MSME TECHNOLOGY CENTRE
TUMAKURU:SHAKTHIPEETA FOUNDATION
ರಾಜ್ಯ ಸರ್ಕಾರ ಸೂಕ್ತ ಕಟ್ಟಡ ನೀಡಿದರೇ ಮಾತ್ರ MSME TECHNOLOGY CENTRE ನೀಡಲಾಗುವುದು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನೀಡಿರುವ 15 ಎಕರೆ ಜಮೀನು ಬೇಕಾದಲ್ಲಿ ಹಿಂಪಡೆಯಿರಿ. ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಎಂ.ಎಸ್.ಎಂ.ಇ ಸಚಿವರಾದ ಶ್ರೀ ನೀತೀನ್ ಗಡ್ಕರಿರವರು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಬಸವರಾಜ್‌ರವರು 4 ನೇ ಭಾರಿ ಸಂಸದರಾಗಿದ್ದಾಗ ವಿಜ್ಞಾನ ಗುಡ್ಡದಲ್ಲಿ ರೂ 100 ಕೋಟಿ MSME TECHNOLOGY CENTRE
ಸ್ಥಾಪಿಸಲು ಪ್ರಯತ್ನ ಮಾಡಿದ್ದರು. ಅವರು ಸೋತ ನಂತರ ಈ ಯೋಜನೆಯನ್ನು ಮುಂದುವರೆಸಲು ಆಗಿನ ಸಂಸದರಾಗಿದ್ದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರು ಪ್ರಯತ್ನ ಮಾಡಿದ್ದರು. ಜಿಲ್ಲಾಡಳಿತ ಅಮಲಾಪುರದಲ್ಲಿ 15 ಎಕರೆ ಜಮೀನನ್ನು ಮಂಜೂರು ಮಾಡಿತ್ತು.
ತುಮಕೂರು ಸ್ಮಾರ್ಟ್ ಸಿಟಿಯವರಿಗೆ ಸ್ಕಿಲ್ ಸಿಟಿ ಮಾಡಿ, ಎಂದು ಕಾಡಿ ಬೇಡಿದರೂ ಅವರ ಕಿವಿಗೆ ಹೋಗಲಿಲ್ಲ. ಯಾರಾದರೂ ಸತ್ಯ ಹೇಳಿದರೇ ಅವರು ತಿಳುವಳಿಕೆ ಇಲ್ಲದವರು ಎಂಬ ಪಟ್ಟ ಕಟ್ಟುತ್ತಾರೆ. ಅಲ್ಲಿ ಮಹಾನ್ ತಿಳುವಳಿಕೆ ಇರುವವರು ಮಾತ್ರ ಇದ್ದಾರೆ.
ಅಗತ್ಯ ಇಲ್ಲದೆ ಇರುವುದಕ್ಕೇ ನೂರಾರು ಕೋಟಿ ಹಾಳು ಮಾಡಿದ್ದಾರೆ, ಅಗತ್ಯವಿರುವ ಯೋಜನೆಗೆ ಅವರ ಬಳಿ ಯೋಚನೆ ಮಾಡುವಷ್ಟು ಸಮಯ ಇಲ್ಲ. ಎಲ್ಲಿಂದಲೋ ಬಂದವರು ಹೇಳಬೇಕು. ಇಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೂ, ಇಂಜಿನಿಯರ್‌ಗಳಿಗೂ, ಗುತ್ತಿಗೆದಾರರಿಗೂ, ಊರಿನ ಜನತೆಗೂ ಬೆಲೆ ಇಲ್ಲ ಎಂಬಂತಾಗಿತ್ತು.
ಊರೆಲ್ಲಾ ಹಾಳು ಮಾಡಿದ ಮೇಲೆ, ಬಾಯಿ ಬಡಿದು ಕೊಂಡರೇ ಏನು ಪ್ರಯೋಜನ. ಈಗಲಾದರೂ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಲು ತಾಳ್ಮೆ ಮತ್ತು ಜಾಣ್ಮೆ ಇದ್ದಲ್ಲಿ, ಅಗತ್ಯವಿರುವ ಕಟ್ಟಡ ನಿರ್ಮಾಣ ಮಾಡಲು ಹಣ ನೀಡಲು ಯೋಚಿಸಿ. ಇದಕ್ಕಿಂತ ಹೆಚ್ಚಿಗೆ ಹೇಳುವುದು ಅಗತ್ಯವಿಲ್ಲ. ಅಷ್ಟೆ ಪದ ಬಳಸ ಬಹುದು.
ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಮಾನ್ಯ ಮುಖ್ಯ ಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ಆಯವ್ಯಯದಲ್ಲಿಯಾದರೂ ಕಟ್ಟಡಕ್ಕೆ ಹಣ ನಿಗದಿ ಮಾಡಿಸಿ ಪುಣ್ಯ ಕಟ್ಟಿಕೊಳ್ಳುವುದು ಒಳ್ಳೆಯದು ಅಥವಾ ತುಮಕೂರು ನೋಡ್‌ನಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇದ್ದಲ್ಲಿ ಒಂದು ಪ್ರಯತ್ನ ಮಾಡುವುದು ಸೂಕ್ತವಾಗಿದೆ.