22nd December 2024
Share

TUMAKURU:SHAKTHIPEETA FOUNDATION

ದಿನಾಂಕ:12.06.2022 ರಿಂದ 17.06.2022 ರವರೆಗೆ 5 ದಿವಸಗಳ ದೆಹಲಿ ಅಭಿವೃದ್ಧಿ ಪ್ರವಾಸದಲ್ಲಿ ನನಗೆ ವಿಚಿತ್ರ ಅನುಭವ ಆಗಿರುವುದಂತೂ ಸತ್ಯ.

ಸತ್ಯವನ್ನು ಬರೆದರೆ ಕೆಲವರ ಮನಸ್ಸಿಗೆ ನೋವು, ಸುಳ್ಳು ಬರೆದರೆ ನನ್ನ ಆತ್ಮ ವಂಚನೆ, ಯಾವುದನ್ನೂ ಬರೆಯುವುದು ಬೇಡ ಎಂದರೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುವುದಂತೂ ಕಟ್ಟಿಟ್ಟ ಬುತ್ತಿ.

ನಾನು ಕಳೆದ ಎರಡುವರೆ ವರ್ಷಗಳಿಂದ ಪ್ರತಿ ದಿನದ ಕೆಲವು ಅನುಭವವಗಳನ್ನು ಮಾತ್ರ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎಲ್ಲವನ್ನೂ ಬರೆಯಲು ಸಾದ್ಯಾವಿಲ್ಲ, ನನ್ನ ಅನಿಸಿPಗೆÉ ತಕ್ಕಂತೆ ಬರೆಯುವುದು ವಾಡಿಕೆ.

ಒಂದು ವರದಿಯಂತೂ, ಒಂದು ಬರವಣೆಗಿಗೆ ಇಷ್ಟೊಂದು ಪವರ್ ಇದೆಯಾ ಎಂಬ ಭಾವನೆ ನನಗಂತೂ ಮೂಡಿದೆ. ಈ ಹಿನ್ನಲೆಯಲ್ಲಿ ಬರೆಯುವ ಮೊದಲು ನಾನು ಆತ್ಮಾವಾಲೋಕನ ಮಾಡಿಕೊಂಡು ಬರೆಯಬೇಕೋ ಅಥವಾ ಯಾರು ಏನೇ ಅಂದುಕೊಳ್ಳಲಿ ನನ್ನ ಭಾವನೆಗಳನ್ನು ದಾಖಲಿಸಬೇಕೋ ಎಂಬ ಗೊಂದಲ ನನ್ನಲ್ಲಿದೆ.

ಕಳೆದ 5 ದಿವಸ ಬರೆಯಲು ಸಮಯವಿರಲಿಲ್ಲ, ಈಗ ಬರೆಯುವ ಮೊದಲು ಒಂದು ಚಿಂತನೆ ಅಗತ್ಯ ಎನಿಸಿದೆ. ನನಗೆ ಹಲವಾರು ಜನ ಸಲಹಾಗಾರರೂ ಇದ್ದಾರೆ. ನಾನು ಏನೇ ತಪ್ಪು ಮಾಡಿದರೂ ತಕ್ಷಣ ತಿದ್ದುವ ಮನೋಭಾವದವರೂ ಇದ್ದಾರೆ.

ನನಗೆ ಹಲವಾರು ಭಾರಿ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಓದಿದ ನಂತರ, ಸಾರ್ ಈ ಪದ ಬೇಕಾಗಿತ್ತ ಎಂಬ ಒಂದು ಮಾತು, ಹಲವು ಭಾರಿ ಮತ್ತೆ ಬದಲಾವಣೆ ಮಾಡಿದ್ದೇನೆ. ಇಷ್ಟು ದಿವಸದಲ್ಲಿ ನಾನು ಬರೆದ ಒಂದು ಆರ್ಟಿಕಲ್ ಅನ್ನು ಮಾತ್ರ ಡಿಲೀಟ್ ಮಾಡಿರುವುದು ಉಂಟು.

ಈಗ ನಾನು ಮುಂದೆ ಯಾವ ರೀತಿ ಬರೆಯಬೇಕು ಎಂಬ ಆತ್ಮಾವಲೋಕನ ಮಾಡಿಕೊಂಡು ಬರೆಯಲು ಇಚ್ಚಿಸಿದ್ದೇನೆ. 5 ದಿವಸಗಳ ಭೇಟಿಯಂತೂ ಗ್ರ್ಯಾಂಡ್ ಸಕ್ಸಸ್ ಎಂಬ ತೃಪ್ತಿ ನನಗಿದೆ.