9th October 2024
Share

ಮೋದಿಯವರು ಮಾತ್ರ ಈಗಾಗಲೇ ಚಿಂತನೆ ನಡಸಿದ್ದಾರೆ

TUMAKURU:SHAKTHIPEETA FOUNDATIN

 ಕೊರೊನಾ ಮಹಾಮಾರಿ  ರುದ್ರ ನರ್ತನ ಇನ್ನೂ ಈಗಲೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ, ಬಹುಷಃ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನತಾ ಕರ್ಫ್ಯೂಗಿಂತ ಒಂದು ದಿವಸ ಮುಂಚೆ ನಮ್ಮ ತುಮಕೂರು ಎಸ್.ಪಿ. ಶ್ರೀ ವಂಶಿಕೃಷ್ಣರವರು ಒಂದು ಮಿಟಿಂಗ್ ಮಾಡಿ ಕೈಗೊಂಡ ಕೊರೊನಾ ಜಿಐಎಸ್ ಲೇಯರ್’ ತೀರ್ಮಾನ ವಿಶ್ವದ ಗಮನ ಸೆಳೆದಿದೆ. ಯಾರದೋ ಐಡಿಯಾ ಯಾರದೋ ಹೆಸರು ಕೃತಿಚೌರ್ಯ, ಇರಲಿ ಇಲ್ಲಿ ಅದು ಮುಖ್ಯವಲ್ಲ ಕೆಲಸಕ್ಕೆ ಆಧ್ಯತೆ ಆದರೂ ಗಮನಿಸಿ ಸಾರ್.

 ನಿಮಗಿದೋ ಗೊತ್ತೆ ? ಇ-ಪೇಪರ್‌ನ ಕೊರೊನಾ ವಿಭಾಗದಲ್ಲಿ ಬರೆದಿರುವ ಸಂಚಿಕೆಗಳನ್ನು ಗಮನಿಸಿದಾಗ ಇನ್ನೂ ಇದೂವರೆಗೂ ಎಲ್ಲಾ ರಾಜಕೀಯ ಪಕ್ಷಗಳು ಆ ವಿಚಾರಗಳಲ್ಲಿಯೇ ಗಿರಕಿಹೊಡೆಯುತ್ತಿವೆ. ತಾವು ಇಡೀ ದೇಶಕ್ಕೆ ಮಾದರಿಯಾಗಿ ಮೋದಿಜಿಯವರಿಗಿಂತ ಮೊದಲೇ ಲಾಕ್‌ಡೌನ್ ಮಾಡಿ ತಮ್ಮ ಪ್ರಭುದ್ಧತೆ ಮೆರೆದಿದ್ದೀರಿ’  ನಿಮಗಿದು ಗೊತ್ತೆ? ಒಂದು ದಿನ ಮುಂಚಿತವಾಗಿಯೇ ಇನ್ನೂ ಲಾಕ್‌ಡೌನ್ ಏಕೆ ವಿಳಂಭ’ ಎಂದು ಪ್ರಶ್ನೆ ಮಾಡಿತ್ತು ಗಮನಿಸಿ ಸಾರ್.

  ದೇಶವೆಲ್ಲಾ ಈಗ ಸೀಲ್ ಡೌನ್ ಮಾಡಿ ಮನೆ ಮನೆ ಬಾಗಲಿಗೆ ಅಗತ್ಯವಸ್ತು ಸರಬರಾಜು’ ಮಾಡಲು ಚಿಂತನೆ ನಡೆಸಿದೆ, ಆರಂಭ ಮಾಡಿದೆ ತಾವು ಸಹ ಆರಂಭಿಸಿದ್ದೀರಿ ನಿಮಗಿದು ಗೊತ್ತೆ? ತುಮಕೂರಿನಲ್ಲಿ ಹೀಗೆ ಮಾಡಿ ಎಂದು ಯಾವಾಗ ಹೇಳಿದೆ ಗಮನಿಸಿ ಸಾರ್.

ಇದೆಲ್ಲಾ ಸುಮ್ಮನೆ ಹಾಗೆ ಕ್ಷಮಿಸಿ ಸಾರ್,

 ’ನಮ್ಮ ಕರ್ನಾಟಕ ರಾಜ್ಯ ಸರ್ಕಾರ’ ಅತ್ಯಂತ ಪ್ರಮುಖವಾಗಿ ಇಡೀ ವಿಶ್ವಕ್ಕಿಂತ ವಿಭಿನ್ನವಾದ ಕೆಲಸ ಮಾಡಲು ಆರಂಭಿಸಲಿ ಎನ್ನುವುದು ನಮ್ಮ ಅನಿಸಿಕೆ, ನಾವು ಸಣ್ಣವರು ನಿಮಗೆ ಸಲಹೆ ಕೊಡುವಷ್ಟು ಅರ್ಹತೆ ಇಲ್ಲದಿರಬಹುದು ಸಾರ್. ಆದರೂ ಸುಮ್ಮನೆ ಇರಲು ಆಗುತ್ತಿಲ್ಲ, ಯಾವತ್ತಾದರೂ ಯಾರಾದರೂ ಬಳಸಿಕೊಳ್ಳಲಿ ಎನ್ನುವ ಚಟದಿಂದ ಹೇಳಲೇ ಬೇಕಿದೆ ಗಮನಿಸಿ ಸಾರ್.

 ತಾವು ಈಗಾಗಲೇ 2020-21  ನೇ ಆಯವ್ಯಯದಲ್ಲಿ ಎರಡು ಅತ್ಯಂತ ಪ್ರಮುಖ ಯೋಜನೆಗಳನ್ನು ಪ್ರಕಟಿಸಿದ್ದೀರಿ ಸಾರ್. ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತಮಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದ್ದು ಹಲವಾರು ವಿಚಾರಗಳ ಜೊತೆಗೆ ಈ ಎರಡು ಗ್ರಾಮ-1 ಮತ್ತು ಜಲಗ್ರಾಮ ಕ್ಯಾಲೆಂಡರ್’  ಯೋಜನೆಗಳನ್ನು ಸೇರ್ಪಡೆ ಮಾಡಿರುವುದಕ್ಕೆ ಗಮನಿಸಿ ಸಾರ್. 

 ಇದೂವರೆಗೂ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ’ ಹಿರಿಯರನ್ನು ಗ್ರಾಮಗಳಲ್ಲಿ ಬಿಟ್ಟು ದುಡಿಯಲು ಶಕ್ತಿ ಇರುವವರು ಎಲ್ಲಾ ಪಟ್ಟಣ ಸೇರಿದ್ದಾರೆ. ಅತಿ ಬುದ್ಧಿವಂತರೆಲ್ಲಾ ’ದೇಶ ಬಿಟ್ಟು ವಿದೇಶಕ್ಕೆ’ ಹಾರಿದ್ದಾರೆ. ಎಂಬ ಮಾತುಗಳು ಕೇಳಿಬರುತ್ತಿದ್ದವೂ. ಈಗ ಸ್ವಲ್ಪ ಬದಲಾವಣೆ’ಯನ್ನು ಕೊರೊನಾ  ಮಹಾಮಾರಿ ಮಾಡಿದ್ದಾಳೆ ಗಮನಿಸಿ ಸಾರ್. 

  ಇವರಿಗೆ ಗ್ರಾಮಗಳಲ್ಲಿ ದುಡಿಯಲು ಅವಕಾಶ ಕಲ್ಪಿಸಬೇಕು, ಮೊದಲು ಇವರೆಲ್ಲಾ ಮನುಷ್ಯರು’ ಎಂಬ ಕನಿಷ್ಟ ಗೌರವ ಸಿಗಬೇಕು ಅಂಥಹ ವಾತಾವರಣ ಸೃಷ್ಟಿ ಮಾಡುವ ಕಸರತ್ತನ್ನು ಈಗಿಂದಲೇ ಆರಂಭಿಸುವುದು ಅಗತ್ಯವಾಗಿದೆ ಇಲ್ಲವಾದರೆ ಮತ್ತೂ ಊರು ಬಿಡಲೇ ಬೇಕಾಗುವುದು  ಗಮನಿಸಿ ಸಾರ್. 

  ಗ್ರಾಮಗಳಲ್ಲಿ ಶೇಕಡ 95  ಬಿಪಿಎಲ್ ಕಾರ್ಡ್ ಇವೆ. ಬಹುತೇಕ ಮಹಾತ್ಮ ಗಾಂಧಿ ನರೇಗಾ ಜಾಬ್ ಕಾರ್ಡ್ ಇವೆ. ಇವರಲ್ಲಿ ಕನಿಷ್ಟ 9 ಜನರ ಒಂದು ಗ್ರೂಪ್ ಮಾಡಿ ಅಥವಾ ಗ್ರಾಮಪಂಚಾಯತ್ ಗೊಂದು ಎಫ್.ಪಿ.ಓ ರಚನೆ ಅಥವಾ ಇರುವ ಎಲ್ಲಾ ವಿಧವಾದ ಸಂಘಟನೆಗಳು/ಫೆಡ್ ರೇಷನ್ ಬಳಸಿಕೊಂಡು   ಗ್ರಾಮ-1 ಮತ್ತು ಜಲಗ್ರಾಮ ಕ್ಯಾಲೆಂಡರ್’ ಯೋಜನೆ ಮತ್ತು ಕೋವಿಡ್-19’ ಸಮೀಕ್ಷೆ ವರದಿ ನೀಡುವ ಟ್ರೈನಿಂಗ್’ ನಂತರ ಮನೆಬಾಗಿಲಿಗೆ ಸೇವೆ ಸಲ್ಲಿಸುವ ತಂಡ ಇದಾಗಲಿ, ಇವರಿಗೆ ನರೇಗಾ ಕೂಲಿ’ ಕೊಡಬಹುದು ಗಮನಿಸಿ ಸಾರ್. 

  ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯನ್ನು ಆಯ್ಕೆ ಮಾಡಬಹುದು. ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ರೂ ಖರ್ಚುಮಾಡಿ ’ಐಸಿಸಿಸಿ’ ಮಾಡಿ ಇನ್ನೂ ನೊಣ ಹೊಡೆಯುತ್ತಿದ್ದಾರೆ. ಈಗ ಕಡೇ ಪಕ್ಷ ಕೊರೊನಾ ಜಿಐಎಸ್ ಲೇಯರ್’ ನ್ನು ಜಿಲ್ಲಾ ಮಟ್ಟದಲ್ಲಿ ಮಾಡಿ ವಿಶ್ವದ ಗಮನಸೆಳೆದಿದ್ದಾರೆ’  ಅವರಿಗೂ ‘ಬೆನ್ನು ತಟ್ಟೋಣ’ ಇವರ ಸಹಕಾರದೊಂದಿಗೆ ಗ್ರಾಮೀಣ ಮತ್ತು ನಗರಗಳ ಎರಡು ಪ್ರದೇಶಗಳ ಸಮೀಕ್ಷೆ ಮಾಡಿ ಮೂರು ಯೋಜನೆಗಳ ಮಾಹಿತಿಯ ಜಿಐಎಸ್ ಲೇಯರ್’ ಮಾಡಬಹುದು ನಂತರ ಪ್ರತಿಯೊಂದು ಯೋಜನೆಯ ‘ಅನಾಲೀಸಿಸ್’ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಗಮನಿಸಿ ಸಾರ್. 

 ತುಮಕೂರು ಜಿಲ್ಲಾಪಂಚಾಯತ್ ಆವರಣದಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ನಿರ್ಮಿಸಿರುವ ಸಂಪನ್ಮೂಲ ಕೇಂದ್ರದ ನೂತನ ಕಟ್ಟಡ’ ನಿರ್ಮಾಣವಾಗಿ ಉದ್ಘಾಟನೆಯಾಗದೆ ಧೂಳು ತಿನ್ನುತ್ತಿದೆ ಅಥವಾ ಗುಬ್ಬಿಯಲ್ಲಿ ‘ಹೆಚ್.ಎ.ಎಲ್’ ಘಟಕದ ನೂತನ ಕಟ್ಟಡಗಳು ಧೂಳು ತಿನ್ನುತ್ತಿವೆ ಕೇಂದ್ರದ ಅನುಮತಿ ಪಡೆದು ಇದನ್ನು ಜಿಲ್ಲಾ ಮಟ್ಟದ ತಾತ್ಕಾಲಿಕ ಕೇಂದ್ರ ಸ್ಥಾನವಾಗಿ ಮಾಡಬಹುದು ಗಮನಿಸಿ ಸಾರ್. 

ಕೋವಿಡ್-19 :- ಗ್ರಾಮದ ಪ್ರತಿ ಕುಟುಂಬ ಮತ್ತು ವ್ಯಕ್ತಿಯ ಕೊರೊನಾ ಅಲ್ಲದೆ ಎಲ್ಲಾ ರೋಗಗಳ ಮಾಹಿತಿ ಸಂಗ್ರಹ ಮಾಡಿ ಜಿಐಎಸ್ ಲೇಯರ್’ ಮಾಡುವ ಮೂಲಕ ರೋಗಿಗಳಿಗೆ ಅಗತ್ಯವಿರುವ ಸೇವೆ ನಿರ್ಧಿಷ್ಟ ಅವಧಿಯಲ್ಲಿ ಮನೆಬಾಗಿಲಿಗೆ ಗಮನಿಸಿ ಸಾರ್.

ಗ್ರಾಮ-1:- ಗ್ರಾಮದ ಪ್ರತಿ ಕುಟುಂಬ ಮತ್ತು ವ್ಯಕ್ತಿಯ ಮುಂದಿನ ಬದುಕಿನ ಯೋಜನೆಗಳ ಗುರಿಗಳನ್ನು, ಅವರಿಗೆ ಸರ್ಕಾರದಿಂದ ಏನೂ ನೀರಿಕ್ಷೆ ಮಾಡುತ್ತಿದ್ದಾರೆ, ಅವರು ಬೆಳೆಯುವ ಬೆಳೆಗಳ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಆ ಗ್ರಾಮದ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಅದಲು-ಬದಲು’ ಮಾಡುವ ಮೂಲಕ ಬಳಸಿ, ಉಳಿದ ಉತ್ಪನ್ನಗಳ ಬೆಳೆ, ಮೌಲ್ಯವರ್ಧಿತ ಮತ್ತು ಮಾರಾಟಕ್ಕೆ ಅವರಿಗೆ ಅಗತ್ಯವಾಗಿ ಬೇಕಾಗಿರುವ (ನೀಡ್ ಬೇಸ್ಡ್) ಸೌಲಭ್ಯಗಳ ಮಾಹಿತಿ ಸಂಗ್ರಹ ಮಾಡುವ ಮೂಲಕ ಜನತೆಗೆ ಅಗತ್ಯವಿರುವ ಸೇವೆ ನಿರ್ಧಿಷ್ಟ ಅವಧಿಯಲ್ಲಿ ಮನೆಬಾಗಿಲಿಗೆ ಗಮನಿಸಿ ಸಾರ್.

ಜಲಗ್ರಾಮ ಕ್ಯಾಲೆಂಡರ್:- ಜಲಗ್ರಾಮ ಕ್ಯಾಲೆಂಡರ್ ಇದನ್ನು ಬದಲಾವಣೆ ಮಾಡಿ ಡಿಜಿಟಲ್ ಗ್ರಾಮ ಕ್ಯಾಲೆಂಡರ್’ ಮಾಡಿ ಗ್ರಾಮದ ಪ್ರತಿ ಸರ್ವೇನಂಬರ್‌ಗಳಲ್ಲಿ, ಪ್ರತಿ ಕುಟುಂಬ ಅಥವಾ ವ್ಯಕ್ತಿ ಏನು ಬೆಳೆ ಬೆಳೆಯಲು ಬಯಸುತ್ತಾನೆ, ಅವರಿಗೆ ಅಗತ್ಯವಿರುವ ನೀರು ಎಷ್ಟು, ಹೇಗೆ ಕೊಡಬಹುದು, ಏನು ಕೈಗಾರಿಕೆ ಮಾಡಲು ಬಯಸುತ್ತಾನೆ ಅಥವಾ ಯಾರಾದರೂ ಬಂದು ಏನಾದರೂ ಮಾಡಿದಲ್ಲಿ ‘ಪಾವಗಡ ಸೋಲಾರ್ ಮಾದರಿಯಲ್ಲಿ ಜಮೀನು ಬಾಡಿಗೆ ‘ನೀಡಲು ಬಯಸುತ್ತಾನೆ.

  ಅವರ ಯೋಜನೆಗಳಿಗೆ ಸರ್ಕಾರದಿಂದ ಏನೂ ನೀರಿಕ್ಷೆ ಮಾಡುತ್ತಿದ್ದಾರೆ, ಅವರಿಗೆ ಬೇಕಾಗಿರುವ (ನೀಡ್ ಬೇಸ್ಡ್) ಸೌಲಭ್ಯಗಳ ಮಾಹಿತಿ ಸಂಗ್ರಹ ಮಾಡುವ ಜೊತೆಗೆ ಆ ಗ್ರಾಮದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವವರ ಮಾಹಿತಿಯನ್ನು ಮಾಡುವ ಮೂಲಕ ಜನತೆಗೆ ಅಗತ್ಯವಿರುವ ಸೇವೆ ನಿರ್ಧಿಷ್ಟ ಅವಧಿಯಲ್ಲಿ ಮನೆಬಾಗಿಲಿಗೆ ಗಮನಿಸಿ ಸಾರ್.

 ಈ ಮೂರು ಯೋಜನೆಗಳ ಅಗತ್ಯದ ಬಗ್ಗೆ ಮನೆಬಾಗಿಲಿಗೆ ಆನ್ ಲೈನ್ ಮೊಬೈಲ್ ಬ್ಯಾಂಕಿಗ್, ಮೊಬೈಲ್ ದಿನಸಿ, ತರಕಾರಿ, ಹಣ್ಣು ಇತ್ಯಾದಿ ಅಂಗಡಿ, ಮೊಬೈಲ್ ಆಲ್ ಐಟಮ್ಸ್, ಮೊಬೈಲ್ ಡೇಟಾ/ದಾಖಲೆ, ಹೀಗೆ ಎಲ್ಲಾ ವಿಧವಾದ ಸೇವೆ ಸಲ್ಲಿಸುವ, ಎಂಪಿಸಿಎಸ್ ಮಾದರಿಯಲ್ಲಿ ಫಾರ್‌ವಾರ್ಡ್ ಮತ್ತು ಬ್ಯಾಕ್ ವಾರ್ಡ್ ವ್ಯವಸ್ಥೆ ಮಾಡಿದರೆ   ಲಾಕ್ ಡೌನ್ ಮತ್ತು ಸೀಲ್ ಡೌನ್’ ಯಶಸ್ವಿಯಾದರೆ ವಿಶ್ವಕ್ಕೆ ಮಾದರಿಯಾಗಲಿದೆ. ನಿರಂತರವಾಗಿ ಈ ಸೇವೆ ಮುಂದುವರೆಸ ಬಹುದು ಉದ್ಯೋಗದ ಜೊತೆಗೆ ಸಾಕಷ್ಟು ಸಮಯ ಉಳಿಯಲಿದೆ, ಇಲ್ಲಿ ಅಕೌಂಟಬಲಿಟಿ, ಪಾರದರ್ಶಕತೆ, ಗುಣಮಟ್ಟ ಮುಖ್ಯ ಗಮನಿಸಿ ಸಾರ್.

 ಏನಾದರೂ ಮಾಡಿ ’ಮೊಬೈಲ್ ಲಂಚ’ ಮಾತ್ರ ಇರಬಾರದು. ಗ್ರಾಮಗಳಲ್ಲಿ ಯುವ ಜನಾಂಗ ಇರಬೇಕಾದರೆ ಈ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವೇದಿಕೆಯಲ್ಲಿ ಭಾಷಣ ಮಾಡಿ ’ಚಟ ತೀರಿಸಿಕೊಳ್ಳಬಹುದು’ ಅಷ್ಟೆ ಗಮನಿಸಿ ಸಾರ್.

ತಪ್ಪಿದ್ದಲ್ಲಿ ಕ್ಷಮಿಸಿ ಸಾರ್.