21st November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರದ CENTRE FOR  e-GOVERNANCE  ಸಂಸ್ಥೆ ದೇಶಕ್ಕೆ ಮಾದರಿಯಾಗುವಂತಹ ಮಾಹಿತಿ ಕಣಜಕ್ಕೆ ಪೂರಕವಾಗಿ ‘ಡಿಜಿಟಲ್ ಡೈಲಾಗ್’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.’

ದಿನಾಂಕ:14.06.2022 ನೇ ಮಂಗಳವಾರ ತುಮಕೂರು ಜಿಲ್ಲೆಯ, ಗುಬ್ಬಿ ವಿಧಾನಸಭಾ ಕ್ಷೇತ್ರದ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇದೊಂದು ‘ವಿನೂತನವಿಶಿಷ್ಠ ಕಾರ್ಯಕ್ರಮ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಬಿದರೆ ಹಳ್ಳ ಕಾವಲ್ ನಲ್ಲಿ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂದ ಸುಮಾರು ರೂ 6400 ಕೋಟಿ ವೆಚ್ಚದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಆರಂಭವಾಗಲಿದ್ದು ಈಗಾಗಲೇ ವಿಶ್ವದ ಗಮನ ಸೆಳೆಯುವಲ್ಲಿ ದಾಪುಗಾಲು ಇಟ್ಟಿದೆ.

‘ಮಾಹಿತಿ ಕಣಜ ಪೋರ್ಟಲ್ ನಲ್ಲಿ ಶೇ 100 ರಷ್ಟು ಮಾಹಿತಿ ಸಂಗ್ರಹ ಮಾಡಿದ ಕರ್ನಾಟಕದ ರಾಜ್ಯದ ಮೊಟ್ಟಮೊದಲ ಗ್ರಾಮ ಪಂಚಾಯಿತಿಯಾಗಲಿದೆ. ಅಷ್ಟೆ ಅಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ಧಪಡಿಸಿರುವ ಟೋಪೋ ಷೀಟ್ ಮತ್ತು ಹಾಲಿ ಗೂಗಲ್ ಇಮೇಜ್ ನಲ್ಲಿ ಬರುವ ಪ್ರತಿಯೊಂದು ಯೋಜನೆಗಳ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಿದ ಕೀರ್ತಿ ಗ್ರಾಮಪಂಚಾಯಿತಿ ಮಡಿಲಿಗೆ ಬರಲಿದೆ.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಕುಟುಂಬ ಮತ್ತು ಪ್ರತಿಯೊಂದು ಗ್ರಾಮದಲ್ಲಿ  ಭಾರತ ಸರ್ಕಾರದ ಪ್ರತಿಯೊಂದು ಇಲಾಖೆಯು ಅನುಷ್ಠಾನಗೊಳಿಸಬಹುದಾದ ಎಲ್ಲಾ ಯೋಜನೆಗಳ ಜಾರಿಗೆ ಶ್ರಮಿಸಿದ  ಗ್ರಾಮಪಂಚಾಯಿತಿ ಮಡಿಲಿಗೆ ಬರಲಿದೆ. ದೇಶದ ಮಾದರಿ ಗ್ರಾಮಪಂಚಾಯಿತಿ ಆಗಲೇ ಬೇಕಿದೆ.

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ, ತುಮಕೂರು ಜಿಲ್ಲಾಡಳಿತದ, ರಾಜ್ಯ ಸರ್ಕಾರದ ಬೆನ್ನುಲಬಾಗಿ ನಿಂತು, ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಸಂಸದರ ಆದರ್ಶ ಗ್ರಾಮ ಯೋಜನೆಯ ನಾಯಕತ್ವ ವಹಿಸಿರುವ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು  ತುಮಕೂರು ಜಿಲ್ಲೆಯ ಮಾಹಿತಿ ಕಣಜದ ಜಿಲ್ಲಾ ಮಟ್ಟದ ಯೋಜನೆ ಮತ್ತು ಸಮನ್ವಯ ಸಮಿತಿಯ ನಾಯಕತ್ವ ವಹಿಸಿರುವ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ನೇತೃತ್ವದಲ್ಲಿ ಶ್ರಮಿಸಲಿದೆ.

ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ, ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ರವರಾದ ಶ್ರೀ ಮತಿ ವಿದ್ಯಾಕುಮಾರಿರವರ, ಮಾಹಿತಿ ಕಣಜದ ಯೋಜನಾ ನಿರ್ದೇಶಕರಾದ ಶ್ರೀವ್ಯಾಸ್ ರವರ ಪಾತ್ರವೂ ಮಹತ್ತರವಾಗಿದೆ.

ಈ ವಿಶೇಷ ಗ್ರಾಮಸಭೆಗೆ ತಾವೂ ಬನ್ನಿ, ವಿಶೇಷ ಆಸಕ್ತಿ ವಹಿಸಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಮತ್ತು ಸಿಬ್ಭಂಧಿಗಳಿಗೆ ಸಹಕಾರ ನೀಡಿ, ಪಕ್ಷ ರಾಜಕಾರಣ, ಜಾತಿ ರಾಜಕಾರಣ, ಬಡವ ಬಲ್ಲಿದ ಬದಿಗಿಟ್ಟು ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಗೆ ಜೈ ಎನ್ನಿ?