನ್ನ ಶಾಖೆಯನ್ನು ಆರಂಭಿಸಲು ಪಾವಗಡದ ಸೋಲಾರ್ ಮಾದರಿಯಲ್ಲಿ ರೈತರಿಂದ ಗುತ್ತಿಗೆ ಪಡೆಯಲು ನಿರ್ಣಯ ಮಾಡಿದೆ. ಲೋಕೋಪಯೋಗಿ ಅಥವಾ ಕೇಂದ್ರ ಲೋಕೋಪಯೋಗಿ ಇಲಾಖೆ ನಿಗದಿಗೊಳಿಸುವ ಬಾಡಿಗೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

 ಸುಮಾರು 38 ಗುಂಟೆ ಜಮೀನಿನಲ್ಲಿ ಭಾರತ ನಕ್ಷೆಯನ್ನು ಭೂಮಿಯ ಮೇಲೆ ಇಳಿಸಲಾಗಿದೆ. ಗಡಿ ನಿರ್ಮಾಣದ ಅಂತಿಮ ಸಿದ್ಧತೆ ನಡೆದಿದೆ. ವೃತ್ತದ ಒಳಭಾಗದಲ್ಲಿ ಸುಮಾರು ಒಂದು ಎಕರೆ ಒಂದು ಗುಂಟೆ  ಜಮೀನಿನನಲ್ಲಿ ಕೃತಕ ಅರಬ್ಬಿಸಮುದ್ರ, ಹಿಂದೂಮಹಾಸಾಗರ ಮತ್ತು ಬಂಗಾಳಕೊಲ್ಲಿಗಳ ಜಲಸಂಗ್ರಹಾಗಾರ ನಿರ್ಮಾಣ ಮಾಡಲಾಗಿದೆ. ಅಂತಿಮ ಸ್ವರೂಪ ಮಾಡಬೇಕಿದೆ.

 ಸುಮಾರು ಒಂದು ಎಕರೆ ನಾಲ್ಕು ಗುಂಟೆ ಜಮೀನನಲ್ಲಿ ಒಂದು ವೃತ್ತಾಕಾರದ ರಿಂಗ್ ರಸ್ತೆಯನ್ನು  ನಿರ್ಮಾಣ ಮಾಡಲಾಗಿದೆ. ರಿಂಗ್ ರಸ್ತೆಯ ಒಳಭಾಗ ಸುಮಾರು 3 ಎಕರೆ 13 ಗುಂಟೆ ಜಮೀನು ಇದೆ. ರಿಂಗ್ ರಸ್ತೆಯ ಹೊರಭಾಗ ಸುಮಾರು 4 ಎಕರೆ 17 ಗುಂಟೆ ಜಮೀನು ಇದೆ.

 ವೃತ್ತಾಕಾರದ ಒಳಭಾಗದಲ್ಲಿ ಸುಮಾರು ಒಂದು ಎಕರೆ ಹದಿನಾಲ್ಕು ಗುಂಟೆ ಜಮೀನು ಇದೆ. ಇದರಲ್ಲಿ ದೇವಾಲಯ, ಯಜ್ಞಶಾಲೆ, ಬಯಲು ರಂಗಮಂದಿರ, ಪುಷ್ಕರಣೆ/ಕಲ್ಯಾಣಿ, ಪರ್‌ಗೋಲಾ, ವಾಟರ್ ಥೆರಫಿ ಕಟ್ಟಡಗಳನ್ನು ನಿರ್ಮಾಣ ಮಾಡಲು  ಸ್ಥಳ ಅಂತಿಮ ಗೊಳಿಸಬೇಕಿದೆ.

ಈಶಾನ್ಯ, ಆಗ್ನೇಯ, ನೈರುತ್ಯ ಮತ್ತು ವಾಯುವ್ಯ ಉಪದಿಕ್ಕುಗಳಿಗೆ ಮುಖವಾಗಿ SQUARE  ನಿರ್ಮಿಸಿದಲ್ಲಿ, ಸುಮಾರು  5 ಎಕರೆ 28 ಗುಂಟೆ ಜಮೀನು, SQUARE ಒಳಭಾಗದಲ್ಲಿ ಬರಲಿದೆ. ಇದು ಸಂಪೂರ್ಣವಾಗಿ ನಮ್ಮ ಗುತ್ತಿಗೆ ಆಧಾರದ ಜಮೀನನಲ್ಲಿ ಬರಲಿದೆ.

 ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಪ್ರಮುಖ ದಿಕ್ಕುಗಳಿಗೆ ಮುಖವಾಗಿ SQUARE ನಿರ್ಮಿಸಿದಲ್ಲಿ ಬೇಕಾಗುವ 5 ಎಕರೆ 28 ಗುಂಟೆ ಜಮೀನಿಗೆ ಬೇರೆಯವರ ಸುಮಾರು 10 ಗುಂಟೆ ಜಮೀನು ಅದಲು ಬದಲು ಅಥವಾ ಕ್ರಯ ಅಥವಾ ಲೀಸ್ ಪಡೆಯಲು ಪ್ರಯತ್ನ ಮಾಡಬೇಕಿದೆ.

 ಅಷ್ಟಭುಜಾಕೃತಿ ನಕ್ಷೆ ಮಾಡಿದಲ್ಲಿ ಸುಮಾರು 7 ಎಕರೆ 38 ಗುಂಟೆ ಜಮೀನು ಅಗತ್ಯವಿದೆ. ಇದರಲ್ಲಿ ಬೇರೆಯವರ ಸುಮಾರು 1೦ ಗುಂಟೆ ಜಮೀನು ಅದಲು ಬದಲು ಅಥವಾ ಕ್ರಯ ಅಥವಾ ಲೀಸ್ ಪಡೆಯಲು ಪ್ರಯತ್ನ ಮಾಡಬೇಕಿದೆ.

 ನಕ್ಷೆಯ ಸ್ವರೂಪವನ್ನು ಅಂತಿಮ ಗೊಳಿಸಿದ ನಂತರ, ಉಳಿದ ಜಮೀನನಲ್ಲಿ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲು ಯೋಚಿಸಲಾಗಿದೆ. ಯಾವುದೇ ಆಕಾರದ ನಕ್ಷೆ ನಿರ್ಮಿಸಿದರೂ ತೊಂದರೆಯಾಗದಂತೆ ಅಡುಗೆ ಮತ್ತು ಊಟದ ಕಟ್ಟಡವನ್ನು ನಿರ್ಮಾಣ ಮಾಡಲು ಆಗ್ನೇಯ ದಿಕ್ಕಿನಲ್ಲಿ ಸ್ಥಳ ನಿಗದಿ ಮಾಡಲಾಗಿದೆ.

 ಯಾವ ರೀತಿಯ ನಕ್ಷೆಯನ್ನು ಅಂತಿಮಗೊಳಿಸುವುದು ಸೂಕ್ತ ಎಂದು ಶಕ್ತಿಪೀಠ ಫ್ಯಾಮಿಲಿ ಸದಸ್ಯರು ಹಾಗೂ ನಮ್ಮ ಸಂಸ್ಥೆಯ ಇ-ಪೇಪರ್ ಓದುಗರಲ್ಲಿ ಮನವಿ ಮಾಡಿದೆ. ಇದೂವರೆಗೂ ನಮ್ಮ ಸಂಸ್ಥೆ ಹಲವಾರು ಜೋತಿಷಿಗಳು, ವಾಸ್ತುಶಿಲ್ಪಿಗಳು, ಶಕ್ತಿಪೀಠ ಸಂಶೋಧಕರೊಂದಿಗೆ ಸಮಾಲೋಚನೆ ನಡೆಸುತ್ತಾ ಬಂದಿದೆ.

ಆರಂಭದಿಂದ ಇಲ್ಲಿಯವರೆಗೂ ಭೇಟಿ ಮಾಡಿರುವವರಲ್ಲಿ ಮನವಿ ಮಾಡಿ ನಕ್ಷೆಯನ್ನು ಅಂತಿಮಗೊಳಿಸಲು ಸಲಹೆ ನೀಡಲು ಕೋರಲಾಗುವುದು. ಜೊತೆಗೆ  ಇನ್ನೂ ಆನೇಕ ಜನರೊಂದಿಗೆ ಸಮಾಲೋಚನೆ ಮಾಡಿ, ನಕ್ಷೆಯನ್ನು ಅಂತಿಮಗೊಳಿಸಲು ಯೋಚಿಸಲಾಗಿದೆ. ಆರ್ಕಿಟೆಕ್ಚರ್, ಕಲಾವಿದ/ವಿನ್ಯಾಸಗಾರರಿಂದಲೂ ಸಹ ಅಂತಿಮ ನಕ್ಷೆಯ ಬಗ್ಗೆ ಲಿಖಿತ ವರದಿ ಪಡೆಲಾಗುವುದು.

ಈ ನಕ್ಷೆಯನ್ನು ಅಂತಿಮಗೊಳಿಸುವ ಮುನ್ನ ವಿಶ್ವದ 108 ಶಕ್ತಿಪೀಠ ಸ್ಥಳಗಳಿಗೂ, 12 ಜ್ಯೋರ್ತಿಲಿಂಗ, 2 ಸಾಯಿಬಾಬಾ, ಹನುಮನ ಜನ್ಮ ಸ್ಥಳಗಳಿಗೂ  ರವಾನಿಸಿ, ಅವರ ಅಭಿಪ್ರಾಯಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಪಡೆಯಲಾಗುವುದು.

 ಆರ್ಕಿಟೆಕ್ಚರ್, ಕಲಾವಿದ/ವಿನ್ಯಾಸಗಾರರಿಂದಲೂ ಮತ್ತು 3 ಡಿ ಮಾಡುವವರು ತಮ್ಮ ಕೈಚಳಕ ಅಂತಿಮಗೊಳಿಸಲು ಇವರೆಲ್ಲರೊಂದಿಗೂ ಎಂಓಯು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ಆಸಕ್ತರು ಸಲಹೆ ನೀಡಲು ಮನವಿ ಮಾಡಲಾಗಿದೆ.