26th July 2024
Share

TUMKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿಎಸ್.ಬಸವರಾಜ್ ರವರ ನೇತೃತ್ವದ ನಿಯೋಗ ದೆಹಲಿಯಲ್ಲಿ ದಿನಾಂಕ:09.06.2022 ರಂದು  ಶ್ರೀ ತ್ರಿಪಾಠಿ ರೈಲ್ವೆ ಮಂಡಳಿಯ ಅಧ್ಯಕ್ಶರು, ರೈಲ್ವೆ ಬೋರ್ಡ್, ನವದೆಹಲಿ ಇವರನ್ನು ಭೇಟಿ ಮಾಡಿ ಈ ಕೆಳಕಂಡ ಯೊಜನೆಗಳು ಮತ್ತು ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ರೈಲ್ವೆಸೇವೆ ಸೌಲಭ್ಯ ಒದಗಿಸಲು  ಆಧ್ಯತೆ ಮೇಲೆ ಕ್ರಮ ಕೈಗೊಳ್ಳಲು ಚರ್ಚಿಸಲಾಗಿದೆ.

ಶ್ರೀ ತ್ರಿಪಾಠಿ ರೈಲ್ವೆ ಮಂಡಳಿಯ ಅಧ್ಯಕ್ಶರು, ರೈಲ್ವೆ ಬೋರ್ಡ್, ಮಾನ್ಯ ಸಂಸದರು ಶ್ರೀ ಜಿಎಸ್.ಬಸವರಾಜ್‍ಅವರ ಬೇಡಿಕೆಗಳನ್ನು ಗಮನಿಸಿ, ಸಂಭಂಧಪಟ್ಟ ಅಧಿಕಾರಿಗಳಿಗ್ಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಭರವಸೆ ನೀಡಿರುತ್ತಾರೆ.

ಚಳ್ಳಕೆರೆಹಿರಿಯೂರುಚಿ.ನಾಹಳ್ಳಿತುರುವೇಕೆರೆಚನ್ನರಾಯಪಟ್ಟಣ 183 ಕಿ.ಮಿ ಉದ್ದದ ಹೊಸ ರೈಲು ಮಾರ್ಗ ಯೋಜನೆ

 ಚಳ್ಳಕೆರೆ-ಹಿರಿಯೂರು-ಚಿಕ್ಕನಾಯಕನಹಳ್ಳಿ-ತುರುವೇಕೆರೆ-ಚನ್ನರಾಯಪಟ್ಟಣ 183 ಕಿ.ಮಿ ಉದ್ದದ ಹೊಸ ರೈಲು ಮಾರ್ಗಕ್ಕೆ ¥sóÉಬ್ರವರಿ 2014 ರೈಲ್ವೆ ಮುಂಗಡ ಪತ್ರದಲ್ಲಿ ಮಂಜೂರಾತಿಗೆ ಅವಶ್ಯಕವಾದ ಇಂಜನಿಯರಿಂಗ್ ಮತ್ತು ಟ್ರಾಫಿûಕ್ ಸರ್ವೇಗೆ ಆದೇಶ ನೀಡಲಾಗಿತ್ತು. ಸದರಿ ಯೋಜನೆಯ ಸರ್ವೇ ಕಾರ್ಯ ಮುಗಿಸಿ, ಸದರಿ ಯೋಜನೆಯ ಹೂಡಿಕೆಯಮೇಲಿನ ಉತ್ಪಾದಿತ ಅಂಶವು 15.719% [ROR] ಇದ್ದು ಮುಂದಿನ ಕ್ರಮಕ್ಕೆ ರೈಲ್ವೆ ಮಂಡಲಿಗೆ ದಿನಾಂಕ27/9/2019 ರಲ್ಲಿ ಸಲ್ಲಿಸಲಾಗಿದೆ

. 2013 ರ ಸುಪ್ರೀಂಕೋರ್ಟ್ ಆದೇಶದಂತೆ  ಅಕ್ರಮ ಗಣಿಗಾರಿಕೆ ಅದಿರನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮೂಲಕ ಸಂಗ್ರಹಿಸಲಾದ ಮೊತ್ತವನ್ನು ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಮೈನ್ಸ್ ಎನ್ವರೋಮೆಂಟ್ ರೆಸ್ಟೋರೇಶನ್ ಕಾರ್ಪೋರೇಶನ್ ಮೂಲಕ ಚಿತ್ರದುರ್ಗ/ಬಳ್ಳಾರಿ/ತುಮಕೂರು ಜಿಲ್ಲೆಗಳಲ್ಲಿ ಅಲೋಕೇಶನ್ ಮೂಲಕ ಈ ಯೋಜನೆಗೆ ಬಳಸಲು ಅವಕಾಶವಿದೆ ಎಂಬ ಅಂಶವನ್ನು ಗಮನಕ್ಕೆ ತರಲಾಗಿದೆ.

 ಹಿಂದುಳಿದ ಪ್ರದೇಶಗಳಾದ ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲ್ಲೂಕು ಅಭಿವೃಧ್ಧಿ ಆಗಲು ಪೂರಕವಾಗುವಾಗುತ್ತದೆ. ಮುಂದುವರೆದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ಆದೇಶ ನೀಡಿ ಚಿತ್ರದುರ್ಗ/ಬಳ್ಳಾರಿ/ತುಮಕೂರು ಜಿಲ್ಲೆಗಳಲ್ಲಿ ಅದಿರು ಮೈನಿಂಗ್ ಮತ್ತು ಅದಿರು ರಪ್ತುಮಾಡಲು ಅವಕಾಶ ನೀಡಿದೆ ಎಂಬ ಅಂಶವನ್ನು ಗಮನಿಸಿಕೊಂಡು ಇಂಜನಿಯರಿಂಗ್ ಮತ್ತು ಟ್ರಾಫಿûಕ್ ಸರ್ವೇ ಮತ್ತೊಮ್ಮೆ ಮಾಡಲು ಕೋರಲಾಯಿತು.

ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ನಿರ್ಮಾಣ

ಕೈಗಾರಿಕಾ ವಸಹಾತುಗಳು ಜೋಡನೆ ಸಹಿತ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ನಿರ್ಮಾಣ, ಕೈಗಾರಿಕಾ ವಸಹಾತುಗಳು ಜೋಡಣೆ ಸಹಿತ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ನಿರ್ಮಾಣ  -ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ವಿಷಯದ ಬಗ್ಗೆ  2016 ರಿಂದಲೂ ಈ ಯೋಜನೆಗೆ ನಿರಂತರ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಲಾಯಿತು.

ಈ ಯೋಜನೆಯು ನಾಳೆಯ ಬೆಂಗಳೂರು ಹೊರ ವಲಯ ಸಮೂಹ ತ್ವರಿತ ಸಾರಿಗೆ ವ್ಯವಸ್ಥೆಗೆ ಪೂರಕವಾಗಲಿದೆ ಎಂದು ವಿವರಿಸಿ–, ಕೈಗಾರಿಕಾ ಔದ್ಯೋಮಿಕ ಬೆಳವಣಿಗೆ ಹಿನ್ನಲೆಯಲ್ಲಿ ಬೆಂಗಳೂರು ನಗರದ ಸುತ್ತಮುತ್ತ ಹಾಗೂ ಅದರ ಪಡಸಾಲೆ ಜಿಲ್ಲೆಗಳಲ್ಲಿ ಹಲವಾರು ಕೈಗಾರಿಕಾ ವಸಹಾತು ಪಸರಿಸಿದೆ. ಸಧ್ಯ ದಾಬಸ್ ಪೇಟೆ ಬಳಿ ಮಲ್ಟಿ ಲಾಜಿಸ್ಟಿಕ್ ಪಾರ್ಕ್ ಬರಲಿದೆ.

 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪಡೆ ಅವರ ಅಕಾಡೆಮಿ-ಮತ್ತು-2000 ಮನೆಗಳ ಸಹಿತ ಟೌನ್-ಶಿಪ್ ಬರಲಿದೆ.  ಈ ಹಿನ್ನಲೆಯಲ್ಲಿ ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ನಿರ್ಮಾಣ  ಮಹತ್ವ ಪಡೆಯಲಿದೆ ಎಂಬ ಬಗ್ಗೆ ಮನವರಿಕೆ ಮಾಡಲಾಯಿತು.

 ಬೆಂಗಳೂರು ಸುತ್ತಮುತ್ತದ  ಕೈಗಾರಿಕಾ ವಸಹಾತುಗಳಿಗೆ ರೈಲು ಸಂಪರ್ಕ ನಿರ್ಮಾಣ- ಪರಿಕಲ್ಪನೆಯ ಮೂಲಕ  ಒ0ದಕ್ಕೊಂದು ಕೈಗಾರಿಕಾ ವಸಹಾತುUಳು ಜೋಡಿಸುವ ಕೊಂಡಿಯಾಗಿ ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ಪರಿಕಲ್ಪನೆ ಅಡಿ ನಿರ್ಮಾಣದ ಅಗತ್ಯತೆ ಇದೆ.

 ಸದರಿ ಕಡತ ಸಂಖ್ಯೆ ಎಂಆರ್.ಎಮ್.161/3012.2016 ರಲ್ಲಿ ರೈಲ್ವೆ ಸಚಿವಾಲಯ ರೈಟ್ಸ್ ಸಂಸ್ಧೆಗೆ ಕಳುಹಿಸಿದೆ. ರೈಟ್ಸ್ ಸಂಸ್ಧೆ ಕರ್ನಾಟಕ ರಾಜ್ಯ ಸರ್ಕಾರ ಅಸಕ್ತಿ ವಹಿಸಿದರೆ ಫಿûೀಸಬಿಲಿಟಿ ವರದಿ ಸಿದ್ದ ಪಡಿಸುವುದಾಗಿ ತಿಳಿಸಿದೆ. ಆದರೆ ರೈಟ್ಸ ಸಂಸ್ಧೆ ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿಯೇ ಇಲ್ಲ . ಆದ್ದರಿಂದ ಅಗತ್ಯಸೂಚನೆ ನೀಡಲು ಕೋರಲು ಚರ್ಚೆ ಮಾಡಲಾಯಿತು.

ತುಮಕೂರುಕುಣಿಗಲ್ಮದ್ದೂರುಮಳವಳ್ಳಿಕೊಳ್ಳೇಗಾಲಚಾಮರಾಜನಗರಹೊಸರೈಲ್ವೆ ಮಾರ್ಗ ಕೋರಿಕೆ :

  ಪ್ರಸ್ತಾವಿತ ತುಮಕೂರು-ಚಾಮರಾಜನಗರ ಹೊಸ ರೈಲ್ವೆ ಮಾರ್ಗ ರಚಿಸಿದರೆ, ಈ ಮಾರ್ಗವು ಬೆಂಗಳೂರು-ಕುಣಿಗಲ್-ಹಾಸನ-ಮಂಗಳೂರು ಹೊಸ ರೈಲ್ವೆ ಮಾರ್ಗ, ಬೆಂಗಳೂರು-ಮೈಸೂರು ರೈಲ್ವೆ ಮಾರ್ಗಕ್ಕೆ ಕೂಡುವುದರ ಜೊತೆಗೆ ಆಂದ್ರ ಪ್ರದೇಶ-ಕರ್ನಾಟಕ- ತಮಿಳುನಾಡು-ಕೇರಳ ರಾಜ್ಯಗಳಿಗೆ ಕೊಂಡಿ ಮಾರ್ಗವಾಗಿ ಮಹತ್ವ ಪಡೆದು ಆ ಪ್ರದೇಶಗಳಿಗೆ ಸಂಪರ್ಕ ಸಾರಿಗೆ ವ್ಯವಸ್ಧೆ ಆಗುತ್ತದೆ ಎಂಬ ಮಾಹಿತಿಯನ್ನು ವಿವರಿಸಿ ರೈಲ್ವೆ ಮಂತ್ರಿಗಳು, ರೈಲ್ವೆ ಮಂಡಳಿ ರೈಲ್ವೆಗೆ ಆಡಳಿತಾತ್ಮಕವಾಗಿ ಟ್ರಾಫಿûಕ್ ಮ್ಯಾನೆಜ್ಮೆಂಟ್‍ಗೆ ಉಪಯೋಗವಾಗುವ ಈ ಯೋಜನೆಯ ಲಾಭವನ್ನು ಮನವರಿಕೆ ಮುಖತ: ವಿವರಿಸಿ ಈ ಮಾರ್ಗ ರಚನೆಗೆ, ಈ ರೈಲ್ವೆ ಇಲಾಖೆ ತಪ್ಪಾಗಿ ಮಾಡಿರುವ ಸಮೀಕ್ಷೆ ಪುನರ್ ಪರಿಶೀಲಿಸಲು  ಚರ್ಚಿಸಲಾಗಿದೆ.

ಬೆಂಗಳೂರುತುಮಕೂರು ನಡುವೆ ರೈಲ್ವೆ ಮಾರ್ಗ ದಲ್ಲಿ ಎಲೆಟ್ರಾನಿಕ್ಸ್ ಅಟೋಮೆಟಿಕ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಯೋಜನೆ

 ಮಾನ್ಯ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರಿ ಪೀಯುಶ್ ಗೋಯಲ್ ಅವರಿಗೆ ಪತ್ರ ಬರೆದು  ಬೆಂಗಳೂರು-ತುಮಕೂರು ನಡುವೆ ರೈಲ್ವೆ ಮಾರ್ಗ ದಲ್ಲಿಬೆಂಗಳೂರು-ತುಮಕೂರು ನಡುವೆ ರೈಲ್ವೆ ಮಾರ್ಗ ದಲ್ಲಿ ಹೆಚ್ಚಿನ ರೈಲ್ವೆ ಸೇವೆ ಒದಗಿಸಲು ಪೂರಕವಾಗಲು ಎಲೆಟ್ರಾನಿಕ್ಸ್ ಅಟೋಮೆಟಿಕ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಯೋಜನೆಗೆ ಒಪ್ಪಿಗೆ ನೀಡಲು ಆಗ್ರಹಿಸಿದ್ದ ಹಿನ್ನಲೆಯಲ್ಲಿ ಈ ಬಗ್ಗೆಯೂ ಚಚಿಸಲಾಗಿದೆ.

ರೈಲ್ವೆ ನಿಲ್ದಾಣ

ತುಮಕೂರು-ಬೆಂಗಳೂರು ಮತ್ತು ತುಮಕೂರು-ತಿಪಟೂರು-ಅರಸೀಕೆರೆ ನಡುವೆ ಬರುವ ಗ್ರಾಮೀಣ ಪ್ರದೇಶದ ರೈಲ್ವೆ ಸ್ಟೇಶನ್ ಗಳಾದ ಗುಬ್ಬಿ, ನಿಟ್ಟೂರು, ಬಾಣಸಂದ್ರ, ಅಮ್ಮಸಂದ್ರ, ಅರಳಗುಪ್ಪೆ ಮತ್ತು ಈ ಮಾರ್ಗದಲ್ಲಿ ಬರುವ ಇತರೆ ನಿಲ್ದಾಣದಲ್ಲಿ ನಿಲ್ಲುವ ಪ್ಯಾಸೆಂಜರ್ ರೈಲ್ವು ಸೇವೆ ಗಳನ್ನು ಕೋವಿಡ್19 ಸಂದರ್ಭದಲ್ಲಿ ನಿಲ್ಲಿಸಿದ್ದು, ಅವುಗಳನ್ನು ಪುನ: ಸೇವೆಗಳನ್ನು ಚಾಲನೆಗೆ ತರಲು ಚರ್ಚಿಸಲಾಯಿತು.

 ಒಂದು ವೇಳೆ ಆಡಳಿತಾತ್ಮಕ ಕರಣದಿಂದ ತೊಂದರೆ ಇದ್ದರೆ, ಸದ್ಯಕ್ಕೆ ತುಮಕೂರು-ತಿಪಟೂರು-ಅರಸಿಕೆರೆ-ಹಾಸನ ನಡುವೆ ಎಲ್ಲಾರೈಲ್ವೆ ನಿಲ್ದಾಣದಲ್ಲಿ ನಿಲ್ಲುವ 2 ರಿಂದ3  ಟ್ರಿಪ್ ಡೆಮೂ ರೈಲ್ವೆ ಸೇವೆ ಒದಗಿಸಲು ಹುಬ್ಬಳ್ಳಿ ವಲಯ ಕಛೇರಿ, ಬೆಂಗಳೂರು ಮತ್ತು ಮೈಸೂರು ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಮಾಲೋಚನೆ ನಡೆಸಲಾಯಿತು.